Malenadu Mitra
ರಾಜ್ಯ ಶಿವಮೊಗ್ಗ

ಸಹಕಾರಿ ಸದಸ್ಯತ್ವದ ರದ್ದು ಆದೇಶ ತೆರವು
ಮತ್ತೆ ಮಂಜುನಾಥ್ ಗೌಡರ ಶಖೆ ಆರಂಭ

ಶಿವಮೊಗ್ಗ: ಕಾಂಗ್ರೆಸ್ ಮುಖಂಡ ಡಾ. ಆರ್ ಎಂ ಮಂಜುನಾಥ್ ಗೌಡ ಅವರನ್ನು ಶಿವಮೊಗ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ನ ನಿರ್ದೇಶಕ ಸ್ಥಾನದ ವಜಾ ಆದೇಶವನ್ನು ರದ್ದುಗೊಳಿಸಿದ್ದ ಸಹಕಾರ ಇಲಾಖೆ ಜಂಟಿ ರಿಜಿಸ್ಟ್ರಾರ್ ಆದೇಶವನ್ನು ವಜಾಗೊಳಿಸಿ ಅಪರ ನಿಬಂಧಕರ ನ್ಯಾಯಾಲಯ ತೀರ್ಪು ನೀಡಿದೆ.
ನ್ಯಾಯಾಲಯದ ತೀರ್ಪಿನಿಂದ ಡಾ.ಆರ್ ಎಂ ಮಂಜುನಾಥ್ ಗೌಡ ಅವರಿಗೆ ಮತ್ತೆ ಡಿಸಿಸಿ ಬ್ಯಾಂಕ್ ನಿರ್ದೇಶಕ ಸ್ಥಾನ ದಕ್ಕಿದಂತಾಗಿದೆ. ಆರು ವರ್ಷಗಳ ಹಿಂದೆ ನಡೆದಿದ್ದ ಡಿಸಿಸಿ ಬ್ಯಾಂಕ್ ನ ಗಾಂಧಿಬಜಾರ್ ಶಾಖೆಯಲ್ಲಿ ನಕಲಿ ಚಿನ್ನ ಅಡಮಾನ ದ 65 ಕೋ ರೂ ಗಳ ವಂಚನೆ ಪ್ರಕರಣದ ಹಿನ್ನಲೆಯಲ್ಲಿ ಡಾ.ಆರ್.ಎಂ ಮಂಜುನಾಥ್ ಗೌಡ ಅವರನ್ನು ಜಂಟೀ ಸಹಕಾರ ನಿಬಂಧಕರ ನ್ಯಾಯಾಲಯ ಬ್ಯಾಂಕ್ ನ ನಿರ್ದೇಶಕ ಸ್ಥಾನದಿಂದ ವಜಾಗೊಳಿಸಲಾಗಿತ್ತು. ಇದನ್ನು  ಪ್ರಶ್ನಿಸಿ ಹೈಕೋರ್ಟ್ ಸೂಚನೆಯಂತೆ ಮಂಜುನಾಥ್ ಗೌಡರು ಅಪರ ಸಹಕಾರ ನಿಬಂಧಕರ ನ್ಯಾಯಾಲಯದಲ್ಲಿ ಅಫೀಲು ಸಲ್ಲಿಸಿದ್ದು ಇದೀಗ ತೀರ್ಪು ಪ್ರಕಟಿಸಿರುವ ನ್ಯಾಯಾಲಯ ಜಂಟೀ ನಿಬಂಧಕರ ಆದೇಶವನ್ನು ರದ್ದು ಗೊಳಿಸಿ. ಮಂಜುನಾಥ್ ಗೌಡರು ನಿರ್ದೇಶಕರಾಗಿ ಮುಂದುವರೆಯಲು ಆದೇಶಿಸಿದೆ.
ಅದರಂತೆ ಮಂಜುನಾಥ್ ಗೌಡರು  ಬುಧವಾರ  ಡಿಸಿಸಿ ಬ್ಯಾಂಕ್ ಮುಖ್ಯ ಕಚೇರಿಗೆ ಆಗಮಿಸಿ ವ್ಯವಸ್ಥಾಪಕನಿರ್ದೇಶಕರಿಗೆ ಆದೇಶ ಪ್ರತಿ ನೀಡಿದರು.
ಈ ಸಂದರ್ಭದಲ್ಲಿ ನಿರ್ದೇಶಕರಾದ ಜಿ.ಎನ್ ಸುಧೀರ್, ಷಡಾಕ್ಷರಿ, ದುಗ್ಗಪ್ಪಗೌಡ, ಪರಮೇಶ್ವರ್ ,ಕೆ ಎಂ ಎಫ್ ಮಾಜಿ ಅಧ್ಯಕ್ಷ ಜಗದೀಶ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್ ಎಸ್ ಸುಂದರೇಶ್ ಜೊತೆಗಿದ್ದರು.

ರಾಜಕಾರಣಕ್ಕಾಗಿ ನನ್ನ ವಿರುದ್ಧ ಪಿತೂರಿ:
ಸುದ್ದಿಗಾರರೊಂದಿಗೆ ಮಾತನಾಡಿದ ಆರ್‌ಎಂ ಮಂಜುನಾಥ್ ಗೌಡ ಅವರು,ಕಳೆದ ೪೦ ವರ್ಷಗಳಿಂದ ಸಹಕಾರ ಕ್ಷೇತ್ರದಲ್ಲಿ ಇದ್ದೇನೆ. ಡಿಸಿಸಿ ಬ್ಯಾಂಕ್ ಅಧ್ಯಕ್ಷನಾಗಿ ಕೆಲಸ ಮಾಡಿದ್ದೇನೆ. ಅಪೆಕ್ಸ್ ಬ್ಯಾಂಕ್ ಅಧ್ಯಕ್ಷನಾಗಿಯೂ ಕಾರ್ಯನಿರ್ವಹಿಸಿದ್ದೇನೆ. ಡಿಸಿಸಿ ಬ್ಯಾಂಕ್ ಕಷ್ಟದಲ್ಲಿದ್ದಾಗ ಅದನ್ನು ಕಟ್ಟಿ ಬೆಳೆಸಿದ್ದೇನೆ. ಹೀಗಿದ್ದರೂ ಕೇವಲ ರಾಜಕಾರಣಕ್ಕಾಗಿ ನನ್ನ ವಿರುದ್ಧ ಪಿತೂರಿ ಮಾಡಿ ನಿರ್ದೇಶಕ ಸ್ಥಾನದಿಂದ ಅನರ್ಹತೆಗೊಳಿಸಲು ಹಲವರು ಮುಂದಾಗಿದ್ದರು.  ಒಮ್ಮೆ ೮ ಸದಸ್ಯರನ್ನು ಅನರ್ಹಗೊಳಿಸಿದ್ದರು. ನಂತರ ನನ್ನೊಬ್ಬನನ್ನೇ ಅನರ್ಹಗೊಳಿಸಿದ್ದರು. ಇದನ್ನು ಪ್ರಶ್ನೆ ಮಾಡಿ ಹೈಕೋರ್ಟ್ ವಿಭಾಗೀಯ ಪೀಠಕ್ಕೆ ಪ್ರಶ್ನೆ ಮಾಡಿದ್ದೆ ಎಂದರು.
ವಿಭಾಗೀಯ ಪೀಠ ಆರು ವಾರದಲ್ಲಿ ವಿಚಾರಣೆ ನಡೆಸಿ ಸಹಕಾರ ನಿಬಂಧಕರ ಕಚೇರಿಗೆ ಸೂಚನೆ ನೀಡಿ ನಿರ್ಧಾರ ಕೈಗೊಳ್ಳುವಂತೆ ಸೂಚಿಸಿತ್ತು. ಅದರ ಅನ್ವಯ ಸಹಕಾರ ಸಂಘಗಳ ಅಪರ ನಿಬಂಧಕರು ವಿಚಾರಣೆ ನಡೆಸಿ ಕೆಳಗಿನ ನ್ಯಾಯಾಲಯ ನೀಡಿದ್ದ ತೀರ್ಪನ್ನು ರದ್ದುಗೊಳಿಸಿ ನಿರ್ದೇಶಕ ಸ್ಥಾನದಲ್ಲಿ ಮುಂದುವರಿಯುವಂತೆ ಆದೇಶ ನೀಡಿದೆ ಇದು ಸತ್ಯಕ್ಕೆ ಸಂದ ಜಯವಾಗಿದೆ ಎಂದರು.
ನಾನು ಅಧ್ಯಕ್ಷನಾಗಿದ್ದಾಗಲೇ ನಿರ್ದೇಶಕ ಸ್ಥಾನದಿಂದ ಅನರ್ಹಗೊಳಿಸಿದ್ದರು. ಹಾಗಾಗಿ ಅಧ್ಯಕ್ಷರ ಚುನಾವಣೆಯೂ ನಡೆದಿತ್ತು. ಈಗ ನಿರ್ದೇಶಕ ಸ್ಥಾನವನ್ನೇ ಮತ್ತೆ ಊರ್ಜಿತಗೊಳಿಸಿದ್ದರಿಂದ ಸಹಜವಾಗಿಯೇ ನಾನು ಅಧ್ಯಕ್ಷನಾಗಿ ಮುಂದುವರಿಯುವ ಅವಕಾಶವಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ನನ್ನ ಬೆನ್ನಿಗೆ ಚೂರಿ ಹಾಕಿದವರು ಯಾರೆಂದು ನನಗೆ ಗೊತ್ತು. ಏಕೆಂದೂ ಗೊತ್ತು. ಕೆಜೆಪಿ ಪಕ್ಷದಿಂದ ಸ್ಪರ್ಧಿಸಿ ಅತಿಹೆಚ್ಚು ಮತ ಪಡೆದ ಮೇಲೆ ನನ್ನ ವಿರುದ್ಧ ಪಿತೂರಿಗಳು ಆರಂಭವಾದವು. ಆದರೆ ನಾನೀಗ ಯಾರನ್ನೂ ದ್ವೇಷ ಮಾಡಲಾರೆ. ನಮ್ಮ ಸರ್ಕಾರ ಇದೆ ಎಂದು ಏನನ್ನೂ ದುರುಪಯೋಗಪಡಿಸಿಕೊಳ್ಳಲಾರೆ. ನಾನೊಬ್ಬ ಸಹಕಾರಿ ಅಷ್ಟೆ. ಮುಂದಿನ ತೀರ್ಮಾನಕ್ಕಾಗಿ ಎದುರು ನೋಡುತ್ತಿದ್ದೇನೆ ಎಂದರು.

Ad Widget

Related posts

ಮಳೆ ಬರುವ ಮುಂಚೆ ನಗರದ ಸ್ಮಾರ್ಟ್ ಕಾಮಗಾರಿ ಪೂರ್ಣ

Malenadu Mirror Desk

ಸಹ್ಯಾದ್ರಿ ಕ್ಯಾಂಪಸ್ ಹಸ್ತಾಂತರ ಬೇಡ: ಎನ್.ಎಸ್.ಯು.ಐ

Malenadu Mirror Desk

ಆರ್’ಎಎಫ್ ಘಟಕದಿಂದ ಭದ್ರಾವತಿ ಏಳಿಗೆ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.