ಶಿವಮೊಗ್ಗ, ಜೂ.೧: ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಸಚಿವರಾದ ಮೇಲೆ ಇದೇ ಮೊದಲ ಬಾರಿಗೆ ಶಿವಮೊಗ್ಗ ಜಿಲ್ಲೆ ಹಾಗೂ ತವರು ಕ್ಷೇತ್ರ ಸೊರಬಕ್ಕೆ ಆಗಮಿಸುತ್ತಿದ್ದು , ಅವರನ್ನು ಅದ್ದೂರಿಯಾಗಿ ಸ್ವಾಗತಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಚುನಾವಣೆ ಫಲಿತಾಂಶದ ಬಳಿಕ ಬೆಂಗಳೂರಿಗೆ ಹೋಗಿದ್ದ ಮಧು ಬಂಗಾರಪ್ಪ ಅವರು ಸಂಪುಟ ವಿಸ್ತರಣೆ ಮತ್ತು ಬಿಡುವಿಲ್ಲದ ರಾಜಕೀಯ ಚಟುವಟಿಕೆಯಲ್ಲಿ ಸಕ್ರಿಯರಾಗಿದ್ದರು. ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಪ್ರಮುಖವಾದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಖಾತೆ ಸಚಿವರಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಶಾಲಾ ಕಾಲೇಜುಗಳು ಮೇ ೩೧ ರಿಂದಲೇ ಆರಂಭವಾಗಿದ್ದರಿಂದ ಇಲಾಖೆಯ ಅಧಿಕಾರಿಗಳ ಸಭೆ, ಮಕ್ಕಳ ಸ್ವಾಗತ ಇತ್ಯಾದಿ ಕಾರ್ಯಕ್ರಮಗಳಿಂದಾಗಿ ತವರು ಜಿಲ್ಲೆಗೆ ಬರಲಾಗಿಲ್ಲ.
ಜೂ. 3 ರಂದು ಮಧು ಬಂಗಾರಪ್ಪ ಅವರು ಬೆಳಗ್ಗೆ 10 ಗಂಟೆಗೆ ನಗರಕ್ಕೆ ಭೇಟಿ ನೀಡಲಿದ್ದು, ಎಂ.ಆರ್.ಎಸ್. ಸರ್ಕಲ್‌ನಿಂದ ಬೈಕ್ ರ್‍ಯಾಲಿ ಮೂಲಕ ಅವರನ್ನು ಬರಮಾಡಿಕೊಳ್ಳಲಾಗುವುದು. ಬಳಿಕ ಶಿವಮೊಗ್ಗದ ಲಗನ ಮಂದಿರದಲ್ಲಿ 11 ಗಂಟೆಗೆ ಸನ್ಮಾನ ಸಮಾರಂಭ ಆಯೋಜಿಸಲಾಗಿದೆ. ಜಿಲ್ಲಾ ಕಾಂಗ್ರೆಸ್ ಹಾಗೂ ಮಧು ಬಂಗಾರಪ್ಪ ಬೆಂಬಲಿಗರು ಸಚಿವರನ್ನು ಸ್ವಾಗತಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ನಗರದೆಲ್ಲೆಡೆ ಸ್ಥಳೀಯ ನಾಯಕರುಗಳು ಪ್ಲೆಕ್ಸ್‌ಗಳು ರಾರಾಜಿಸುತ್ತಿವೆ.
previous post