ಶಿವಮೊಗ್ಗ: ವಿಶ್ವ ಮಾನ್ಯ ನಾಯಕ ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಚುನಾವಣಾ ಪ್ರಚಾರ ನಡೆಸಿದ್ದ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರ ವ್ಯಾಪ್ತಿಯ ಆಯನೂರು ಸುತ್ತಮುತ್ತ ಅವರು ಪ್ರತಿನಿಧಿಸುವ ಬಿಜೆಪಿಗೆ ಕಡಿಮೆ ಮತಗಳು ಬಂದಿವೆ ಎಂದರೆ ನೀವು ಅಚ್ಚರಿ ಪಡುವಿರಿ. ಆದರೆ ಅಂಕಿ ಅಂಶಗಳನ್ನು ಗಮನಿಸಿದರೆ ನಿಮಗೆ ಸಕೇದಾಶ್ಚರ್ಯ ಖಂಡಿತಾ ಆಗುತ್ತದೆ.
ಚುನಾವಣೆಗೆ ಮೂರು ದಿನ ಮೊದಲು ಆಯನೂರಿನಲ್ಲಿ ಲಕ್ಷಾಂತರ ಜನರ ಸಮ್ಮುಖದಲ್ಲಿ ಪ್ರಧಾನಿ ಮತಪ್ರಚಾರ ಮಾಡಿದ್ದರು. ಸುತ್ತಮುತ್ತಲ ಹತ್ತು ಕ್ಷೇತ್ರಗಳನ್ನು ಕೇಂದ್ರೀಕರಿಸಿ ಬಿ.ಎಸ್.ಯಡಿಯೂರಪ್ಪ ಈಶ್ವರಪ್ಪ ಅವರೊನ್ನಳಗೊಂಡ ವೇದಿಕೆಯಲ್ಲಿ ಭರ್ಜರಿ ಪ್ರಚಾರ ಮಾಡಿದ್ದರು. ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಶಾರದಾಪೂರ್ಯನಾಯ್ಕ ಅವರು ಜಯಶೀಲರಾಗಿದ್ದು, ಬಿಜೆಪಿಯ ಹಾಲಿ ಶಾಸಕ ಕೆ.ಬಿ.ಅಶೋಕ್ ನಾಯ್ಕ ಅವರಿಗೆ ಸೋತಿದ್ದರು.
ಮತ ಎಣಿಕೆ ಬಳಿಕ ಹೊರ ಬಿದ್ದ ಮಾಹಿತಿಯಂತೆ ಮೋದಿ ಅವರ ಕಾರ್ಯಕ್ರಮ ನಡೆದಿದ್ದ ಆಯನೂರಿನ ಎಲ್ಲಾ ಬೂತ್‌ಗಳಿಂದ ಒಟ್ಟು 5443 ಮತ ಚಲಾವಣೆಯಾಗಿದ್ದು, ಅದರಲ್ಲಿ ಬಿಜೆಪಿ ಅಭ್ಯರ್ಥಿ ಪಡೆದದ್ದು ಕೇವಲ 1998 ಆದರೆ ಎದುರಾಳಿ ಜೆಡಿಎಸ್ ಅಭ್ಯರ್ಥಿ 3097 ಮತಗಳನ್ನು ಪಡೆದಿದ್ದಾರೆ.
ಅದೇ ರೀತಿ ಮೋದಿ ಅವರು ಪ್ರಚಾರ ಮಾಡಿದ್ದ ವೇದಿಕೆಗೆ ಹೊಂದಿಕೊAಡಿದ್ದ ಕುಂಸಿ ಮತದಾನ ಕೇಂದ್ರದಲ್ಲಿ ಒಟ್ಟು 26712 ಮತದಾನ ವಾಗಿದ್ದು, ಬಿಜೆಪಿಗೆ 10869 ಬಂದಿದ್ದರೆ ಜೆಡಿಎಸ್‌ಗೆ 13082 ಮತ ಲಬಿಸಿವೆ. ಪಕ್ಕದ ಹರ‍್ನಹಳ್ಲಿ ಮತದಾನ ಕೇಂದ್ರದಲ್ಲಿ ಒಟ್ಟು 28496 ಮತದಾನವಾಗಿದ್ದು, ಬಿಜೆಪಿ 10739 ಮತ ಗಳಿಸಿದ್ದರೆ, ಜೆಡಿಎಸ್‌ಗೆ 14264 ಮತಗಳು ಲಭಿಸಿವೆ. ಈ ಊರುಗಳು ಮಾತ್ರವಲ್ಲದೆ, ಸಿರಿಗೆರೆ, ಮಲೆಶಂಕರ, ತಮ್ಮಡಿಹಳ್ಲೀ, ಚಿನ್ನಮನೆ, ಮತ್ಲಿ ಎಲ್ಲಾ ಕಡೆ ಜೆಡಿಎಸ್ ಅಭ್ಯರ್ಥಿ ಮೇಲುಗೈ ಸಾಧಿಸಿದ್ದರು.
ಕಾಂಗ್ರೆಸ್‌ನ ಗ್ಯಾರಂಟಿಗಳನ್ನು ನಂಬಿ ಜನರು ಹೆಚ್ಚು ಮತ ಹಾಕಿದರು ಎಂದು ಬಿಜೆಪಿ ಪರಾಜಿತ ಅಭ್ಯರ್ಥಿಗಳು ಸಮಜಾಯಿಸಿ ನೀಡುತ್ತಿದ್ದರೆ, ಗ್ರಾಮಾಂತರ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಹೆಚ್ಚು ಮತ ಪಡೆದು ಪ್ರಧಾನಿ ಮೋದಿ ಅವರ ಪ್ರಭಾವವೂ ನಡೆಯದಂತೆ ನೋಡಿಕೊಂಡಿದ್ದಾರೆ.