ಶಿಕಾರಿಪುರ: ಬಿಜೆಪಿ ಅಭ್ಯರ್ಥಿ ಅವರು ರಾಜ್ಯ ಮಟ್ಟದ ನಾಯಕರಾಗಿ ಬೆಳೆದಿದ್ದು, ಶಿಕಾರಿಪುರ ಜನತೆ ಅವರನ್ನು ಗೆಲ್ಲಿಸಿ ಮತ್ತಷ್ಟು ಶಕ್ತಿ ನೀಡಬೇಕು ಎಂದು ಚಲನಚಿತ್ರ ನಟ ಸುದೀಪ್ ಹೇಳಿದರು.
ಶಿಕಾರಿಪುರದಲ್ಲಿ ವಿಜಯೇಂದ್ರ ರೋಡ್‌ಶೋ ನಡೆಸಿ ಮತಯಾಚನೆ ಮಾಡಿದ ಅವರು, ಪಟ್ಟಣದ ಶಿರಾಳಕೊಪ್ಪ ವೃತ್ತದ ಅಕ್ಕಮಹಾದೇವಿ ವೃತ್ತದಿಂದ ಆರಂಭ ಗೊಂಡ ರೋಡ್ ಶೋ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಬಸ್ ನಿಲ್ದಾಣದ ಬಳಿ ಬೃಹತ್ ಸಂಖ್ಯೆಯಲ್ಲಿ ಜನರನ್ನುದ್ದೇಶಿಸಿ ಮಾತನಾಡಿದರು. ವಿಜಯೇಂದ್ರ ಪರವಾಗಿ ಪ್ರಚಾರ ಮಾಡೊ ಅಗತ್ಯವಿಲ್ಲ ಈಗಾಗಲೇ ಅವರು ರಾಜ್ಯದಲ್ಲಿ ಅನೇಕರನ್ನು ಗೆಲ್ಲಿಸಿದ್ದಾರಲ್ಲದೇ, ಅವರು ರಾಜ್ಯ ಮಟ್ಟದ ನಾಯಕರಾಗಿದ್ದಾರೆ ಎಂದರು.
ಬಿ ಎಸ್ ಯಡಿಯೂರಪ್ಪರವರು ವಿಜಯೇಂದ್ರರವರಿಂದ ಸ್ಥಾನ ಬಿಟ್ಟು ಕೊಟ್ಟಿಲ್ಲ ಜವಾಬ್ದಾರಿ ಬಿಟ್ಟು ಕೊಟ್ಟಿದ್ದಾರೆ. ಇದರಿಂದಾಗಿ ತಾಲ್ಲೂಕಿನಲ್ಲಿ ಬಿ ವೈ ವಿಜಯೇಂದ್ರರವರು ಗೆದ್ದಾಗಿದ್ದು, ಗೆಲ್ಲಲೇಬೇಕಾದ ಗತ್ತಿನಲ್ಲಿ ಗೆಲ್ಲುವುದು ಬಹಳ ಹೆಮ್ಮೆಯಿಂದ ಕೂಡಿರುತ್ತದೆ. ಅತಿಹೆಚ್ಚಿನ ಮತಗಳನ್ನು ನೀಡಿ ಹೆಚ್ಚಿನ ಅಂತರದಲ್ಲಿ ಗೆಲ್ಲಿಸಬೇಕಿದೆ ಎಂದರು.
ಸಂಸದರಾದ ಬಿ ವೈ ರಾಘವೇಂದ್ರ ಮಾತನಾಡಿ, ತಾಲ್ಲೂಕಿನಲ್ಲಿ ಬಿ ಎಸ್ ಯಡಿಯೂರಪ್ಪನವರು ನೀರಾವರಿ ಸೇರಿದಂತೆ ಎಲ್ಲಾ ರೀತಿಯ ಅಭಿವೃದ್ಧಿ ಮಾಡಿದ್ದಾರೆ. ಇನ್ನುಳಿದಂತೆ ರೈಲ್ವೆ ಯೋಜನೆ ಇನ್ನಿತರ ಅಭಿವೃದ್ಧಿಯಾಗಬೇಕಿದೆ. ಇದರ ಉದ್ಘಾಟನೆಗೆ ಕಿಚ್ಚ ಸುದೀಪ್ ಆಗಮಿಸಲಿದ್ದಾರೆ ಎಂದರು.
ಬಿ ವೈ ವಿಜಯೇಂದ್ರ ಮಾತನಾಡಿ, ತಂದೆ ಬಿ ಎಸ್ ಯಡಿಯೂರಪ್ಪರವರ ಅಭಿವೃದ್ಧಿ ಕಾರ್ಯಗಳೇ ನನಗೆ ಶ್ರೀರಕ್ಷೆಯಾಗಲಿದ್ದು, ತಾಲ್ಲೂಕಿನ ಜನತೆ ತಂದೆಯವರಿಗೆ ಆಶೀರ್ವದಿಸಿದಂತೆ ನನಗೂ ಕೂಡ ಅಧಿಕ ಮತಗಳಿಂದ ಆಶೀರ್ವದಿಸ ಬೇಕು ಎಂದು ಮನವಿ ಮಾಡಿದರು.