ಶಿವಮೊಗ್ಗನಗರದಲ್ಲಿ ಸೋಮವಾರ ಸಂಜೆ ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ಭರ್ಜರಿ ರೋಡ್ ಶೋ ನಡೆಸುವ ಮೂಲಕ ಬಿಜೆಪಿ ಅಭ್ಯರ್ಥಿಗಳ ಪರ ಮತಯಾಚನೆ ಮಾಡಿದರು.
ಸಂಜೆ ಎರಡು ಗಂಟೆ ವಿಳಂಬವಾಗಿ ಬಂದರೂ ಸಹಸ್ರಾರು ಜನರು ಕಾದಿದ್ದರು. ಶಿವಪ್ಪನಾಯಕ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಬಳಿಕ ನೆಹರೂ ರಸ್ತೆ, ದುರ್ಗಿಗುಡಿ, ಜೈಲ್ ರಸ್ತೆ ಮೂಲಕ ಫ್ರೀಡಂ ಪಾರ್ಕ್‌ವರೆಗೆ ರೋಡ್ ಶೋ ನಡೆಸಲಾಯಿತು.
ಕಲಾ ತಂಡಗಳೊಂದಿಗೆ ಸಾಗಿದ ತೆರೆದವಾಹನದ ಮೆರವಣಿಗೆಯಲ್ಲಿ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ, ಸಂಸದ ಬಿ.ವೈ.ರಾಘವೇಂದ್ರ, ಅಭ್ಯರ್ಥಿಗಳಾದ ಚನ್ನಬಸಪ್ಪ, ಅಶೋಕ್ ನಾಯ್ಕ ಸಾಥ್ ನೀಡಿದರು.