Malenadu Mitra
ರಾಜ್ಯ ಶಿವಮೊಗ್ಗ

ಮಧುಗೆಲ್ಲಿಸಿ ಸೊರಬಕ್ಕೆ ಬಂದು ಕುಣಿದು ಕುಪ್ಪಳಿಸುವೆ, ಆನವಟ್ಟಿ ರೋಡ್‌ಶೋನಲ್ಲಿ ಶಿವರಾಜ್ ಕುಮಾರ್ ಮನವಿ

ಸೊರಬ: ಮಧುಬಂಗಾರಪ್ಪ ಅವರ ಜನಪರ ಕಾಳಜಿ, ಸೇವಾ ಮನೋಭಾವ ನನಗೆ ಇಷ್ಟ. ಅವರನ್ನು ಗೆಲ್ಲಿಸಿ, ಗೆಲುವಿನ ಸಂಭ್ರಮದ ಕಾರ್ಯಕ್ರಮಕ್ಕೆ ಬಂದು ನಿಮ್ಮೊಂದಿಗೆ ಕುಣಿದು ಕುಪ್ಪಳಿಸುವೆ ಎಂದು ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್ ಹೇಳಿದರು.
ಆನವಟ್ಟಿಯಲ್ಲಿ ಮಧುಬಂಗಾರಪ್ಪ ಅವರ ಪರ ರೋಡ್ ಶೋ ಮತ್ತು ಪ್ರಚಾರ ಸಭೆಯಲ್ಲಿ ಭಾಗವಹಿಸಿದ್ದ ಅವರು, ಸೊರಬ ತಾಲೂಕಿಗೆ ಹಲವು ಬಾರಿ ಆಗಮಿಸಿದ ನಾವು ಯಾವುದೇ ರಾಜಕೀಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿರಲಿಲ್ಲ. ಆದರೆ ಮಧುಬಂಗಾರಪ್ಪ ಚುನಾವಣೆಯಲ್ಲಿ ಗೆಲ್ಲುವ ಮೂಲಕ ಜನಸೇವೆಯನ್ನು ಮಾಡಲು ಇನ್ನಷ್ಟು ಶಕ್ತಿ ಸಿಗಲಿ ಎಂಬ ಉದ್ದೇಶದಿಂದ ಪ್ರಚಾರ ಸಭೆಯಲ್ಲಿ ಪಾಲ್ಗೊಂಡಿದ್ದೇನೆ. ಮಧು ಬಂಗಾರಪ್ಪ ಅವರು ತಾಲೂಕಿನ ಜನತೆಯ ಕಷ್ಟ-ಸುಖಗಳಲ್ಲಿ ಸದಾ ಇರುವುದರಿಂದ ಜನತೆ ಹೆಚ್ಚಿನ ಮತಗಳಿಂದ ಗೆಲ್ಲಿಸುವ ವಿಶ್ವಾಸವಿದೆ. ಗೆಲವು ಸಾಧಿಸಿದ ನಂತರದ ಅಭಿನದಂನಾ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಜನರೊಂದಿಗೆ ಹಾಡಿ ಕುಣಿದು ಕುಪ್ಪಳಿಸುತ್ತೇನೆ ಎಂದರು.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ದೇಶದಲ್ಲಿ ಕಾಂಗ್ರೆಸ್ ಪಕ್ಷ ಪ್ರಜಾಪ್ರಭುತ್ವದ ಅಡಿಯಲ್ಲಿ ಸಂವಿಧಾನ ರಕ್ಷಣೆ ಮಾಡದಿದ್ದರೆ ಇಂದು ನರೇಂದ್ರ ಮೋದಿ ಅಂತವರು ಪ್ರಧಾನಮಂತ್ರಿ ಆಗಲು ಸಾಧ್ಯವಿರಲಿಲ್ಲ ಎಂದು ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ಕಳೆದ ೭೦ ವರ್ಷಗಳಿಂದ ಕಾಂಗ್ರೆಸ್ ದೇಶಕ್ಕೆ ಏನು ನೀಡಿದೆ ಎಂದು ಪ್ರಶ್ನಿಸುವ ಬಿಜೆಪಿಗೆ ನೆಹರು ಆಡಳಿತವದಿಯಲ್ಲಿ ಶಿಕ್ಷಣ ಸಂಸ್ಥೆಗಳು, ಕಾರ್ಖಾನೆಗಳು, ನೀರಾವರಿ ಯೋಜನೆಗಳು, ಉದ್ಯೋಗ ಸೃಷ್ಟಿ, ರಸ್ತೆಗಗಳ ನಿರ್ಮಾಣ ಸೇರಿದಂತೆ ಹಲವಾರು ಯೋಜನೆಗಳನ್ನು ಜಾರಿಗೊಳಿಸಿ ದೇಶವನ್ನು ಅಭಿವೃದ್ಧಿ ಪಡಿಸಿದ್ದು ನೆನಪಿಲ್ಲವೆ ಎಂದು ಪ್ರಶ್ನಿಸಿದರು.

ಎಸ್.ಬಂಗಾರಪ್ಪ ಅವರು ನನ್ನ ಹಾಗೂ ಧರ್ಮಸಿಂಗ್ ಅವರೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದರು. ಅವರ ಅಧಿಕಾರವಧಿಯಲ್ಲಿ ಹಲವು ಜನಪರ ಯೋಜನೆಗಳನ್ನು ಜಾರಿಗೊಳಿಸಲಾಗಿತ್ತು. ಅವರು ಜಾರಿಗೊಳಿಸಿದ ಪಂಪಸೆಟ್‌ಗೆ ಉಚಿತ ವಿದ್ಯುತ್ ಯೋಜನೆಯಿಂದ ರೈತವರ್ಗಕ್ಕೆ ಅನುಕೂಲವಾಗಿದೆ. ಎಲ್ಲಾ ವರ್ಗದ ಜನರನ್ನು ಒಂದೆಡೆ ಸೇರಿಸಲು ಕಾಂಗ್ರೆಸ್ ಆರಾಧನ ಯೋಜನೆಯನ್ನು ಜಾರಿಗೊಳಿಸಿತ್ತು, ಪ್ರಸ್ತುತ ಓಟಿಗಾಗಿ ಬಿಜೆಪಿ ಗುಡಿ-ಗೋಪುರಗಳನ್ನ ಕಟ್ಟಿಕೊಳ್ಳುತ್ತಾ ಜನಸಾಮಾನ್ಯರ ಅಭಿವೃದ್ಧಿ ಮರೆಯುತ್ತಿದೆ. ಹಾಗೆಯೇ ಬಡವರಿಗೆ ಸೂರು ನೀಡಲು ಜಾರಿಗೊಳಿಸಿದ ಆಶ್ರಯ ಯೋಜನೆ ಅಡಿಯಲ್ಲಿ ಮನೆಗಳನ್ನು ನೀಡಲು ಬಿಜೆಪಿಗೆ ಸಾಧ್ಯವಾಗಿಲ್ಲ ಎಂದು ಆರೋಪಿಸಿದರು.

ಗೀತಾ ಶಿವರಾಜ್ ಕುಮಾರ್ ಮಾತನಾಡಿ, ತಾಲೂಕಿನ ಜನತೆ ತಂದೆ ಬಂಗಾರಪ್ಪಾಜಿ ಅವರಿಗೆ ನೀಡಿದ ಸಹಕಾರ, ಪ್ರೀತಿಯನ್ನು ತಮ್ಮನಾದ ಮಧು ಬಂಗಾರಪ್ಪ ಅವರಿಗೂ ನೀಡುವ ಮೂಲಕ ಗೆಲ್ಲಿಸಿ ನಿಮ್ಮ ಸೇವೆ ಮಾಡಲು ಅವಕಾಶ ನೀಡಬೇಕು. ನನ್ನ ತಮ್ಮನನ್ನು ತಾಲೂಕಿನ ಜನತೆ, ಕಾಂಗ್ರೆಸ್ ಪಕ್ಷ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರ ಮಡಿಲಿಗೆ ಹಾಕಿದ್ದು ಬೆಳೆಸುವ ಹೊಣಿಗಾರಿಕೆ ನಿಮ್ಮಗಳ ಮೇಲಿದೆ ಎಂದ ಅವರು ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ಇಂದು ನಮ್ಮ ತಂದೆ ಇರಬೇಕಿತ್ತು ಎಂದು ಭಾವುಕರಾದರು.


ಕಾಂಗ್ರೆಸ್ ಅಭ್ಯರ್ಥಿ ಮಧು ಬಂಗಾರಪ್ಪ ಮಾತನಾಡಿ, ತಂದೆಯ ಸ್ಥಾನದಲ್ಲಿರುವ ಮಲ್ಲಿಕಾರ್ಜುನ ಖರ್ಗೆ ಅವರು ಸೊರಬ ಕ್ಷೇತ್ರಕ್ಕೆ ಆಗಮಿಸಿದ್ದು ಸಂತಸ ನೀಡುವ ಜನತೆ ಶಕ್ತಿ ನೀಡಿದಂತಾಗಿದೆ. ನನ್ನೊಂದಿಗೆ ಗೀತಕ್ಕ ಸದಾ ಇದ್ದು, ಶಿವರಾಜ್ ಕುಮಾರ್ ಅವರು ಮೊದಲ ಭಾರಿಗೆ ರಾಜಕೀಯ ವೇದಿಕೆಯಲ್ಲಿ ಗುರುತಿಸಿಕೊಂಡಿರುವ ಜತೆಗೆ ನನ್ನ ಪರ ಪ್ರಚಾರ ನಡೆಸಿದ್ದು ಮನತುಂಬಿ ಬಂದಿದೆ. ಜನರು ಈ ಭಾರಿ ಆರ್ಶೀವಾದ ನೀಡಲಿದ್ದಾರೆ ಎಂಬ ವಿಶ್ವಾಸವಿದೆ ಎಂದರು.
ಪ್ರಮುಖರಾದ ಕ್ಯಾಪ್ಟನ್ ಅಜಯಸಿಂಗ್ ಯಾದವ್, ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ, ಮಾಜಿ ಸದಸ್ಯ ಪ್ರಸನ್ನ ಕುಮಾರ್, ಸೊರಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಣ್ಣಪ್ಪ ಹಾಲಘಟ್ಟ, ಆನವಟ್ಟಿ ಬ್ಲಾಕ್ ಅಧ್ಯಕ್ಷ ಸದಾನಂದಗೌಡ, ಮಹಿಳಾ ಘಟಕಗಳ ಅಧ್ಯಕ್ಷರಾದ ಸುಜಾತಾ ಜೋತಾಡಿ, ವಿಶಾಲಾಕ್ಷಿ, ತಬಲಿ ಬಂಗಾರಪ್ಪ, ಆರ್.ಸಿ.ಪಾಟೀಲ್, ಮಂಜಪ್ಪ ನೇರಲಗಿ, ಕೆ.ಪಿ.ರುದ್ರಗೌಡ, ಕೆ.ವಿ.ಗೌಡ, ನಾಗಪ್ಪ ಮಾಸ್ತರ್, ಪುರುಷೋತ್ತಮ್, ಪ್ರವೀಣ್ ಕುಮಾರ್, ಸತೀಶ್ ಅರ್ಜುನಪ್ಪ, ಸುರೇಶ್ ಹಾವಣ್ಣನವರ್ ಮತ್ತಿತರರಿದ್ದರು. ಆನವಟ್ಟಿಯ ಮುಖ್ಯ ರಸ್ತೆಯಲ್ಲಿ ಚುನಾವಣೆ ಪ್ರಚಾರದ ಬೃಹತ್ ಮೆರವಣಿಗೆ ನಡೆಸಲಾಯಿತು.


ಮಧು ಬಂಗಾರಪ್ಪ ಅವರು ಸಜ್ಜನ ಹಾಗೂ ಮೃದು ಸ್ವಭಾವದ ರಾಜಕಾರಣಿ ಎಂಬುದನ್ನು ಹತ್ತಿರದಿಂದ ಕಂಡಿದ್ದೇನೆ. ದೊಡ್ಡ ಸಂಖ್ಯೆಯಲ್ಲಿ ಜನಬೆಂಬಲ ಹೊಂದಿರುವುದನ್ನು ನೋಡಿದಾಗ ಮಧು ಬಂಗಾರಪ್ಪ ಅವರು ಎಸ್.ಬಂಗಾರಪ್ಪ ಅವರಂತೆ ಜನರ ವಿಶ್ವಾಸ ಗಳಿಸಿರುವುದು ಸಾಭೀತಾಗಿದೆ. ಸೊರಬ ಕ್ಷೇತ್ರ ಗೆಲ್ಲುವ ಮೂಲಕ ರಾಜ್ಯದಲ್ಲಿ ೧೫೦ ಕ್ಷೇತ್ರಗಳನ್ನು ಗೆಲುವು ಸಾಧಿಸಿ ಕಾಂಗ್ರೆಸ್ ಅಧಿಕಾರ ಹಿಡಿಯಲಿದೆ.

ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಅಧ್ಯಕ್ಷ

Ad Widget

Related posts

ಶಿವಮೊಗ್ಗದಲ್ಲಿ ಉಪನ್ಯಾಸಕರ ಸಂಘದಿಂದ ಶೈಕ್ಷಣಿಕ ಸಮ್ಮೇಳನ
ರಾಷ್ಟ್ರೀಯ ಶಿಕ್ಷಣ ನೀತಿ, ಉಪನ್ಯಾಸಕರ ಸಮಸ್ಯೆಗಳ ಬಗ್ಗೆ ಚರ್ಚೆ

Malenadu Mirror Desk

ಶಿವಮೊಗ್ಗದಲ್ಲಿ ಸಚಿವ ರಾಜೀವ್ ಚಂದ್ರಶೇಖರ್ ಜನಾಶೀರ್ವಾದ ಯಾತ್ರೆ

Malenadu Mirror Desk

ಶಿವಮೊಗ್ಗದಲ್ಲಿ ಆ. 20 ರ ಬೆಳಿಗ್ಗೆ 6 ಗಂಟೆವರೆಗೆ ನಿಷೇಧಾಜ್ಞೆ ವಿಸ್ತರಣೆ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.