ಸೊರಬ: ಪಟ್ಟಣದ ಸಮೀಪ ಹರಿಯುವ ದಂಡಾವತಿ ನದಿ ದಡದಲ್ಲಿರುವ ಶ್ರೀ ಚಂದ್ರಮೌಳೇಶ್ವರ ದೇವಸ್ಥಾನದಲ್ಲಿ
ಲೋಕ ಕಲ್ಯಾಣಾರ್ಥ ಹಾಗೂ ವರುಣನ ಕೃಪೆಗಾಗಿ ಪ್ರಾರ್ಥಿಸಿ ಸೋಮವಾರ ಪರ್ಜನ್ಯ ಜಪ ಆಚರಣೆ ನಡೆಯಿತು.
ಪರ್ಜನ್ಯವನ್ನು ಎಲ್ಲಾ ಈಶ್ವರ ದೇವಸ್ಥಾನದಲ್ಲಿಯೂ ಮಾಡಲು ಬರುವುದಿಲ್ಲ. ದೇವಸ್ಥಾನ ನದಿ ದಡದಲ್ಲಿರಬೇಕು. ದೇವಸ್ಥಾನದ ಹೊಸಿಲಿಗಿಂತ ಕೆಳಗೆ ಈಶ್ವರ ಲಿಂಗ ಇರಬೇಕು. ಆಗ ಮಾತ್ರ ಹೊಸ್ತಿಲವರೆಗೆ ನೀರು ನಿಲ್ಲಿಸುವ ಮೂಲಕ ಈಶ್ವರ ಲಿಂಗವನ್ನು ನೀರಿನಲ್ಲಿ ಮುಳುಗಿಸಲಾಗುತ್ತದೆ. ಆಗ ಪರಮೇಶ್ವರನು ಸಂಪ್ರೀತನಾಗಿ ಜನರ ಅಪೇಕ್ಷೆ ಈಡೇರಿಸುತ್ತಾನೆ ಎಂಬ ಪ್ರತೀತಿ ಇದೆ. ಈ ನಿಮಿತ್ತ ಪಟ್ಟಣದಲ್ಲಿ ಹಲವಾರು ವರ್ಷಗಳಿಂದ ಪರ್ಜನ್ಯ ಮಾಡುವ ವಾಡಿಕೆ ಇದೆ ಎಂದು ಪಟ್ಟಣದ ಶ್ರೀ ರಾಮಚಂದ್ರ ದೇವಸ್ಥಾನದ ಅರ್ಚಕ ಶ್ರೀ ಸತ್ಯನಾರಾಣ ತಿಳಿಸಿದರು. ಪಟ್ಟಣದ ಬ್ರಾಹ್ಮಣ ಸಮಾಜದ ಅಧ್ಯಕ್ಷ ಎನ್.ಜಿ.ಪದ್ಮನಾಭ ನೇತೃತ್ವವಹಿಸಿದ್ದರು. ಪರ್ಜನ್ಯದ ಜವ ಬ್ದಾರಿಯನ್ನು ರಾಮಚಂದ್ರ ಭಟ್, ಸತ್ಯನಾರಾಯಣ, ವೆಂಕಟೇಶ ದಾಮ್ಲೆ, ವೆಂಕಟೇಶ ಜೊಯಿಸ್, ಶ್ರೀಕಾಂತ್ ಭಟ್, ಪರಮೇಶ್ವರ ಭಟ್, ಅಕ್ಷಯ ವಹಿಸಿದ್ದರು.
previous post