Malenadu Mitra
ರಾಜ್ಯ ಶಿವಮೊಗ್ಗ

ಪುತ್ರವ್ಯಾಮೋಹ ಮತ್ತು ನಿಯಂತ್ರಣವಿಲ್ಲದ ನಾಲಗೆಯಿಂದ ಈಶ್ವರಪ್ಪ ನಿರ್ಗಮನ

ಶಿವಮೊಗ್ಗ: ಈಶ್ವರಪ್ಪ ಅವರು ರಾಜಕೀಯ ನಿವೃತ್ತಿ ಪಡೆದುಕೊಳ್ಳಲು ಅವರ ನಾಲಿಗೆ ಮತ್ತು ಪುತ್ರ ವ್ಯಾಮೋಹ ಕಾರಣ ಎಂದು ವಿಧಾನಪರಿಷತ್ ಸದಸ್ಯ ಆಯನೂರು ಮಂಜುನಾಥ್ ಹೇಳಿದರು.
ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಕೆ.ಎಸ್ ಈಶ್ವರಪ್ಪನವರು ತಮ್ಮ ನಾಲಿಗೆಯನ್ನು ಮತ್ತು ಪುತ್ರ ವ್ಯಾಮೋಹವನ್ನು ನಿಯಂತ್ರಣದಲ್ಲಿಟ್ಟಿಕೊಂಡಿದ್ದಿದ್ದರೆ  ಇಂದು ರಾಜಕೀಯ ನಿವೃತ್ತಿ ತೆಗೆದುಕೊಳ್ಳಬೇಕಾದ ಪರಿಸ್ಥಿತಿ ಬರುತ್ತಿರಲಿಲ್ಲ ಎಂದರು.
೩೪ ವರ್ಷಗಳ ಕಾಲ ರಾಜಕಾರಣದಲ್ಲಿದ್ದ ಈಶ್ವರಪ್ಪನವರು ಚುನಾವಣಾ ರಾಜಕೀಯದಿಂದ ನಿವೃತ್ತಿ ಘೋಷಿಸಿರುವುದು ಶಿವಮೊಗ್ಗ ಜಿಲ್ಲೆಯ ರಾಜಕಾರಣದ ಮಗ್ಗಲು ಬದಲಾದಂತಾಗಿದೆ. ಈಶ್ವರಪ್ಪ ಅವರಿಗೆ ವ್ಯಕ್ತಿಗತವಾಗಿ ಶತ್ರುಗಳಿಲ್ಲ. ಎಲ್ಲರೊಂದಿಗೆ ಸ್ನೇಹ ಸ್ವಭಾವದೊಂದಿಗೆ ಇದ್ದರು. ಅವರ ವಿರುದ್ಧ ರಾಜಕೀಯ ನಿಲುವು ಏನೇ ಇದ್ದರೂ ಅವರು ನನಗೆ ಆತ್ಮೀಯರೇ ಆಗಿದ್ದರು. ಅವರ ಈ ರೀತಿಯ ನಿರ್ಗಮನ ನೋವುತಂದಿದೆ ಎಂದು  ಹೇಳಿದರು.
ಈಶ್ವರಪ್ಪನವರು ತನ್ನದಲ್ಲದ ತಪ್ಪಿಗಾಗಿ ಈ ರೀತಿ ನಿರ್ಗಮಿಸುತ್ತಿದ್ದಾರೆ. ಮಗನನ್ನು ಮತ್ತು ತಮ್ಮನಾಲಿಗೆಯನ್ನು ನಿಯಂತ್ರಣದಲ್ಲಿಟ್ಟುಕೊಂಡಿದ್ದಿದ್ದರೆ ಅತ್ಯಂತ ಗೌರವಯುತ ನಾಯಕರಾಗುತ್ತಿದ್ದರು. ಇಂತಹ ಈಶ್ವರಪ್ಪ ಅವರು ಕಣದಿಂದ ಹಿಂದೆ ಸರಿದ ಮಾತ್ರಕ್ಕೆ ನನ್ನ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ. ನಾನಿನ್ನೂ ಸ್ಪರ್ಧಾಕಾಂಕ್ಷಿಯಾಗಿದ್ದೇನೆ. ಒಂದೆರೆಡು ದಿನಗಳಲ್ಲಿ ಯಾವ ಪಕ್ಷದಿಂದ ಸ್ಪರ್ಧೆ ನಡೆಸಲಿದ್ದೇನೆ ಎನ್ನುವುದನ್ನು ಸ್ಪಷ್ಟಪಡಿಸಲಿದ್ದೇನೆ ಎಂದು ಆಯನೂರು ಮಂಜುನಾಥ್ ತಾವಿನ್ನೂ ಸ್ಪರ್ಧೆಯಲ್ಲಿದ್ದೇನೆ ಎಂದು ಘೋಷಿಸಿದರು.


Ad Widget

Related posts

ಶಿವಮೊಗ್ಗ ಅಭಿವೃದ್ಧಿ ಯೋಜನೆಗಳನ್ನು ತ್ವರಿತ ಪೂರ್ಣಗೊಳಿಸಿ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೂಚನೆ

Malenadu Mirror Desk

ಟಾಟಾ ಸುಮೊ ಪಲ್ಟಿ ಇಬ್ಬರು ಸಾವು, ಇಬ್ಬರು ಗಂಭೀರ

Malenadu Mirror Desk

ಕೃಷಿ ಕ್ಷೇತ್ರದ ಕತ್ತು ಹಿಸುಕಿದ ಕೊರೊನ : ಕಲ್ಲಂಗಡಿ, ಶುಂಠಿ, ಭತ್ತದ ಮಾರುಕಟ್ಟೆ ಕಸಿದ ಮಹಾಮಾರಿ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.