Malenadu Mitra
ರಾಜ್ಯ ಶಿವಮೊಗ್ಗ

ಸುಸಂಸ್ಕೃತ ಶಿಕ್ಷಣ ದೇಶಕ್ಕಿರುವ ಅಗತ್ಯ
ಎನ್ ಇಎಸ್ ಹಬ್ಬ’ ಉದ್ಘಾಟಿಸಿ ಪ್ರೊ. ವೆಂಕಟೇಶ್ವರುಲು ಹೇಳಿಕೆ

ಶಿವಮೊಗ್ಗ : ಭಾರತಕ್ಕೆ ಬೇಕಾಗಿರುವುದು ಸುಸಂಸ್ಕೃತ ಶಿಕ್ಷಣ. ಯಾವುದೇ ಸಾಧನೆಯ ಮೂಲ ಶಿಕ್ಷಣ. ಅಂತಹ ಶಿಕ್ಷಣದ ಪ್ರಾಕಾರಗಳು ಹೊಸತನದೆಡೆಗೆ ಸಾಗುತ್ತಿವೆ. ಜಾಗತಿಕ ವಿದ್ಯಾರ್ಥಿ ಸಮೂಹದಲ್ಲಿರುವ ಶೇ.೫೦ ರಷ್ಟು ವಿದ್ಯಾರ್ಥಿಗಳು ಭಾರತೀಯರು ಎಂಬ ಹೆಗ್ಗಳಿಕೆಯಿದೆ ಎಂದು ತುಮಕೂರು ವಿಶ್ವವಿದ್ಯಾಲಯ ಉಪಕುಲಪತಿ ಪ್ರೊ. ವೆಂಕಟೇಶ್ವರಲು ಹೇಳಿದರು.
ಮಂಗಳವಾರ ನಗರದ ಎನ್ ಇಎಸ್ ಮೈದಾನದಲ್ಲಿ ಏರ್ಪಡಿಸಿದ್ದ ರಾಷ್ಟ್ರೀಯ ಶಿಕ್ಷಣ ಸಮಿತಿ ಅಮೃತಮಹೋತ್ಸವ ಸಮಾರೋಪ ಸಮಾರಂಭ ’ಎನ್ ಇಎಸ್ ಹಬ್ಬ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಶಾಲೆಯೊಂದನ್ನು ತೆರೆದಾಗ ಜೈಲಿನ ಪ್ರಮಾಣ ಕಡಿಮೆಯಾಗುತ್ತದೆ. ಉತ್ತಮ ಶಿಕ್ಷಣ ಮತ್ತು ವ್ಯಕ್ತಿತ್ವಕ್ಕೆ ಅಂತಹ ಶಕ್ತಿಯಿದೆ. ಇಂದು ದೊಡ್ಡ ಗ್ರಂಥಗಳು ಅತ್ಯಂತ ನಿಕೃಷ್ಟ ಸ್ಥಿತಿಯಲ್ಲಿದೆ. ಅದೆಷ್ಟೋ ಕವಿಗಳು, ಸಾಹಿತಿಗಳು ಬರೆಯುವುದನ್ನೆ ಬಿಟ್ಟಿದ್ದಾರೆ ಎಂದು ವಿಷಾದಿಸಿದರು.

ರಾಜ್ಯದಲ್ಲಿ ಖಾಸಗಿ ವಿದ್ಯಾಂಸ್ಥೆಗಳು ಅತ್ಯತ್ತಮ ಶಿಕ್ಷಣವನ್ನು ಕೊಡುತ್ತಿವೆ. ಜಾಗತಿಕ ಮಟ್ಟದಲ್ಲೂ ಎನ್ ಇ ಎಸ್ ನಂತಹ ಸಂಸ್ಥೆಯ ವಿದ್ಯಾರ್ಥಿಗಳು ಕೆಲಸ ಮಾಡುತ್ತಿರುವುದು ಶ್ಲಾಘನೀಯ. ಗುಣಮಟ್ಟದ ಶಿಕ್ಷಣವೊಂದರಿಂದ ಮಾತ್ರ ರಾಷ್ಟ್ರ ನಿರ್ಮಾಣ ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು.

ಸಾಹಿತ್ಯ ನಮ್ಮ ಆರೋಗ್ಯಯುತ ವ್ಯಕ್ತಿತ್ವ ಹೆಚ್ಚಿಸುತ್ತದೆ


ಹಾಸ್ಯ ಭಾಷಣಕಾರ ಗಂಗಾವತಿ ಪ್ರಾಣೇಶ್ ಮಾತನಾಡಿ, ನಮಗೆ ಓದಿನಲ್ಲಿರುವ ಆನಂದ ಮೊಬೈಲ್‌ನಲ್ಲಿ ಸಿಗುವುದಿಲ್ಲ ಮೊಬೈಲ್ ಆರೋಗ್ಯವನ್ನು ಕ್ಷೀಣಿಸಿದರೆ ಸಾಹಿತ್ಯ ನಮ್ಮ ಆರೋಗ್ಯಯುತ ವ್ಯಕ್ತಿತ್ವ ಹೆಚ್ಚಿಸುತ್ತದೆ. ವ್ಯಕ್ತಿಗೆ ವಯಸ್ಸ್ಸಾದಂತೆ ದುರ್ಬಲನಾಗುತ್ತಾನೆ. ಆದರೆ ಸಂಸ್ಥೆಗೆ ವಯಸ್ಸಾದಂತೆ ಬಲಿಷ್ಠವಾಗುತ್ತ ಹೋಗುತ್ತದೆ ಎಂದರಲ್ಲದೆ, ವಿದ್ಯಾರ್ಥಿಗಳು ಕಡಿಮೆ ಮಾತನಾಡುವವರಾಗಬೇಕು, ಸಮಯ, ಸಂದರ್ಭ ನೋಡಿ ಮಾತನಾಡುವ ಗುಣ ಬೆಳೆಸಿಕೊಳ್ಳಬೇಕು. ಸಾಹಿತ್ಯ, ಸಂಸ್ಕೃತಿ ವಿವಿಧ ಕಲಾಪ್ರಕಾರಗಳನ್ನು ಅಳವಡಿಸಿಕೊಂಡು ಸುಸಂಸ್ಕೃತರಾಗಬೇಕು ಎಂದು ಅಭಿಪ್ರಾಯಪಟ್ಟರು.

ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷ ಜಿ.ಎಸ್.ನಾರಾಯಣರಾವ್ ಮಾತನಾಡಿ, ಹಿರಿಯ ಚೇತನಗಳು ಕಟ್ಟಿ ಬೆಳೆಸಿದ ಸಂಸ್ಥೆಗೆ ಅಮೃತಮಹೋತ್ಸವ ಸಂಭ್ರಮ. ಇಂತಹ ದೀರ್ಘಕಾಲಿಕ ಅವಧಿಯಲ್ಲಿ ಶ್ರಮವಹಿಸಿದ ಎಲ್ಲರು ಸದಾ ಪ್ರಾತಃಸ್ಮರಣೀಯ. ಮಾನವಸಂಪನ್ಮೂಲದ ಅಭಿವೃದ್ಧಿಯ ಜೊತೆಗೆ ಮಾನವೀಯ ಮೌಲ್ಯಗಳನ್ನು ಹೆಚ್ಚಿಸುವ ಗುರಿ ಎನ್ ಇಎಸ್ ಸಂಸ್ಥೆಯದಾಗಿದೆ. ಸಂಸ್ಥೆಯಲ್ಲಿ ಓದಿರುವ ಹಿರಿಯ ವಿದ್ಯಾರ್ಥಿಗಳೇ ನಮ್ಮ ಸಂಸ್ಥೆಯ ನಿಜವಾದ ಅಂಬಾಸಿಡರ್ ಗಳು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಿಶ್ವವಿದ್ಯಾಲಯ ರ್‍ಯಾಂಕ್ ವಿಜೇತ ವಿದ್ಯಾರ್ಥಿಗಳಿಗೆ ಹಾಗೂ ಎನ್ ಎಸ್‌ಎಸ್, ಕ್ರೀಡೋತ್ಸವದಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಅಭಿನಂದಿಸಲಾಯಿತು. ಉಪಾಧ್ಯಕ್ಷರಾದ ಸಿ.ಆರ್.ನಾಗರಾಜ, ಕಾರ್ಯದರ್ಶಿ ಎಸ್.ಎನ್.ನಾಗರಾಜ, ಸಹ ಕಾರ್ಯದರ್ಶಿ ಡಾ.ಪಿ.ನಾರಾಯಣ್, ಖಜಾಂಚಿಗಳಾದ ಡಿ.ಜಿ.ರಮೇಶ್ ಉಪಸ್ಥಿತರಿದ್ದರು.

ವಿಶೇಷ ಮಳಿಗೆ

ಕಾರ್‍ಯಕ್ರಮದ ನಿಮಿತ್ತ ಮಲೆನಾಡು ಮೇಳ ಎಂಬ ಮಲೆನಾಡಿನ ವೈಶಿಷ್ಟ್ಯಗಳ ಕುರಿತಾದ ವಿಶೇಷ ಮಳಿಗೆಗಳನ್ನು ಹಾಕಲಾಗಿದೆ. ಇದರಲ್ಲಿ ಮಲೆನಾಡಿನ ಕೃಷಿ ಪರಿಕರಗಳು, ಹಿಂದಿನವರು ಬಳಸುತ್ತಿದ್ದ ವಿವಿಧ ಪಾತ್ರೆ, ಉಪಕರಣ, ತಿಂಡಿ, ಆಹಾರ ಪದ್ಧತಿ, ಮನೆಯ ವೈಶಿಷ್ಟ್ಯ ಮೊದಲಾದ ಪರಂಪರೆಯ ವಸ್ತುಗಳನ್ನಿಡಲಾಗಿದೆ. ಇನ್ನೊಂದೆಡೆ, ಎನ್ ಇ ಎಸ್‌ನ ವಿವಿಧ ಶಾಲಾ-ಕಾಲೇಜಿನ ವಿದ್ಯಾರ್ಥಿಗಳ ವಿಜ್ಞಾನ ವಸ್ತುಪ್ರದರ್ಶನ ನಡೆಯುತ್ತಿದೆ. ಆಹಾರ ಮೇಳವೂ ಇದೆ.

Ad Widget

Related posts

ಸಾರ್ವಜನಿಕ ಸೇವೆಯ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳಿ : ಎಡಿಜಿಪಿ , ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ನಿರ್ಗಮನ ಪಥಸಂಚಲನ

Malenadu Mirror Desk

ಶಾಂತಿ, ಸೌಹಾರ್ದತೆ ಮೂಡಿಸುವಲ್ಲಿ ಧರ್‍ಮಪೀಠಗಳ ಜವಾಬ್ದಾರಿ ಹೆಚ್ಚು : ಶಾಂತಿಗಾಗಿ ನಾವು ಸಭೆಯಲ್ಲಿ ವಿವಿಧ ಮಠಾಧೀಶರ, ಮೌಲ್ವಿ, ಫಾದರ್ ಅಭಿಮತ

Malenadu Mirror Desk

ಶಿವಮೊಗ್ಗ ತಾಲೂಕು ಪುರದಾಳಲ್ಲಿ ಶಿವರಾತ್ರಿ ಜಾತ್ರೆ ಯಕ್ಷಗಾನ,ಸಾಮೂಹಿಕ ಸತ್ಯನಾರಾಯಣ ಪೂಜೆ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.