ಶಿವಮೊಗ್ಗ ತಾಲೂಕು ಚೋರಡಿ ಸಮೀಪ ಭಾನುವಾರ ಸಂಜೆ ಇನ್ನೋವ ಕಾರಿಗೆ ಅಡ್ಡ ಬಂದ ಜಿಂಕೆ ಸ್ಥಳದಲ್ಲಿಯೇ ಸಾವಿಗೀಡಾಗಿದೆ.
ಶಿವಮೊಗ್ಗ ಕಡೆಯಿಂದ ವೇಗವಾಗಿ ಹೋಗುತಿದ್ದ ಇನ್ನೋವಾ ಕಾರಿಗೆ ಜಿಂಕೆ ಅಡ್ಡ ಬಂದಿದೆ. ಕಾರುಚಾಲಕನ ನಿಯಂತ್ರಣಕ್ಕೆ ಸಿಗದ ಕಾರು ಏಕಾಏಕಿ ಜಿಂಕೆಗೆ ಡಿಕ್ಕಿ ಹೊಡೆದಿದೆ. ಕಾರು ಜಖಂಗೊಂಡಿದ್ದು, ಭಾರೀ ಗಾತ್ರದ ಜಿಂಕೆ ಸಾವುಕಂಡಿದೆ.
ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಬಂದು ಮಹಜರು ನಡೆಸಿ ದೂರು ದಾಖಲಿಸಿದ್ದಾರೆ. ಬೇಸಿಗೆ ದಾಹಕ್ಕ ನೀರು ಅರಸಿ ಬರುವ ಕಾಡುಪ್ರಾಣಿಗಳು ಈ ರೀತಿಯ ಅಪಘಾತಕ್ಕೆ ಒಳಗಾಗುತ್ತವೆ. ಕುಮದ್ವತಿ ನದಿಗೆ ಕಟ್ಟಲಾದ ಸೇತುವೆ ಸಮೀಪವೇ ಈ ಘಟನೆ ಸಂಭವಿಸಿದೆ. ಇತ್ತೀಚೆಗಷ್ಟೆ ಇದೇ ಸೇತುವೆ ಮೇಲೆ ಎರಡು ಬಸ್ ಗಳ ಮುಖಾಮುಖಿ ಡಿಕ್ಕಿಯಾಗಿ ಮೂವರು ಜೀವಕಳೆದುಕೊಂಡಿದ್ದರು