Malenadu Mitra
ರಾಜ್ಯ ಶಿವಮೊಗ್ಗ

ಪ್ರತಿಬಾರಿ ಭೂಮಿ ಸಮಸ್ಯೆ ಚುನಾವಣೆ ವಿಷಯವಾಗುವುದಾದರೆ, ಇಷ್ಟು ಇವರು ಮಾಡಿದ್ದೇನು?,
ಪತ್ರಿಕಾ ಸಂವಾದದಲ್ಲಿ ಸಾಗರ ಎಎಪಿ ಅಭ್ಯರ್ಥಿ ದಿವಾಕರ್ ಪ್ರಶ್ನೆ

ಸಾಗರ ಕ್ಷೇತ್ರದಲ್ಲಿ ಪ್ರತೀ ಬಾರಿಯೂ ಭೂಮಿಯ ಸಮಸ್ಯೆ ಚುನಾವಣೆ ವಿಷಯವಾಗುವುದಾದರೆ, ಇಲ್ಲೀತನಕ ಆಳ್ವಿಕೆ ಮಾಡಿದವರು ಏನು ಮಾಡಿದರು ಎಂಬುದನ್ನು ಈ ಕ್ಷೇತ್ರದ ಸಂತ್ರಸ್ತರೇ ಹೇಳಬೇಕು ಎಂದು ಆಮ್ ಆದ್ಮಿ ಪಾರ್ಟಿ ಅಭ್ಯರ್ಥಿ ಕೆ.ದಿವಾಕರ್ ವ್ಯಂಗ್ಯವಾಡಿದರು.
ಶಿವಮೊಗ್ಗ ಪ್ರೆಸ್ ಟರಸ್ಟ್ ಹಾಗೂ ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ನಡೆದ ಪತ್ರಿಕಾ ಸಂವಾದದಲ್ಲಿ ಅವರು ಮಾತನಾಡಿದರು. ಬಗರ್ ಹುಕುಂ ಸಮಸ್ಯೆ ಈಗಲೂ ಇದೆ. ಶರಾವತಿ ಸಂತ್ರಸ್ತರ ಸಮಸ್ಯೆ ಇನ್ನೂ ಕಗ್ಗಂಟಾಗಿದೆ.ಇಂತಹ ಗಂಭೀರ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಬಂದಿರುವ ಜನಪ್ರತಿನಿಧಿಗಳು ಆ ಸಮಸ್ಯೆಗಳನ್ನು ಹಾಗೆಯೇ ಬಿಟ್ಟಿರುವುದು ದುರಂತವೇ ಸರಿ ಎಂದು ಅಭಿಪ್ರಾಯಪಟ್ಟರು.
ಹಾಲಿ ಬಿಜೆಪಿ ಸರಕಾರ ಶರಾವತಿ ಸಮಸ್ಯೆ ಕಗ್ಗಂಟಾಗುವಂತೆ ಮಾಡಿದ್ದೂ ಅಲ್ಲದೆ, ಬಳಿಕ ಕೇಂದ್ರದಿಂದ ಎಲ್ಲಾ ಆಗಿಹೋಯ್ತು ಎಂದು ಪರಸ್ಪರ ಅಭಿನಂದನೆಗಳನ್ನೂ ಸಲ್ಲಿಸಿಕೊಂಡರು. ಕೇಂದ್ರ ಮಟ್ಟದಲ್ಲಿ ಈ ಸಮಸ್ಯೆ ಚರ್ಚೆಯೇ ಆಗಿಲ್ಲ. ಒಂದು ಸುಳ್ಳನ್ನು ನೂರು ಬಾರಿ ಹೇಳಿ ಸತ್ಯ ಎಂದು ಬಿಂಬಿಸುವ ಬಿಜೆಪಿಯವರು ಶರಾವತಿ ಸಂತ್ರಸ್ತರನ್ನು ಮತ್ತಷ್ಟು ಕತ್ತಲೆಗೆ ತಳ್ಳಿದ್ದಾರೆ. ಅಡಕೆ ವಿಚಾರದಲ್ಲಿ ಈ ಸರಕಾರ ಮಾಡಿದಷ್ಟು ಮೋಸ ಯಾರೂ ಮಾಡಿಲ್ಲ. ಒಬ್ಬ ಅಡಕೆ ಬೆಳಗಾರನು ಕೂಡಾ ಈ ಬಿಜೆಪಿಗೆ ಮತಹಾಕಬಾರದು. ಸಚಿವ ಆರಗಜ್ಞಾನೇಂದ್ರ ಗುಟ್ಕಾ,ಕಸ್ತೂರಿ ರಂಗನ್ ವರದಿ, ಆಮದು ಅಡಕೆ ವಿಚಾರದಲ್ಲಿ ಹಸೀ ಸುಳ್ಳು ಹೇಳಿದ್ದಾರೆ ಎಂದರು ಆಪಾದಿಸಿದರು.


ದೂರದೃಷ್ಟಿಯಿಲ್ಲದ ಅಭ್ಯರ್ಥಿಗಳು:

ಸಾಗರ ಕ್ಷೇತ್ರದಲ್ಲಿ ಕಣಕ್ಕಿಳಿದಿರುವ ಬಿಜೆಪಿಯ ಹಾಲಪ್ಪ ಮತ್ತು ಬೇಳೂರು ಗೋಪಾಲಕೃಷ್ಣ ಅವರಿಗೆ ಕ್ಷೇತ್ರದ ಬಗ್ಗೆ ಒಂದು ವಿಷನ್ ಇಲ್ಲ. ದೂರದೃಷ್ಟಿಯ ಯೋಜನೆಗಳು ಮತ್ತು ಇರುವ ಸಮಸ್ಯೆಗಳ ಪರಿಹಾರಕ್ಕೆ ಅವರುಗಳ ಬಳಿ ಮಾರ್ಗವೇ ಇಲ್ಲ. ಚಂದ್ರಯಾನ ಮಾಡಿಬಂದ ಈ ದೇಶಕ್ಕೆ ಮಂಗನಕಾಯಿಲೆಗೆ ಮದ್ದು ಕಂಡುಹಿಡಿಯಲಾಗಿಲ್ಲ. ನಮ್ಮ ಶಾಸಕರು ಈ ಬಗ್ಗೆ ಮೌನವಾಗಿದ್ದಾರೆ. ಸೂರ್ಯ ಕಾಣದ ದೇಶದ ಫಿನ್‌ಲೆಂಡ್ ನಲ್ಲಿ ಇಡೀ ದೇಶಕ್ಕೆ ಇಂಟರ್‌ನೆಟ್ ಸೌಕರ್ಯವಿದೆ. ಜಗದ್ವಿಖ್ಯಾತ ಜೋಗ್‌ಫಾಲ್ಸ್ ಹೊಂದಿರು ಪ್ರವಾಸಿ ತಾಣದಲ್ಲಿ ನೆಟ್‌ವರ್ಕ್ ಇಲ್ಲ. ಮಲೆನಾಡಿನಲ್ಲಿ ಹಳ್ಳಿಗಳು ವೃದ್ಧಾಶ್ರಮಗಳಾಗಿವೆ. ನೆಟ್‌ವರ್ಕ್ ಇಲ್ಲದ ಕಾರಣ ದುಡಿಯುವ ಮಕ್ಕಳು ಪಟ್ಟಣ ಸೇರಿವೆ. ಪ್ರವಾಸೋದ್ಯಮಕ್ಕೆ ವಿಪುಲ ಅವಕಾಶ ಇರುವ ಈ ಕ್ಷೇತ್ರವನ್ನು ಸರಕಾರ ಕಡೆಗಣಿಸಿದೆ ಎಂದು ದಿವಾಕರ್ ಆರೋಪಿಸಿದರು.
ಬಿಜೆಪಿ ಚುನಾವಣೆ ನಡೆಸುತ್ತಿರುವವರು ಉತ್ತರ ಭಾರತೀಯರು :
ರಾಜ್ಯ ವಿಧಾನ ಸಭೆ ಚುನಾವಣೆಯನ್ನು ಹಣಬಲದ ಮೇಲೆ ಗೆಲ್ಲಲು ಬಿಜೆಪಿ ಹೊರಟಿದೆ. ಕಾಂಗ್ರೆಸ್ ಕೂಡಾ ಈ ವಿಚಾರದಲ್ಲಿ ಹಿಂದೆ ಬಿದ್ದಿಲ್ಲ. ಬಿಜೆಪಿಯ ರಾಜ್ಯನಾಯಕರು ಚುನಾವಣೆ ಎದುರಿಸುವ ಶಕ್ತಿ ಕಳೆದುಕೊಂಡಿದ್ದಾರೆ. ಆಡಳಿತ ವಿರೋಧಿ ಅಲೆ ಅವರನ್ನು ಕಾಡುತ್ತಿದೆ. ಇಡೀ ರಾಜ್ಯದಲ್ಲಿ ಬಿಜೆಪಿ ಕೇಂದ್ರ ನಾಯಕರ ಏಜೆಂಟರುಗಳು ಸಕಲ ಸಂಪನ್ಮೂಲದೊಂದಿಗೆ ಹರಡಿಹೋಗಿದ್ದಾರೆ. ಅವರುಗಳೇ ಚುನಾವಣೆ ನಡೆಸುತ್ತಿದ್ದಾರೆ. ಎಲ್ಲೆಂದರಲ್ಲಿ ಉತ್ತರಭಾರತದ ಮಂದಿ ಕಾಣುತ್ತಾರೆ. ರಾಜ್ಯದ ಯಾವ ನಾಯಕರುಗಳಿಗೂ ಮುಖ ಇಲ್ಲದಂತಾಗಿದೆ ಎಂದರು.
ಆಪ್‌ಗೆ ಉತ್ತಮ ಅವಕಾಶ:
ಸಾಗರ ಕ್ಷೇತ್ರದಲ್ಲಿ ಆಪ್‌ಗೆ ಉತ್ತಮ ಅವಕಾಶವಿದೆ. ಆಧುನಿಕ ತಂತ್ರಜ್ಞಾನ ಸಾಗರದ ಗ್ರಾಮಾಂತರ ಪ್ರದೇಶಗಳಿಗೆ ಲಭ್ಯವಾಗುವಂತೆ ಮಾಡುವುದು, ಸರಕಾರಿ ಇಂಜಿನಿಯರಿಂಗ್ ಕಾಲೇಜು ಸ್ಥಾಪನೆ, ಅಡಿಕೆ ಬೆಳೆಗಾರರ ಹಿತ ಕಾಪಾಡುವ ಕಾನೂನು ರಚನೆ, ಶರಾವತಿ ಸಂತ್ರಸ್ತರ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವುದು ನನ್ನ ಆದ್ಯತೆಯಾಗಿದೆ ಈ ಅಂಶಗಳನ್ನಿಟ್ಟುಕೊಂಡು ಇಡೀ ಕ್ಷೇತ್ರವನ್ನು ಸುತ್ತಿದ್ದೇನೆ. ಉತ್ತಮ ಪ್ರತಿಕ್ರಿಯೆ ಬಂದಿದೆ ಜನರು ಹೊಸತನವನ್ನು ಬಯಸಿದ್ದಾರೆ ಎಂದು ಹೇಳಿದರು.
ಬಿಜೆಪಿ ಸರಕಾರ ಒಳಮೀಸಲಾತಿ ವಿಂಗಡಣೆ ಮಾಡಿ ಶಿಫಾರಸು ಮಾಡಿರುವುದು ಚುನಾವಣೆ ಗಿಮಿಕ್. ಶೇ.೫೦ ಕ್ಕಿಂತ ಹೆಚ್ಚು ಮೀಸಲಾತಿಯನ್ನು ಸುಪ್ರೀಂಕೋರ್ಟ್ ಮಾನ್ಯಮಾಡುವುದಿಲ್ಲ. ಇವರು ಚುನಾವಣೆಗೋಸ್ಕರ ನಾಟಕ ಮಾಡುತ್ತಿದ್ದಾರೆ. ಸಾಗರದಲ್ಲಿ ಪ್ರತಿಮತಕ್ಕೆ ಐದು ಸಾವಿರ ಕೊಡಲಾಗುತ್ತದೆ ಎಂಬ ವದಂತಿ ಇದೆ. ನಾವು ವೋಟಿಗೆ ಹಣ ಕೊಡುವುದಿಲ್ಲ. ಹಾಲಪ್ಪ ಶಾಸಕರಾದ ಮೇಲೆ ೪೮ ಎಂಎಸ್‌ಐಎಲ್ ಅಂಗಡಿ ಕೊಟ್ಟಿದ್ದಾರೆ. ಇದು ಯಾವ ಸಮಾಜ ಉದ್ದಾರಕ್ಕೆ ಎಂಬುದು ಅರ್ಥವಾಗುತ್ತಿಲ್ಲ. ಜನರಿಗೆ ಶಿಕ್ಷಣ, ಆರೋಗ್ಯ, ತಂತ್ರಜ್ಞಾನ, ಕೃಷಿ ಅಭಿವೃದ್ಧಿಯಾಗಬೇಕು. ಮುಂದಿನ ೫ ವರ್ಷಗಳ ದೂರಾಲೋಚನೆ ಇಟ್ಟುಕೊಂಡು ನಾನು ಕೆಲಸ ಮಾಡುತ್ತೇನೆ ಎಂದರು. ಟ್ರಸ್ಟ್ ಅಧ್ಯಕ್ಷ ಎನ್. ಮಂಜುನಾಥ, ಕಾರ್ಯದರ್ಶಿ ನಾಗರಾಜ ನೇರಿಗೆ, ಸಂಘದ ಅಧ್ಯಕ್ಷ ಗೋಪಾಲ ಯಡಗೆರೆ ಉಪಸ್ಥಿತರಿದ್ದರು.

ಸಾಗರ ಕ್ಷೇತ್ರದಲ್ಲಿ ಆಮ್ ಆದ್ಮಿ ಪಕ್ಷ ಮತ್ತು ಕಾಂಗ್ರೆಸ್ ಅಭ್ಯರ್ಥಿ ನಡುವೆ ನೇರ ಹಣಾಹಣಿ ಇದೆ ಎಂಬುದು ಕ್ಷೇತ್ರದಲ್ಲಿ ಸುತ್ತಾಡಿದಾಗ ಗೊತ್ತಾಗುತ್ತದೆ. ಬಿಜೆಪಿ ಆಡಳಿತದಲ್ಲಿನ ದಬ್ಬಾಳಿಕೆ ಸಾಕು ಎಂಬ ಅಭಿಪ್ರಾಯ ಕ್ಷೇತ್ರದಲ್ಲಿ ಪಕ್ಷಾತೀತ ಮತ್ತು ಜಾತ್ಯಾತೀತವಾಗಿ ಕೇಳಿಬರುತ್ತಿದೆ
ಕೆ.ದಿವಾಕರ್

Ad Widget

Related posts

ಶಾಸಕ ಹಾಲಪ್ಪ ಹರತಾಳು ಅವರು ತಮ್ಮ ಮಾತು ಮುರಿಯುವ ಮೂಲಕ ಪರಿಸರನಾಶಕ್ಕೆ ಕಾರಣವಾಗಿದ್ದಾರೆ

Malenadu Mirror Desk

ಅಭಿವೃದ್ಧಿ ನಿಗಮ ಸ್ಥಾಪಿಸಲು ಆಗ್ರಹ

Malenadu Mirror Desk

ಸಿಎಂ ತವರಲ್ಲಿ ತ್ರಿಶತಕ ದಾಟಿದ ಸೋಂಕು, ಮೂರು ಸಾವು

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.