Malenadu Mitra
ರಾಜ್ಯ ಶಿವಮೊಗ್ಗ ಸಾಗರ ಸೊರಬ

ನಾಯಕತ್ವ ಬೆಳವಣಿಗೆಗೆ ಎನ್ಎಸ್ಎಸ್ ಸಹಕಾರಿ : ಭೀಮಣ್ಣ ಕೆ.ನಾಯ್ಕ್

ಶಿರಸಿ: ಅಹಂ ಇಲ್ಲದ ಸೇವೆ, ಅಭಿವೃದ್ಧಿಗೆ ಮುಂದಾದಾಗ ಜನ ಗುರುತಿಸುವ ಜತೆಗೆ ಉತ್ತಮ ನಾಯಕನಾಗಿ ಹೊರ ಹೊಮ್ಮಬಹುದು ಎಂದು ಶಾಸಕ ಭೀಮಣ್ಣ ಟಿ.ನಾಯ್ಕ್ ಹೇಳಿದರು.

ತಾಲೂಕಿನ ಹೆಗಡೆಕಟ್ಟಾ ಗ್ರಾಮದಲ್ಲಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಶಿರಸಿ ವತಿಯಿಂದ ಹಮ್ಮಿಕೊಂಡ ರಾಷ್ಟೀಯ ಸೇವಾ ಯೋಜನಾ ವಾರ್ಷಿಕ ವಿಶೇಷ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳಲ್ಲಿ ನಾಯಕತ್ವ ಬೆಳವಣಿಗೆಗೆ ಎನ್ಎಸ್ಎಸ್ ಸಹಕಾರಿಯಾಗಲಿದೆ. ಪದವಿ ವಿದ್ಯಾರ್ಥಿಗಳು ಸಮಾಜದಲ್ಲಿ ನಡೆಯುವ ಸಂಗತಿಗಳನ್ನು ಅರಿಯುವ ಪ್ರಬುದ್ಧತೆ ಹೊಂದಿದವರು. ಶಿಕ್ಷಣವು ಸ್ವಾರ್ಥ ತರದೆ ಸಮಾಜದಲ್ಲಿ ಸಂಕಷ್ಟದಲ್ಲಿರುವವರಿಗೆ ಸ್ಪಂದಿಸುವ ಗುಣ ತಂದುಕೊಡಬೇಕು. ವಿದ್ಯಾರ್ಥಿಗಳು ಗುಣಮಟ್ಟದ ಶಿಕ್ಷಣ ಪಡೆಯುವ ಜತೆಗೆ ಗ್ರಾಮ, ರಾಷ್ಟ್ರದ ಅಭಿವೃದ್ಧಿಗೆ ಪಣತೊಡಬೇಕು ಎಂದ ಅವರು ಪ್ರಾಂಶುಪಾಲರಾದ ದಾಕ್ಷಾಯಿಣಿ ಜಿ.ಹೆಗಡೆ ಅವರು ಉತ್ತಮ ಕಾರ್ಯ ನಿರ್ವಹಿಸುತ್ತಿದ್ದು, ಸದ್ಯದಲ್ಲೇ ಕಾಲೇಜಿನಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಿ ಕುಂದು ಕೊರತೆಗಳನ್ನು ನೀವಾರಿಸುವ ಜತೆಗೆ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಲಾಗುವುದು ಎಂದರು.

ಕಾಲೇಜಿನ‌ ಪ್ರಾಂಶುಪಾಲರಾದ ಪ್ರೊ.ದಾಕ್ಷಾಯಣಿ ಜಿ.ಹೆಗಡೆ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗುವುದರಿಂದ ಸಮಗ್ರ ಕಲಿಕೆ ಹಾಗೂ ವ್ಯಕ್ತಿತ್ವ ವಿಕಸನ ಸಾಧ್ಯ. ಎಸ್ಎಸ್ಎಸ್ ಶಿಬಿರಗಳಿಂದ ವಿದ್ಯಾರ್ಥಿಗಳು ನಾಯಕತ್ವ ಬೆಳೆಸಿಕೊಳ್ಳುವ ಜತೆಗೆ ಗ್ರಾಮೀಣ ಸಮಸ್ಯೆಗಳು ಹಾಗೂ ಜೀವನ ಕ್ರಮವನ್ನು ಅರಿಯಲು ಅನುಕೂಲವಾಗುತ್ತದೆ ಎಂದರು. 

ಎನ್ಎಸ್ಎಸ್ ಯೋಜನಾಧಿಕಾರಿ ಸತೀಶ್ ಎನ್.ನಾಯ್ಕ್ ಪ್ರಾಸ್ತಾವಿಕ ಮಾತನಾಡಿ, ಸದೃಢ ಭಾರತ ನಿರ್ಮಾಣಕ್ಕೆ ಯುವಶಕ್ತಿಯನ್ನು ಸಂಘಟಿಸಲು ಎಸ್ಎಸ್ಎಸ್ ಸಹಕಾರಿಯಾಗಿದೆ‌. ಭಾರತದಲ್ಲಿ 40 ಲಕ್ಷ ವಿದ್ಯಾರ್ಥಿಗಳು ಎನ್ಎಸ್ಎಸ್ ನಲ್ಲಿ ತೊಡಗಿಸಿಕೊಂಡಿದ್ದು, ಗ್ರಾಮಗಳ ಉದ್ಧಾರ ಮುಖ್ಯವಾಗಿಸಿಕೊಳ್ಳಲಾಗಿದೆ. ಶಿರಸಿ ಸರಕಾರಿ ಪದವಿ ಕಾಲೇಜಿನ ವಿದ್ಯಾರ್ಥಿಗಳು ಎನ್ಎಸ್ಎಸ್ ಅಲ್ಲಿ ಹತ್ತು ಹಲವು ಪ್ರಶಸ್ತಿಗಳನ್ನು ಪಡೆದು ಕಾಲೇಜಿನ ಕೀರ್ತಿ ಹೆಚ್ಚಿಸಿದ್ದಾರೆ ಎಂದರು.

ಎನ್ಎಸ್ಎಸ್ ಯೋಜನಾಧಿಕಾರಿ ವಸಂತ್ ಎಸ್.ನಾಯ್ಕ್ ಸ್ವಾಗತಿಸಿ, ವಿದ್ಯಾರ್ಥಿಗಳು ಕಾರ್ಯಕ್ರಮ ನಿರ್ವಹಿಸಿದರು.

ಶಿವಳ್ಳಿ ಗ್ರಾ.ಪಂ ಅಧ್ಯಕ್ಷೆ ವೀಣಾ ವಿನಾಯಕ ಭಟ್ಟ, ಸದಸ್ಯರಾದ ಮಂಜುನಾಥ್ ಸುಬ್ರಾಯ ಹೆಗಡೆ, ನೀಲಕಂಠ ಗಣೇಶ್ ನಾಯ್ಕ್, ಶಕುಂತಲಾ ವಿನಾಯಕ ಹರಿಜನ, ಶಶಿಕಲಾ ಹೆಗಡೆ, ಹೆಗಡೆಕಟ್ಟಾ ಗಜಾನನ ಪ್ರೌಢಶಾಲಾ ಅಧ್ಯಕ್ಷ ಎಂ.ಆರ್.ಹೆಗಡೆ, ಸ.ಹಿ.ಪ್ರಾ ಶಾಲೆ ಮುಖ್ಯ ಶಿಕ್ಷಕ ಸತೀಶ್ ಹೆಗಡೆ, ಎನ್ಎಸ್ಎಸ್ ಸಹಾಯಕ ಅಧಿಕಾರಿಗಳಾದ ಮಮತಾ ನಾಯ್ಕ್, ಮಹಾಲಕ್ಷ್ಮಿ ನಾಯ್ಕ್, ಉಪನ್ಯಾಸಕರಾದ ಎಸ್.ಎಂ.ನೀಲೇಶ್, ಪ್ರಸನ್ನ ನಾಯ್ಕ್, ಸಂದೇಶ್ ಸೇರಿದಂತೆ ಗ್ರಾಮಸ್ಥರು, ಶಿಬಿರಾರ್ಥಿಗಳಿದ್ದರು.

ಶಾಸಕ ಭೀಮಣ್ಣ ನಾಯ್ಕ್ ಅವರನ್ನು ಡೊಳ್ಳಿನ ಮೆರವಣಿಗೆ ಮೂಲಕ ವೇದಿಕೆಗೆ ಕರೆತಂದು ಎನ್ಎಸ್ಎಸ್ ಧ್ವಜಾರೋಹಣ ನೆರವೇರಿಸಲಾಯಿತು. ನಂತರ ಕಾಲೇಜು ಹಾಗೂ ಗ್ರಾಮ ಪಂಚಾಯಿತಿಯಿಂದ ಶಾಸಕರನ್ನು ಸನ್ಮಾನಿಸಲಾಯಿತು. ಇದೇ ಸಂದರ್ಭ ಎಸ್ಸೆಸ್ಸೆಲ್ಸಿಯಲ್ಲಿ ರಾಜ್ಯದಲ್ಲಿ 9 ನೇ ರ್ಯಾಂಕ್ ಪಡೆದ ದ್ರುವಕುಮಾರ್ ಕೆ.ನಾಯ್ಕ್ ಅವರನ್ನು ಸನ್ಮಾನಿಸಲಾಯಿತು.

ಶಿಕ್ಷಣವು ಸ್ವಾರ್ಥ ತರದೆ ಸಮಾಜದಲ್ಲಿ ಸಂಕಷ್ಟದಲ್ಲಿರುವವರಿಗೆ ಸ್ಪಂದಿಸುವ ಗುಣ ತಂದುಕೊಡಬೇಕು. ವಿದ್ಯಾರ್ಥಿಗಳು ಗುಣಮಟ್ಟದ ಶಿಕ್ಷಣ ಪಡೆಯುವ ಜತೆಗೆ ಗ್ರಾಮ, ರಾಷ್ಟ್ರದ ಅಭಿವೃದ್ಧಿಗೆ ಪಣತೊಡಬೇಕು

ಭೀಮಣ್ಣ ಟಿ.ನಾಯ್ಕ್, ಶಾಸಕ

Ad Widget

Related posts

ಶಿವಮೊಗ್ಗದಲ್ಲಿ ತ್ರಿಶತಕ ದಾಟಿದ ಕೊರೊನ, 1335 ಸಕ್ರಿಯ ಪ್ರಕರಣಗಳು

Malenadu Mirror Desk

ಅಣ್ಣಿ ಹಂತಕರು ಚಿಕ್ಕಮಗಳೂರಲ್ಲಿ ಶರಣು, ವಶಕ್ಕೆ ಪಡೆಯಲು ತೆರಳಿದ ಶಿವಮೊಗ್ಗ ಪೊಲೀಸರು

Malenadu Mirror Desk

ಶರಾವತಿ  ಸಂತ್ರಸ್ತರ ವಿಶ್ವಾಸಕ್ಕೆ ಪಕ್ಷಗಳ ಪೈಪೋಟಿ
ಅಡಕೆ ಎಲೆಚುಕ್ಕಿ ರೋಗ,  ಶರಾವತಿ ಮುಳುಗಡೆ ಸಂತ್ರಸ್ತರ ಸಮಸ್ಯೆಗಳೇ ಚುನಾವಣೆ ವಿಷಯ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.