Malenadu Mitra
ರಾಜ್ಯ ಶಿವಮೊಗ್ಗ

ಸರಕಾರಿ ಸೌಲಭ್ಯ ಪ್ರತಿ ಹಳ್ಳಿಗೂ ತಲುಪಿವೆ, ನನ್ನ ಕೆಲಸ ನನ್ನ ಕೈ ಹಿಡಿಯುತ್ತದೆ. ಸಂವಾದದಲ್ಲಿ ಗ್ರಾಮಾಂತರ ಶಾಸಕ ಅಶೋಕ ನಾಯ್ಕ ಹೇಳಿಕೆ

ಶಿವಮೊಗ್ಗ: ಗ್ರಾಮಾಂತರ ಕ್ಷೇತ್ರದಲ್ಲಿ ಪ್ರತಿ ಹಳ್ಳಿಗೂ ಒಂದಲ್ಲ ಒಂದು ಯೋಜನೆ ತಲುಪಿಸಿರುವುದು ಹೆಮ್ಮೆ ತಂದಿದೆ. ಈ ಅಭಿವೃದ್ಧಿ ಮತ್ತು ಮುಂದಿನ ನನ್ನ ಕಾರ್ಯಯೋಜನೆಗಳನ್ನು ಮುಂದಿಟ್ಟುಕೊಂಡು ಮತ ಕೇಳುತ್ತಿರುವೆ. ಕ್ಷೇತ್ರದಲ್ಲಿ ಸಿಗುತ್ತಿರುವ ಪ್ರತಿಕ್ರಿಯೆ ಗಮನಿಸಿದಾಗ ೧೫-೨೦ ಸಾವಿರ ಮತಗಳ ಅಂತರದಿಂದ ಗೆಲ್ಲುವ ವಿಶ್ವಾಸ ಮೂಡಿದೆ ಎಂದು ಬಿಜೆಪಿ ಅಭ್ಯರ್ಥಿ ಕೆ. ಬಿ. ಅಶೋಕ ನಾಯ್ಕ ಹೇಳಿದರು.

ಪ್ರೆಸ್ ಟ್ರಸ್ಟಿನಲ್ಲಿ ಸೋಮವಾರ ಏರ್ಪಡಿಸಲಾಗಿದ್ದ ಸಂವಾದದಲ್ಲಿ ಮಾತನಾಡಿದ ಅವರು, ಜನರ ಕಡೆಯಿಂದ ಪ್ರಶಂಸನೆಯ ಮಾತು ಕೇಳಿಬರುತ್ತಿದೆ. ನೂರಾರು ಕೋಟಿ ಹಣ ತರುವಲ್ಲಿ ಮಾಜಿ ಸಿಎಂ ಯಡಿಯೂರಪ್ಪ, ಸಂಸದ ಬಿ ವೈ ರಾಘವೇಂದ್ರ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಾರಣರಾಗಿದ್ದಾರೆ. ಜನರೂ ಸಹ ಅಭಿವೃದ್ಧಿಯನ್ನು ಶ್ಲಾಘಿಸುತ್ತಿದ್ದಾರೆ.

ಒಳಮೀಸಲಾತಿ ವಿಂಗಡಣೆ ಬಗ್ಗೆ ಬಂಜಾರ ಸಮುದಾಯದಲ್ಲಿ ತಪ್ಪು ತಿಳವಳಿಕೆ ಬರುವಂತೆ ಪ್ರತಿಪಕ್ಷದವರು ಪಿತೂರಿ ಮಾಡಿದ್ದಾರೆ. ಅವರಿಗೆ ವಾಸ್ತವ ಸಂಗತಿ ತಿಳಿಸಲಾಗಿದೆ. ಬಂಜಾರ ತಾಂಡಾಗಳಲ್ಲೂ ಬೆಂಬಲ ಸಿಕ್ಕಿದೆ. ಶೇ. ೮೦ರಷ್ಟು ಬಂಜಾರರು ಬಿಜೆಪಿ ಪರವಿದ್ದಾರೆ. ಒಳಮೀಸಲಾತಿ ವಿಚಾರದಲ್ಲಿ ಯಾವ ಅನ್ಯಾಯವೂ ಆಗಿಲ್ಲ. ವಿಪಕ್ಷದಲ್ಲಿರುವ ಕೆಲವರು ಇದನ್ನು ಅರ್ಥ ಮಾಡಿಕೊಳ್ಳದೆ, ಮಾತನಾಡಲು ಬೇರೆ ವಿಚಾರವಿಲ್ಲದೆ ಇದನ್ನೇ ದೊಡ್ಡ ವಿಷಯನ್ನಾಗಿ ಮಾಡುತ್ತಾ ಜನರ ದಿಕ್ಕು ತಪ್ಪಿಸುತಿದ್ದಾರೆ ಎಂದರು.

ಗ್ರಾಮಾಂತರದಲ್ಲಿ ಸಾಕಷ್ಟು ಜನರಿಗೆ ನಿವೇಶನದ ಹಕ್ಕುಪತ್ರ ಕೊಡಿಸಲಾಗಿದೆ. ಇನ್ನೂ ಬಹಳಷ್ಟು ಜನರಿದ್ದಾರೆ. ಅವರಿಗೆ ಹಕ್ಕುಪತ್ರ ಕೊಡಿಸುವುದು ನನ್ನ ಗುರಿಯಾಗಿದೆ. ಜೊತೆಗೆ ಶರಾವತಿ ಸಂತ್ರಸ್ತರು ಗ್ರಾಮಾಂತರ ಭಾಗದಲ್ಲಿ ಹಲವರಿದ್ದು, ಅವರಿಗೂ ಸಹ ನ್ಯಾಯ ಕೊಡಿಸುವುದು, ಬಗರ್‌ಹುಕುಂ ಸಾಗುವಳಿ ಪತ್ರ ಕೊಡಿಸುವ ಜವಾಬ್ದಾರಿ ನನ್ನ ಮೇಲಿದೆ. ಇವೆಲ್ಲದರ ಹೊರತಾಗಿ ಜನರ ಬಹಳ ದಿನದ ಬೇಡಿಕೆಯಾಗಿರುವ ಗ್ರಾಮಾಂತರ ತಾಲೂಕನ್ನು ರಚಿಸುವ ಕೆಲಸವನ್ನು ಮಾಡಲು ಯತ್ನಿಸುತ್ತೇನೆ ಎಂದು ಹೇಳಿದರು.
ಆಯನೂರಿಗೆ ಪ್ರಧಾನಿ ಭೇಟಿ:
ಗ್ರಾಮಾಂತರ ಕ್ಷೇತ್ರಕ್ಕೆ ಪ್ರಧಾನಿ ನರೇಂದ್ರ ಮೋದಿ ಮೇ ೭ರಂದು ಆಗಮಿಸಲಿದ್ದಾರೆ. ಅಂದು ಸಂಜೆ ಆಯನೂರಿನ ಹೊರಭಾಗದಲ್ಲಿ ಬೃಹತ್ ಸಮಾವೇಶ ನಡೆಸಲಾಗುವುದು. ಇದಕ್ಕೆ ಸಕಲ ಸಿದ್ಧತೆ ನಡೆದಿದೆ. ಸುಮಾರು ೫೦ ಸಾವಿರ ಜನರು ಸೇರುವ ನಿರೀಕ್ಷೆ ಇದೆ. ಆಯನೂರಿಗೆ ಪ್ರಧಾನಿ ಆಗಮಿಸುವುದರಿಂದ ಗ್ರಾಮಾಂತರ ಭಾಗದಲ್ಲಿ ಬಿಜೆಪಿ ಇನ್ನಷ್ಟು ಬಲಿಷ್ಠವಾಗಲಿದೆ. ಇದು ಚುನಾವಣೆ ಮೇಲೆ ಪರಿಣಾಮ ಬೀರಲಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಗೆಲುವು ನಿಶ್ಚಿತ ಎಂದರು.
ಸಂವಾದದಲ್ಲಿ ಪ್ರೆಸ್ ಟ್ರಸ್ಟ್ ಅಧ್ಯಕ್ಷ ಎನ್. ಮಂಜುನಾಥ, ಕಾರ್‍ಯದರ್ಶಿ ನಾಗರಾಜ ನೇರಿಗೆ, ಶಿವಮೊಗ್ಗ ಕಾರ್‍ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಗೋಪಾಲ ಯಡಗೆರೆ, ಕಾರ್‍ಯದರ್ಶಿ ಸಂತೋಷ ಕಾಚಿನಕಟ್ಟೆ ಉಪಸ್ಥಿತರಿದ್ದರು.

ಪ್ರತಿಪಕ್ಷಗಳಿಗೆ ವಿರೋಧ ಮಾಡಲು ವಿಷಯಗಳಿಲ್ಲ.ಅದಕ್ಕಾಗಿಯೇ ವೃಥಾ ಆರೋಪ ಮಾಡುತ್ತಾರೆ. ನನ್ನ ಕ್ಷೇತ್ರದಲ್ಲಿ ನಾನು ಮಾಡಿರುವ ಕೆಲಸಗಳೇ ರಕ್ಷಿಸುತ್ತವೆ. ಹೊಳಲೂರು ಏತ ನೀರಾವರಿ ಕಾಮಗಾರಿಯಲ್ಲಿ ಹಿಂದಿನ ಶಾಸಕರ ಅವಧಿಯಲ್ಲಿ ಬಂದ ಅನುದಾನ ಏನಾಯಿತು ಎಂಬ ಬಗ್ಗೆ ಮುಂದಿನ ದಿನಗಳಲ್ಲಿ ಮಾತಾಡುವೆ. ಜನರು ಇವರು ಹೇಳುವ ಸುಳ್ಳನ್ನು ನಂಬುವ ಸ್ಥಿತಿಯಲ್ಲಿಲ್ಲ

ಅಶೋಕ್ ನಾಯ್ಕ, ಶಾಸಕ

Ad Widget

Related posts

ಸೊರಬ ಜನಕ್ಕೆ ಸ್ವಾಭಿಮಾನಿ ಬದುಕು ಕೊಡುವೆ, ಬಂಗಾರಪ್ಪರ ಅನುಷ್ಠಾನಕ್ಕೆ ಬದ್ಧನಾಗುವೆ: ಪತ್ರಿಕಾ ಸಂವಾದದಲ್ಲಿ ಮಧು ಬಂಗಾರಪ್ಪ ಭರವಸೆ

Malenadu Mirror Desk

ಪತ್ರಕರ್ತರು ಸುದ್ದಿ ನೈಜತೆಗೆ ಮೋಸವಾಗದಂತೆ ಜಾಗೃತೆವಹಿಸಬೇಕು

Malenadu Mirror Desk

ಸಂಕಷ್ಟದಲ್ಲಿರುವವರಿಗೆ ನೆರವು ನೀಡುವುದು ಮಾನವೀಯತೆ: ಬಿ.ವೈ.ರಾಘವೇಂದ್ರ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.