ತೀರ್ಥಹಳ್ಳಿ : ಭ್ರಷ್ಟ ಬಿಜೆಪಿಯ ಧನಶಕ್ತಿಯ ಮುಂದೆ ನಾವು ಜನಶಕ್ತಿ ಬಳಸಿ ಕಾಂಗ್ರೆಸ್ ಪಕ್ಷ ಗೆಲ್ಲಿಸುತ್ತೇವೆ.ಈ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕಿಮ್ಮನೆ ರತ್ನಾಕರ್ ಗೆಲುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಕಾಂಗ್ರೆಸ್ ಮುಖಂಡ ಆರ್.ಎಂ.ಮಂಜುನಾಥ್ ಗೌಡ ಹೇಳಿದರು.
ಪಟ್ಟಣದ ಬೆಟ್ಟಮಕ್ಕಿಯ ನಿವಾಸದಲ್ಲಿ ತೀರ್ಥಹಳ್ಳಿ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಘೋಷಿತ ಅಭ್ಯರ್ಥಿ ಕಿಮ್ಮನೆ ರತ್ನಾಕರ್‌ರೊಂದಿಗೆ ಜಂಟಿ ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡಿದರು.
ಈ ಬಾರಿ ಕ್ಷೇತ್ರದಲ್ಲಿ ಜ್ಯಾತ್ಯಾತೀತ ಮತಗಳು ವಿಭಜನೆ ಆಗದಂತೆ ನಾವು ಒಂದಾಗಿ ಕಾರ್ಯನಿರ್ವಹಿಸಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸೋಣ,ತೀರ್ಥಹಳ್ಳಿ ಕಾಂಗ್ರೇಸ್ ಪಕ್ಷದಲ್ಲಿ ಯಾವುದೇ ಗೊಂದಲ,ಭಿನ್ನಾಭಿಪ್ರಾಯ ಇಲ್ಲ, ಸಣ್ಣ,ಪುಟ್ಟ ಭಿನ್ನಾಭಿಪ್ರಾಯಗಳಿರಬಹುದು ಅದನ್ನು ಬಗೆಹರಿಸಿಕೊಂಡು ಪ್ರೀತಿ,ವಿಶ್ವಾಸದೊಂದಿಗೆ ಒಂದಾಗಿ ನಮ್ಮ ಪಕ್ಷವನ್ನು ಗೆಲ್ಲಿಸಲಿದ್ದೇವೆ.ಟಿಕೆಟ್ ಘೋಷಣೆ ಮುನ್ನ ಭಿನ್ನಾಭಿಪ್ರಾಯ ಸಹಜ ಅದು ಈಗ ಬಗೆಹರಿದಿದೆ. ನಾವು ಒಂದಾಗಿ ಕಿಮ್ಮನೆಯವರನ್ನು ಗೆಲ್ಲಿಸಲಿದ್ದೇವೆ ಎಂದರು.
ಈ ಕ್ಷೇತ್ರದಲ್ಲಿ ಬಿಜೆಪಿಗೆ ಅಭ್ಯರ್ಥಿ ಘೋಷಣೆ ಆಗಿಲ್ಲ. ನಮಗೆ ಬಿಜೆಪಿ ಪಕ್ಷವೇ ಪ್ರಬಲ ಸ್ಪರ್ಧಿ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಿತ್ರನಟ ಸುದೀಪ್ ಮೂಲಕ ಮತ ಯಾಚಿಸಲು ಹೊರಟಿದ್ದಾರೆ.
ಈ ಕ್ಷೇತ್ರದ ಶಾಸಕರು ಗೃಹ ಮಂತ್ರಿಯಾಗಿ ಏನು ಅಭಿವೃದ್ಧಿ ಮಾಡಿದ್ದಾರೆ.ಕಳಪೆ ಕಾಮಗಾರಿಗಳು ಹೆಚ್ಚಾಗಿದೆ,ಇವರು ಗೃಹ ಮಂತ್ರಿಯಾದ ಮೇಲೆ ಹಲವು ಬಿಜೆಪಿ ಮುಖಂಡರು ಗೃಹ ಮಂತ್ರಿಗಳಾಗಿದ್ದಾರೆ.ಪೊಲೀಸ್ ಇಲಾಖೆ,ಅರಣ್ಯ ಇಲಾಖೆ,ಕಂದಾಯ ಇಲಾಖೆಯನ್ನು ದುರ್ಬಳಕೆ ಮಾಡಿಕೊಂಡ ಶಾಸಕರು ತೀರ್ಥಹಳ್ಳಿ ಕ್ಷೇತ್ರದ ಸಂಸ್ಕಾರ,ಸಂಸ್ಕೃತಿ,ಘನತೆಗೆ ಅಗೌರವ ತಂದಿದ್ದಾರೆ ಎಂದರು.
ಮಾಜಿ ಸಚಿವ ಕಿಮ್ಮನೆ ರತ್ನಾಕರ ಮಾತನಾಡಿ, ನಾನು ಶಿಕ್ಷಣ ಸಚಿವನಾಗಿದ್ದಾಗ ಶಿಕ್ಷಕರ ನೇಮಕಾತಿಯಲ್ಲಿ ಅಕ್ರಮ ನೆಡೆದಿದೆ ಎನ್ನುವ ಜ್ಞಾನೇಂದ್ರ ರವರು ತಮ್ಮದೇ ಸರ್ಕಾರವಿತ್ತಲ್ಲ ಸಿಬಿಐ ತನಿಖೆ ಮಾಡಿಸಬಹುದಿತ್ತಲ್ವ.ನಾನು ಶಾಸಕನಾಗಿದ್ದಾಗ ಮಂಜೂರಾದ ಮಹಿಷಿ,ಕುಡ್ನೆಲ್ಲಿ,ಚಂಗಾರು ಸೇತುವೆ ಇನ್ನು ಏಕೆ ಉದ್ಘಾಟನೆಗೊಂಡಿಲ್ಲ ಎಂದು ಪ್ರಶ್ನಿಸಿದರು.
ಈ ಗೋಷ್ಟಿಯಲ್ಲಿ ಕೆಪಿಸಿಸಿ ಪ್ರಚಾರ ಸಮಿತಿಯ ಕಲಗೋಡು ರತ್ನಾಕರ್ ,ಕಡ್ತೂರು ದಿನೇಶ್,ಜಿ.ಎಸ್.ನಾರಾಯಣ ರಾವ್,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕೆಸ್ತೂರು ಮಂಜುನಾಥ್, ಮುಡುಬ ರಾಘವೇಂದ್ರ,ಪ.ಪಂ.ಅಧ್ಯಕ್ಷೆ ಸುಶೀಲಾ ಶೆಟ್ಟಿ,ಯುವ ಕಾಂಗ್ರೆಸ್ ರಾಜ್ಯ ವಕ್ತಾರ ಆದರ್ಶ್ ಹುಂಚದ ಕಟ್ಟೆ,ಅಮರನಾಥ ಶೆಟ್ಟಿ,ರಾಘವೇಂದ್ರ ಮುಂತಾದವರಿದ್ದರು.
ಈ ಬಾರಿಯ ಚುನಾವಣೆ ಕಾಂಗ್ರೆಸ್ ಪಕ್ಷದ ಚುನಾವಣಾ ಸಮಿತಿಯ ಆದೇಶದಂತೆ ಆರ್.ಎಂ.ಮಂಜುನಾಥ್ ಗೌಡರ ನೇತೃತ್ವದಲ್ಲಿ ನಡೆಯಲಿದೆ. ಏಪ್ರಿಲ್೧೯ರಂದು ನಾನು ನಾಮಪತ್ರಸಲ್ಲಿಸಲಿದ್ದು,ಅಂದು ಪಕ್ಷದ ಮುಖಂಡರಾದ ಕಾಗೋಡು ತಿಮ್ಮಪ್ಪ,ಮಧು ಬಂಗಾರಪ್ಪ,ಬೇಳೂರು ಗೋಪಾಲಕೃಷ್ಣ ಮುಂತಾದವರು ಆಗಮಿಸಲಿದ್ದಾರೆ. ಮೊದಲಿಗೆ ನಾನು ಆರ್.ಎಂ.ಮಂಜುನಾಥ್ ಗೌಡರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಒಳ್ಳೆಯ ನಡುವಳಿಕೆ, ಸಮಚಿತ್ತದಿಂದ ಒಂದಾಗಲು ಸಹಕರಿಸಿದ್ದಾರೆ. ನಮ್ಮಲ್ಲಿ ಯಾವುದೇ ಸಮಸ್ಯೆ, ಗೊಂದಲಗಳಿಲ್ಲ. ಒಂದಾಗಿ ಚುನಾವಣೆಯಲ್ಲಿ ಸಾಗುತ್ತೇವೆ. ಕ್ಷೇತ್ರದ ಶಾಸಕರು ಗೃಹ ಮಂತ್ರಿಗಳಾಗಿ ಬರೀ ಸುಳ್ಳುಗಳನ್ನು ಅಭಿವೃದ್ಧಿಯ ಹೆಸರಲ್ಲಿ ಹೇಳುತ್ತಿದ್ದಾರೆ.
– ಕಿಮ್ಮನೆ ರ್‍ತತ್ನಾಕರ, ಕಾಂಗ್ರೆಸ್ ಅಭ್ಯರ್ಥಿ