ವಿಧಾನ ಸಭೆ ಚುನಾವಣೆಗೆ ಸೋಮವಾರ ನಾಮಪತ್ರ ಸಲ್ಲಿಸಿದ ಅಭ್ಯರ್ಥಿಗಳು ಚುನಾವಣೆ ಆಯೋಗಕ್ಕೆ ತಮ್ಮ ಆಸ್ತಿ ಘೋಷಣಾ ಪತ್ರ ನೀಡಿದ್ದು, ಅದರಲ್ಲಿ ಕಾಂಗ್ರೆಸ್‌ನ ಮಧುಬಂಗಾರಪ್ಪರಿಗೆ ಆಸ್ತಿಯ ಅರ್ಧದಷ್ಟು ಸಾಲವಿದೆ. ಬೇಳೂರು ಗೋಪಾಲಕೃಷ್ಣರಿಗೆ ಆಸ್ತಿಯೂ ಇಲ್ಲ ಮನೆಯೂ ಇಲ್ಲ. ಬಿಜೆಪಿಯ ವಿಜಯೇಂದ್ರ ಅವರು ೧೨೬ ಕೋಟಿ ರೂ.ಆಸ್ತಿಯ ಒಡೆಯರಾಗಿದ್ದರೆ, ಕುಮಾರ್ ಬಂಗಾರಪ್ಪ65 ಕೋಟಿ ರೂ.ಆಸ್ತಿ ಘೋಷಣೆ ಮಾಡಿದ್ದಾರೆ.
ಮಧು ಆಸ್ತಿಯ ಅರ್ಧದಷ್ಟು ಸಾಲ
ಮಾಜಿ ಶಾಸಕ ಮಧು ಬಂಗಾರಪ್ಪ ಕುಟುಂಬ ೬೯.೫೦ ಕೋಟಿ ರೂ. ಆಸ್ತಿ ಹೊಂದಿದ್ದು ೨೦೧೮ರ ಬಳಿಕ ಇಲ್ಲಿವರೆಗೆ ೩ ಕೋಟಿ ರೂ. ಆಸ್ತಿ ಹೆಚ್ಚಳವಾಗಿದೆ. ಹಿಂದಿನ ಚುನಾವಣೆಯಲ್ಲಿ ೬೬ ಕೋಟಿ ರೂ. ಆಸ್ತಿ ಘೋಷಿಸಿಕೊಂಡಿದ್ದರು. ಆದರೆ, ಇವರ ಸಾಲದ ಮೊತ್ತ ೧೬.೩೮ ಕೋಟಿ ರೂ.ನಿಂದ ೨೬ ಕೋಟಿ ರೂ.ಗಳಿಗೆ ಹೆಚ್ಚಾಗಿದೆ.
*ಒಟ್ಟು ಆಸ್ತಿ ೬೯.೫೦ ಕೋಟಿ ರೂ.
*ನಗದು, ವಾಹನ, ಚಿನ್ನಾಭರಣ ಚರಾಸ್ತಿ ೨೭.೮೦ ಕೋಟಿ ರೂ.
*ಮನೆ, ನಿವೇಶನ, ತೋಟ, ಜಮೀನು ಸೇರಿ ಸ್ಥಿರಾಸ್ತಿ ೪೧.೫೦ ಕೋಟಿ ರೂ.
*ಇವರ ಬಳಿ ಇರುವ ನಗದು ೧.೩೭ ಕೋಟಿ ರೂ.
*ಮೂರು ಮುಕ್ಕಾಲು ಕೆಜಿ ಚಿನ್ನಾಭರಣ, ೨೫ ಕೆಜಿ ಬೆಳ್ಳಿ ಆsರಣಗಳು
ದ್ವಿಗುಣವಾದ ಕುಮಾರ್‌ಬಂಗಾರಪ್ಪ ಆಸ್ತಿ
ಶಾಸಕ ಕುಮಾರ್ ಬಂಗಾರಪ್ಪ ಅವರ ಆಸ್ತಿ ಕಳೆದ ಐದು ವರ್ಷದಲ್ಲಿ ದ್ವಿಗುಣಗೊಂಡಿದ್ದು ೬೫.೩೦ ಕೋಟಿ ರೂ. ಆಸ್ತಿ ಘೋಷಿಸಿಕೊಂಡಿದ್ದಾರೆ. ಬ್ಯಾಂಕ್‌ನಲ್ಲಿ ೧.೧೨ ಕೋಟಿ ರೂ. ಸಾಲವಿದೆ. ೨೦೧೮ರಲ್ಲಿ ಇವರಿಗೆ ೨೭.೬೮ ಕೋಟಿ ರೂ. ಆಸ್ತಿ ಇತ್ತು.
*ಒಟ್ಟು ಆಸ್ತಿ ೬೫.೩೦ ಕೋಟಿ ರೂ.
*ನಗದು, ಕಾರು, ಚಿನ್ನಾಭರಣ ಸೇರಿ ಚರಾಸ್ತಿ ೩ ಕೋಟಿ ರೂ.
*ಮನೆ, ನಿವೇಶನ, ತೋಟ, ಜಮೀನು ಸೇರಿ ಸ್ಥಿರಾಸ್ತಿ ೬೨.೨೯ ಕೋಟಿ ರೂ.
ಬೇಳೂರ್ ಬರೀ ಕೈ ಫಕೀರ
ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ 4.26 ಕೋಟಿ ರೂ. ಆಸ್ತಿ ಘೋಷಿಸಿಕೊಂಡಿದ್ದಾರೆ. ಆದರೆ, ಇವರ ಹೆಸರಲ್ಲಿ ಯಾವುದೇ ಸ್ಥಿರಾಸ್ತಿ ಇಲ್ಲ. ಪತ್ನಿ ಹೆಸರಲ್ಲಿ ಮಾತ್ರ ಬೆಂಗಳೂರು ಆರ್.ಟಿ.ನಗರದಲ್ಲಿ ಮನೆ, ಉಡುಪಿಯಲ್ಲಿ ನಿವೇಶನವಿದೆ. ೨೦೧೩ರಲ್ಲಿ ಇವರು ೧.೬೩ ಕೋಟಿ ರೂ. ಆಸ್ತಿ ಘೋಷಿಸಿಕೊಂಡಿದ್ದರು.
*ಒಟ್ಟು ಆಸ್ತಿ ೪.೭೬ ಕೋಟಿ ರೂ.
*ಚರಾಸ್ತಿ ೩.೨೬ ಕೋಟಿ ರೂ.
*ಸ್ಥಿರಾಸ್ತಿ ೧.೫೦ ಕೋಟಿ ರೂ.
*ಇವರ ಹೆಸರಲ್ಲಿ ಕಾರು ಬಿಟ್ಟರೆ ಬೇರೇನೂ ಇಲ್ಲ
*ಆಭರಣ ಪ್ರಿಯರಾದರೂ ಕೇವಲ ೧೨೦ ಗ್ರಾಂ ಚಿನ್ನಾಭರಣವಿದೆ
ವಿಜಯೇಂದ್ರ ೧೨೬ ಕೋಟಿ ರೂ. ಆಸ್ತಿಗೆ ಒಡೆಯ
ಮೊದಲ ಬಾರಿಗೆ ಚುನಾವಣೆ ರಾಜಕೀಯಕ್ಕೆ ಇಳಿದಿರುವ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಪುತ್ರ ಬಿ.ವೈ.ವಿಜಯೇಂದ್ರ ೧೨೬.೧೬ಕೋಟಿ ರೂ. ಆಸ್ತಿ ಘೋಷಿಸಿಕೊಂಡಿದ್ದಾರೆ. ೫೬ ಕೋಟಿ ರೂ. ಚರಾಸ್ತಿ, ೭೦ ಕೋಟಿ ರೂ. ಸ್ಥಿರಾಸ್ತಿ ಹೊಂದಿದ್ದು ಸಾಲದ ಬಾಬತ್ತೆ ೩೫ ಕೋಟಿ ರೂ. ಇದೆ.
ಇವರ ವಿರುದ್ಧ ಸರಕಾರ ಸೇವೆಯಲ್ಲಿರುವವರಿಗೆ ಲಂಚಕ್ಕಾಗಿ ಬೇಡಿಕೆ ಮತ್ತು ಹಣ ಅಕ್ರಮ ವರ್ಗಾವಣೆ ತಡೆ ಕಾಯಿದೆ ಅನ್ವಯ ಎರಡು ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿವೆ.
*ಚರಾಸ್ತಿ ೫೬.೦೬ ಕೋಟಿ ರೂ.
*ಸ್ಥಿರಾಸ್ತಿ ೭೦ ಕೋಟಿ ರೂ.
*ಪತ್ನಿಗೆ ಕೊಟ್ಟ ಸಾಲ ೧೫ ಕೋಟಿ ರೂ.
*ಅಣ್ಣ ಸಂಸದ ಬಿ.ವೈ.ರಾಘವೇಂದ್ರಗೆ ಕೊಡಬೇಕಾದ ಸಾಲ ೮೫.೪೮ ಲಕ್ಷ ರೂ.
*ತೀರಿಸಬೇಕಾದ ಒಟ್ಟು ಸಾಲ ೩೫ ಕೋಟಿ ರೂ.
ಆಮ್ ಆದ್ಮಿ ದಿವಾಕರ್‌ಗೆ ೧೨ ಕೋಟಿ ರೂ.ಆಸ್ತಿ
ಸಾಗರ ಕ್ಷೇತ್ರದ ಆಪ್ ಅಭ್ಯರ್ಥಿ ಹೈಕೋರ್ಟ್ ವಕೀಲ ಕೆ.ದಿವಾಕರ್ ಅವರು ೧೨.೦೯ ಕೋಟಿ ರೂ. ಆಸ್ತಿ ಘೋಷಿಸಿಕೊಂಡಿದ್ದಾರೆ. ಇದರಲ್ಲಿ ೨೯.೩೯ ಲಕ್ಷ ರೂ. ಸಾಲವಿದೆ.
ರಾಜಾರಾಂ ೨.೪೨ ಕೋಟಿ
ತೀರ್ಥಹಳ್ಳಿ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಯಡೂರು ರಾಜಾರಾಮ್ ಅವರು ೨.೪೨ ಕೋಟಿ ರೂ. ಆಸ್ತಿ ಹೊಂದಿದ್ದಾರೆ. ಬ್ಯಾಂಕ್‌ನಲ್ಲಿ ೭೫ ಲಕ್ಷ ರೂ. ಸಾಲ ಮಾಡಿದ್ದಾರೆ.