Malenadu Mitra
ರಾಜ್ಯ ಶಿವಮೊಗ್ಗ

ಶಾಸಕ ಎಂಬುದು ನಿಮಿತ್ತ, ನಾನೊಬ್ಬ ಸೇವಕ: ನೂತನ ಶಾಸಕ ಎಸ್.ಎನ್.ಚನ್ನಬಸಪ್ಪ

ಶಿವಮೊಗ್ಗ: ಶಾಸಕ ಎಂಬ ಹೆಸರು ನಿಮಿತ್ತ ಮಾತ್ರ. ಸೇವಕ ಎಂಬುದೇ ನಿಜವಾದ ಅರ್ಥ. ನಾನು ಜನಸೇವಕನಾಗಿ ಮತದಾರರ ಋಣ ತೀರಿಸುವಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ ಎಂದ ನೂತನ ಶಾಸಕ ಎಸ್.ಎನ್. ಚನ್ನಬಸಪ್ಪ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು , ನನ್ನನ್ನು ಆಯ್ಕೆ ಮಾಡಿದ ಕ್ಷೇತ್ರದ ಮತದಾರರಿಗೆ, ಹಗಲಿರುಳು ಕೆಲಸ ಮಾಡಿದ ಕಾರ್ಯಕರ್ತರಿಗೆ, ನನಗೆ ಮಾರ್ಗದರ್ಶನ ಮಾಡಿದ ಪಕ್ಷದ ಹಿರಿಯರಿಗೆ, ಸಂಘ ಪರಿವಾರದವರಿಗೆ, ರಾಜ್ಯ, ರಾಷ್ಟ್ರದ ನಾಯಕರಿಗೆ ನನ್ನ ಕೃತಜ್ಞತೆಗಳು ಎಂದರು.
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂದಿಲ್ಲ ನಿಜ. ಬಿಜೆಪಿಗೆ ಸೋಲು ಇದೇ ಮೊದಲಲ್ಲ. ಸೋಲನ್ನು ಸವಾಲಾಗಿ ಸ್ವೀಕರಿಸಿ ನಮ್ಮ ನಾಯಕರು ಈಗ ಆಗಿರುವ ತಪ್ಪುಗಳನ್ನು ಸರಿಪಡಿಸಿಕೊಂಡು ಮತ್ತೆ ಪಕ್ಷವನ್ನು ಅಧಿಕಾರಕ್ಕೆ ತರುತ್ತಾರೆ. ಕಾರ್ಯಕರ್ತರು ಆತಂಕ ಪಡುವ ಅವಶ್ಯಕತೆ ಇಲ್ಲ ಎಂದರು.
ಈಗಾಗಲೇ ಶಿವಮೊಗ್ಗ ನಗರದ ಅಭಿವೃದ್ಧಿ ಆಗಿದೆ. ಇನ್ನೂ ಆಗಬೇಕಾದದ್ದಿದೆ. ಮುಂದಿನ ದಿನಗಳಲ್ಲಿ ನಗರದ ಅಭಿವೃದ್ಧಿಯ ಕಡೆ ಗಮನಹರಿಸುತ್ತೇನೆ. ಹಿಂದುತ್ತ ಮತ್ತು ಅಭಿವೃದ್ಧಿ ಎರಡನ್ನೂ ಒಟ್ಟಿಗೇ ತೆಗೆದುಕೊಂಡು ಹೋಗುವೆ. ಶಿವಮೊಗ್ಗಕ್ಕೆ ಶಾಂತಿ ಬೇಕು ಎಂಬುದು ನಿಜ. ಆದರೆ ಅದು ಎಲ್ಲಾ ಸಮುದಾಯದ ಕಡೆಯಿಂದ ಬರಬೇಕು. ನಾವು ಯಾವತ್ತೂ ಶಾಂತಿಯನ್ನು ಕದಡಲು ಹೋಗಲ್ಲ. ಹೋಗುವುದೂ ಇಲ್ಲ. ಒಟ್ಟಾರೆ ಮತದಾರರ ಋಣ ತೀರಿಸುವಂತಹ ಕೆಲಸ ಮಾಡುತ್ತೇನೆ. ಅವರು ನನಗೆ ಮತದಾನ ಮಾಡಿದ್ದಾರೆ. ಆ ನಂಬಿಕೆಯನ್ನು ಉಳಿಸಿಕೊಳ್ಳುತ್ತೇನೆ ಎಂದರು.
ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಅವರ ಬಗ್ಗೆ ಸಾಮಾಜಿಕ ಜಾಲತಾಣಗಳಲಿ ಅತ್ಯಂತ ಕೀಳಾಗಿ ಕಾಣಲಾಗುತ್ತಿದೆ. ಸಂತೋಷ್ ಜಿ. ಅವರು ಪಕ್ಷವನ್ನು ಕಟ್ಟಿ ಬೆಳೆಸಿದವರು. ಸಂಘಟನೆಯ ಹರಿಕಾರರು, ರಾಷ್ಟ್ರ ಭಕ್ತರು. ಇಂತಹವರಿಗೆ ಅವಹೇಳನ ಮಾಡುತ್ತಿರುವುದು ಸರಿಯಲ್ಲ. ಬಿಜೆಪಿ ನಾಯಕರೂ ಕೂಡ ಅವರ ಬಗ್ಗೆ ಮಾತನಾಡಿದರೆ ತಪ್ಪಾಗುತ್ತದೆ. ಸಂತೋಷ್ ಜಿ. ಅವರನ್ನು ಪ್ರಶ್ನೆ ಮಾಡುವವರು ಬಿಜೆಪಿಯಲ್ಲಿ ಇರಬಾರದು ಎಂದ ಅವರು, ಟೀಕೆ ಮಾಡುವವರು ಇಲ್ಲಿಗೆ ನಿಲ್ಲಿಸಬೇಕು. ಇಲ್ಲದೆ ಹೋದಲ್ಲಿ ಅವರ ಬಗ್ಗೆ ಪಕ್ಷ ಶಿಸ್ತಿನ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ನಗರಾಧ್ಯಕ್ಷ ಜಗದೀಶ್, ಪ್ರಮುಖರಾದ ನಾಗರಾಜ್, ಚಂದ್ರಶೇಖರ್, ಕೆ.ವಿ. ಅಣ್ಣಪ್ಪ,. ಬಾಲು, ಮೋಹನ್ ರೆಡ್ಡಿ, ಮಂಜುನಾಥ್ ಇದ್ದರು

ನಗರದ ಅಭಿವೃದ್ಧಿಯ ಕಡೆ ಗಮನಹರಿಸುತ್ತೇನೆ. ಹಿಂದುತ್ತ ಮತ್ತು ಅಭಿವೃದ್ಧಿ ಎರಡನ್ನೂ ಒಟ್ಟಿಗೇ ತೆಗೆದುಕೊಂಡು ಹೋಗುವೆ. ಶಿವಮೊಗ್ಗಕ್ಕೆ ಶಾಂತಿ ಬೇಕು ಎಂಬುದು ನಿಜ. ಆದರೆ ಅದು ಎಲ್ಲಾ ಸಮುದಾಯದ ಕಡೆಯಿಂದ ಬರಬೇಕು. ನಾವು ಯಾವತ್ತೂ ಶಾಂತಿಯನ್ನು ಕದಡಲು ಹೋಗಲ್ಲ

ಎಸ್.ಎನ್. ಚನ್ನಬಸಪ್ಪ ,ಶಾಸಕ

Ad Widget

Related posts

ಸರಕಾರದ ಸೌಲಭ್ಯ ಸಾಮಾನ್ಯ ಜನರಿಗೂ ತಲುಪಲಿ: ಸಚಿವ ಮಧುಬಂಗಾರಪ್ಪ,ಜನತಾದರ್ಶನದಲ್ಲಿ ಜಿಲ್ಲೆಯ ಜನರ ಸಮಸ್ಯೆಗಳ ಅನಾವರಣ, ಸರಕಾರಿ ಬಸ್, ಹಕ್ಕುಪತ್ರ, ಗೃಹಲಕ್ಷ್ಮಿಗೇ ಹೆಚ್ಚಿನ ಮನವಿ

Malenadu Mirror Desk

ಸರ್ಕಾರಕ್ಕೆ 15 ದಿನ ಗಡುವು ಮಲೆನಾಡು ರೈತ ಹೋರಾಟ ಸಮಿತಿ

Malenadu Mirror Desk

ಆವಿಷ್ಕಾರ  ಮತ್ತು ತಂತ್ರಜ್ಞಾನ ಒಪ್ಪಿ  ಸಂಪ್ರದಾಯವನ್ನೂ ಆಚರಿಸುತ್ತಿರುವುದು ಸೋಜಿಗ : ಮುರುಘಾ ಶರಣರು

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.