Malenadu Mitra
ರಾಜ್ಯ ಶಿವಮೊಗ್ಗ

ಎನ್ ಇ ಎಸ್ ಅಮೃತ ಮಹೋತ್ಸವದ ಸಮಾರೋಪಕ್ಕೆ ಅದ್ದೂರಿ ಸಿದ್ಧತೆ

ಶಿವಮೊಗ್ಗ, ಜೂ19: ಬಡ ಹಾಗೂ ಮದ್ಯಮವರ್ಗದ ಮಕ್ಕಳಿಗೆ ಉತ್ತಮವಾದ ಹಾಗೂ ಉನ್ನತ ಮಟ್ಟದ ಶಿಕ್ಷಣ ನೀಡಬೇಕು ಎಂಬ ಉದ್ದೇಶದಿಂದ ಆರಂಭಗೊಂಡ ರಾಷ್ಟ್ರೀಯ ಶಿಕ್ಷಣ ಸಮಿತಿ75 ರ ಸಂಭ್ರಮ ಮುಗಿಸಿ ಕಳೆದ ವರ್ಷದಿಂದ ನಡೆದ ಅಮೃತ ಮಹೋತ್ಸವದ ಸಮಾರೋಪ ಸಮಾರಂಭಕ್ಕೆ ಕ್ಷಣಗಣನೆ ಆರಂಭ ಗೊಂಡಿದೆ.
ಪ್ರಸ್ತುತ 36 ಸಾವಿರಕ್ಕೂ ಹೆಚ್ಚು ಮಕ್ಕಳನ್ನು ಹೊಂದಿರುವ ಎನ್‌ಇಎಸ್‌ನ ಸಂಸ್ಥೆಯ ಅಮೃತ ಮಹೋತ್ಸವದ ಸಮಾರೋಪ ಸಮಾರಂಭದಲ್ಲಿ ಇಲ್ಲಿಯವರೆಗೆ ಕಟ್ಟಿ ಬೆಳೆಸಿದ ಅಧ್ಯಕ್ಷರು ಗೌರವ ಕಾರ್ಯದರ್ಶಿಗಳು ಹಾಗೂ ಪದಾಧಿಕಾ ರಿಗಳು, ನಿರ್ದೇಶಕರುಗಳನ್ನು ಸ್ಮರಿಸುವ ಜೊತೆಗೆ ಎನ್‌ಇಎಸ್ ಹಬ್ಬವನ್ನು ಶಿವಮೊಗ್ಗ ನಗರದಲ್ಲೊಂದು ವಿಶೇಷ ರಂಗಾಗಿ ಮೂಡಿಸುವಲ್ಲಿ ಪ್ರಸಕ್ತ ಆಡಳಿತ ಮಂಡಳಿ ಕಟಿಬದ್ದವಾಗಿದೆ.
ಶಿಕ್ಷಣದ ಗುಣಮಟ್ಟವನ್ನು ಒಂದೆಡೆ ಅತ್ಯುತ್ತಮವಾಗಿ ರೂಪಿಸಿ ಪ್ರವೇಶ ಶುಲ್ಕವನ್ನು ಬಡ ಹಾಗೂ ಮದ್ಯಮವರ್ಗದ ಮಕ್ಕಳಿಗೆ ಭಾರವಾಗದಂತೆ ರೂಪಿಸಿರುವ ಸಂಸ್ಥೆಯ ಹಿರಿಯರು ಶಿವಮೊಗ್ಗದ ಅತ್ಯಂತ ಪ್ರಬುತ್ವದ ಹಾಗೂ ಪ್ರಧಾನ ಶಿಕ್ಷಣ ಸಂಸ್ಥೆಯನ್ನಾಗಿ ನೀಡಿದ್ದಾರೆ ಎಂದರೆ ತಪ್ಪಾಗಲಿಕ್ಕಿಲ್ಲ.
ಸಂಸ್ಥೆಯ ಪ್ರಸಕ್ತ ಅಧ್ಯಕ್ಷ ಜಿ.ಎಸ್. ನಾರಾಯಣ್ ರಾವ್, ಪ್ರಧಾನ ಕಾರ್ಯ ದರ್ಶಿ ಎಸ್.ಎನ್.ನಾಗರಾಜ್, ಉಪಾ ಧ್ಯಕ್ಷ ಸಿ.ಆರ್.ನಾಗರಾಜ್, ಸಹಕಾರ್ಯ ದರ್ಶಿ ಡಾ. ನಾರಾಯಣ್, ಖಜಾಂಚಿ ಡಿ.ಜಿ.ರಮೇಶ್, ಹಿರಿಯ ನಿರ್ದೇಶಕರಾದ ಟಿ.ಆರ್.ಅಶ್ವಥನಾರಾಯಣಶ್ರೇಷ್ಠಿ ಹಾಗೂ ಎಲ್ಲಾ ನಿರ್ದೇಶಕರು ಹಾಗೂ ಪದಾಧಿಕಾರಿಗಳು, ವಿಶೇಷವಾಗಿ ಶಾಲಾ-ಕಾಲೇಜುಗಳ ಮುಖ್ಯಸ್ಥರು, ಶಿಕ್ಷಕವೃಂದ, ಆಡಳಿತ ಅಧಿಕಾರಿಗಳು ಹಾಗೂ ಪ್ರಬುದ್ಧ ಮಕ್ಕಳ ಕೂಟ ಇಂತಹದೊಂದು ಯಶಸ್ವಿ ಹಬ್ಬದ ಆಚರಣೆಗೆ ತಯಾರಿ ನಡೆಸಿದೆ.

ಶಿವಮೊಗ್ಗ ನಗರದ ಬಹುತೇಕ ಕಡೆ ಪ್ಲೆಕ್ಸಿ ಹಾಗೂ ಬ್ಯಾನರ್‌ಗಳ ಮೂಲಕ ಎನ್‌ಇಎಸ್ ಹಬ್ಬದ ನೆನಪುಗಳನ್ನು ಕಟ್ಟಿಕೊಡುವ ಕಾರ್ಯ ಒಂದೆಡೆ ನಡೆಯುತ್ತಿದ್ದರೆ, ಎನ್‌ಇಎಸ್ ಮೈದಾನ ಈ ಹಬ್ಬಕ್ಕೆ ಅತ್ಯಂತ ವಿಶೇಷವಾಗಿ ಸಜ್ಜಗೊಂಡಿದೆ. ಇಲ್ಲಿ ಪ್ರಮುಖವಾಗಿ ಪ್ರಸಕ್ತ ಮಂಡಳಿ ಈ ಹಬ್ಬವನ್ನು ಶಿವಮೊಗ್ಗ ಜಿಲ್ಲೆಯ ಎನ್‌ಇಎಸ್ ಮಕ್ಕಳ ಹಬ್ಬವಾಗಿ ರೂಪಿಸಿರುವುದು ಅತ್ಯಂತ ವಿಶೇಷ. ೩೬ ಅಂಗ ಸಂಸ್ಥೆಗಳ ಮೂಲಕ ಪ್ರಾಥಮಿಕ, ಪ್ರೌಢ, ಪಿಯು ಪದವಿ ಹಾಗೂ ವಿಶೇಷವಾಗಿ ಇಂಜಿನಿಯರಿಂಗ್, ಡಿಪ್ಲೋಮೋ ಮೂಲಕ ಅತ್ಯಂತ ವ್ಯವಸ್ಥಿತವಾದ ಶಿಕ್ಷಣ ನೀಡುತ್ತಿರುವ ಸಂಸ್ಥೆ ಹಿರಿಯರು ಶಿವಮೊಗ್ಗ ಜಿಲ್ಲೆಗೆ ನೀಡಿದ ವಿಶೇಷ ಕೊಡುಗೆಯೇ ಹೌದು.

ಡಾ. ವಿರೇಂದ್ರ ಹೆಗ್ಗಡೆ ಸಮಾರೋಮ ಭಾಷಣ

ಜೂ.20 ಬೆಳಗ್ಗೆ 10ಗಂಟೆಗೆ ಶಿಕ್ಷಣ ಸಚಿವ ಮಧುಬಂಗಾರಪ್ಪ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದು, ಹಾಸ್ಯ, ಭಾಷಣಕಾರ ಗಂಗಾವತಿ ಪ್ರಾಣೇಶ್ ಆಗಮಿಸಲಿದ್ದಾರೆ. ಸಂಜೆ ಶಾಸಕ ಚೆನ್ನಬಸಪ್ಪ ಅವರಿಗೆ ಗೌರವಿಸಲಾಗುತ್ತಿದೆ. ಸಂಸ್ಥೆಯ 10 ಸಾವಿರಕ್ಕೂ ಹೆಚ್ಚು ಮಕ್ಕಳು ಈ ಹಬ್ಬದಲ್ಲಿ ನಡೆಯಲಿರುವ ಸಾಂಸ್ಕೃತಿಕ ವೈಭವದಲ್ಲಿ ಭಿನ್ನ-ವಿಭಿನ್ನ ಕಾರ್ಯಕ್ರಮಗಳು ನೀಡಲಿದ್ದಾರೆ.
ಜೂನ್.೨೧ರಂದು ಸಮಾರೋಪ ಸಮಾರಂಭದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ, ರಾಜ್ಯಸಭಾ ಸದಸ್ಯ, ರಾಜರ್ಷಿ ಡಾ. ವಿರೇಂದ್ರ ಹೆಗ್ಗಡೆ ಅವರು ಸಮಾರೋಮ ಭಾಷಣ ಮಾಡಲಿದ್ದಾರೆ. ಈ ಸಂದರ್ಭದಲ್ಲಿ ವಿವಿಧ ಗಣ್ಯರನ್ನು ಆಹ್ವಾನಿಸಲಾಗಿದೆ.

Ad Widget

Related posts

ಬೇಳೂರು ಬರೀ ಕೈ ಫಕೀರ, ವಿಜಯೇಂದ್ರರಿಗೆ 126 ಕೋಟಿ ರೂ.ಆಸ್ತಿ
ಆಯೋಗಕ್ಕೆ ಸಲ್ಲಿಸಿದ ಅಭ್ಯರ್ಥಿಗಳ ಆಸ್ತಿ ವಿವರ

Malenadu Mirror Desk

ಬ್ರಿಟಿಷರಿಗಿಂತ ಕ್ರೂರಿ ಸರಕಾರ: ಕಾಗೋಡು ಗುಡುಗು

Malenadu Mirror Desk

ಅನುಕಂಪದ ಅಲೆಯಲ್ಲಿ ಕಿಮ್ಮನೆ, ಅಧಿಕಾರದ ಪ್ರಭಾವಳಿಯಲ್ಲಿ ಆರಗ, ಬುದ್ದಿವಂತರ ಮತಕ್ಷೇತ್ರದಲ್ಲಿ ಕುತೂಹಲ ಘಟ್ಟದಲ್ಲಿ ರಣಕಣ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.