Malenadu Mitra
ರಾಜ್ಯ ಶಿವಮೊಗ್ಗ ಸೊರಬ

ಬಡವರ ಭೂಮಿ ತೆರವಿಗೆ ಕಾರಣರಾದ ಶಾಸಕರನ್ನು ಸೋಲಿಸಿ, ಪ್ರತಿಭಟನಾ ಮೆರವಣಿಗೆಯಲ್ಲಿ ಮಾಜಿ ಶಾಸಕ ಮಧು ಬಂಗಾರಪ್ಪ ಆಕ್ರೋಶ

ಸೊರಬ: ಬಗರ್ ಹುಕುಂ ಸಾಗುವಳಿದಾರರನ್ನು ಒಕ್ಕಲೆಬ್ಬಿಸಲು ಮುಂದಾಗಿರುವ ಶಾಸಕ ಕುಮಾರ್ ಬಂಗಾರಪ್ಪ ಅವರನ್ನು ಚುನಾವಣೆಯಲ್ಲಿ ಸೋಲಿಸುವ ಮೂಲಕ ರೈತರು ಸೇಡು ತೀರಿಸಿಕೊಳ್ಳಬೇಕು ಎಂದು ಕೆಪಿಸಿಸಿ ಹಿಂದುಳಿದ ವಿಭಾಗದ ಅಧ್ಯಕ್ಷ ಮಧು ಬಂಗಾರಪ್ಪ ತಿಳಿಸಿದರು.
ಸೋಮವಾರ ಪಟ್ಟಣದಲ್ಲಿ ತಾಲ್ಲೂಕಿನ ತಾಳಗುಪ್ಪ ಗ್ರಾಮದ ಬಗರ್‌ಹುಕುಂ ರೈತರ ಜಮೀನು ತೆರವುಗೊಳಿಸಿರುವುದನ್ನು ವಿರೋಧಿಸಿ ಆಯೋಜಿಸಿದ್ದ ಬೃಹತ್ ಪ್ರತಿಭಟನಾ ಮೆರವಣಿಗೆ ಉದ್ದೇಶಿಸಿ ಅವರು ಮಾತನಾಡಿದರು.
ಕಳೆದ ೧೧ ವರ್ಷಗಳ ಹಿಂದೆ ತಾಲ್ಲೂಕಿನ ತಾಳಗುಪ್ಪದಲ್ಲಿ ರೈತರ ಬಗರ್ ಹುಕುಂ ಜಮೀನು ತೆರವಿಗೆ ಸರ್ಕಾರ ಮುಂದಾಗಿತ್ತು. ಅಂದು ರೈತರಿಗೆ ಬೆಂಬಲವಾಗಿ ನಿಂತು ಶಿವಮೊಗ್ಗದವರೆಗೆ ಪಾದಯಾತ್ರೆ ನಡೆಸಿ ಸರ್ಕಾರಕ್ಕೆ ಎಚ್ಚರಿಕೆ ನೀಡಲಾಗಿತ್ತು. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಪುನಃ ಸಾಗುವಳಿದಾರರನ್ನು ಒಕ್ಕಲೆಬ್ಬಿಸಲು ಮುಂದಾಗಿದೆ. ಶಾಸಕ ಕುಮಾರ್ ಬಂಗಾರಪ್ಪ ತೆರವು ಸ್ಥಳಕ್ಕೆ ಭೇಟಿ ನೀಡಿ ಭೂಮಿ ತೆರವುಗೊಳಿಸದಂತೆ ಅಧಿಕಾರಿಗಳ ಎದುರು ರೈತರಿಗೆ ನಾಟಕೀಯ ಭರವಸೆ ನೀಡಿ ಪುನಃ ಅರಣ್ಯಾಧಿಕಾರಿಗಳ ಮೇಲೆ ಒತ್ತಡ ಹೇರಿ ೬ ಜನ ರೈತರ ಒಟ್ಟು ೨೭ ಎಕರೆಯಲ್ಲಿ ಬೆಳೆಯಲಾಗಿದ್ದ ಅಡಿಕೆ ತೋಟವನ್ನು ನಾಶಪಡಿಸಿರುವುದರ ಹಿಂದೆ ಶಾಸಕರ ಕುಮ್ಮಕ್ಕು ಇದೆ. ಬಡ ರೈತರು ಬೀದಿಗೆ ಬರಲು ಕುಮಾರ್ ಬಂಗಾರಪ್ಪ ಅವರೆ ನೇರ ಹೊಣೆಯಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.


ಸಂತ್ರಸ್ಥ ಮಹಿಳೆಗೆ ನೆರವು:

ತೋಟ ನಾಶವಾಗಿದ್ದ ಸಂತ್ರಸ್ತ ರೈತ ಮಹಿಳೆ ಗಂಗಮ್ಮ ಈಚೆಗೆ ಪತಿಯನ್ನು ಕಳೆದುಕೊಳ್ಳುವ ಜತೆಗೆ ಭೂಮಿ ಕಳೆದುಕೊಂಡು ಆರ್ಥಿಕ ಸಂಕಷ್ಟ ದಲ್ಲಿದ್ದರು. ಪ್ರತಿಭಟನೆಯಲ್ಲಿ ಆಕೆಗೆ ನೆರವು ಕೇಳಿದಾಗ ೨.೫ ಲಕ್ಷಕ್ಕೂ ಅಧಿಕ ಹಣ ಸಂಗ್ರಹವಾಯಿತು. ಮಧುಬಂಗಾರಪ್ಪ ಅವರು ವೈಯಕ್ತಿಕವಾಗಿ ಒಂದು ಲಕ್ಷ ರೂ. ನೆರವು ನೀಡಿದರು.
ಕಾಂಗ್ರೆಸ್ ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ರಮೇಶ್,, ಕೆಪಿಸಿಸಿ ಹಿಂದುಳಿದ ವರ್ಗಗಳ ಸಂಯೋಜಕ ಜಿ.ಡಿ. ಮಂಜುನಾಥ್ ವಿಶ್ವನಾಥ್ ಕಾಶಿ ಗಣಪತಿ ಹುಲ್ತಿಕೊಪ್ಪ ಎಂ ಡಿ ಶೇಖರ್ ಕೆ.ಮಂಜುನಾಥ್, ಅಣ್ಣಪ್ಪ, ಸದಾನಂದಗೌಡ, ಕೆ ವಿ ಗೌಡ ಕೆ ಪಿ ರುದ್ರಗೌಡ ಎಲ್ ಜಿ ರಾಜು ಸುರೇಶ್ ಹಾವಣ್ಣನವರ್ ರಮೇಶ್ ಇದ್ದರು.

Ad Widget

Related posts

ನೀ..ಹೀಂಗಾ..ನೋಡಬ್ಯಾಡ ನನ್ನ…

Malenadu Mirror Desk

ಮೊಸರಲ್ಲಿ ಕಲ್ಲು ಹುಡುಕುವವರು ಯಾರು ಗೊತ್ತಾ ?

Malenadu Mirror Desk

ಸುಸಂಸ್ಕೃತ ಶಿಕ್ಷಣ ದೇಶಕ್ಕಿರುವ ಅಗತ್ಯ
ಎನ್ ಇಎಸ್ ಹಬ್ಬ’ ಉದ್ಘಾಟಿಸಿ ಪ್ರೊ. ವೆಂಕಟೇಶ್ವರುಲು ಹೇಳಿಕೆ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.