Malenadu Mitra
ರಾಜ್ಯ ಶಿವಮೊಗ್ಗ

ವಾಣಿಜ್ಯ ವೃತ್ತಿ ಕ್ಷೇತ್ರದಲ್ಲಿ ಅಪಾರ ಅವಕಾಶ, ಡಿವಿಎಸ್ ಪದವಿ ಪೂರ್ವ ಕಾಲೇಜಿನಲ್ಲಿ ಸಿಎ ಕಾರ್ಯಾಗಾರ

ಶಿವಮೊಗ್ಗ: ವಾಣಿಜ್ಯ ವೃತ್ತಿ ಕ್ಷೇತ್ರದಲ್ಲಿ ಅಪಾರ ಉದ್ಯೋಗ ಅವಕಾಶಗಳಿದ್ದು, ಶೈಕ್ಷಣಿಕ ಹಂತದಿಂದಲೇ ವಿದ್ಯಾರ್ಥಿಗಳು ವೃತ್ತಿ ಹಾಗೂ ಸಾಧನೆಯ ಹಾದಿಯಲ್ಲಿ ಮುನ್ನಡೆಯುವ ಬಗ್ಗ ಆಲೋಚನೆ ಮಾಡಬೇಕು ಎಂದು ದೇಶಿಯ ವಿದ್ಯಾಶಾಲಾ ಸಮಿತಿ ಕಾರ್ಯದರ್ಶಿ ಎಸ್.ರಾಜಶೇಖರ್ ಹೇಳಿದರು.
ಶಿವಮೊಗ್ಗ ನಗರದ ದೇಶಿಯ ವಿದ್ಯಾಶಾಲಾ ಸಮಿತಿ ಹಾಗೂ ಡಿವಿಎಸ್ ( ಸ್ವತಂತ್ರ ) ಪದವಿಪೂರ್ವ ಕಾಲೇಜು ಶನಿವಾರ ಆಯೋಜಿಸಿದ್ದ ಲೆಕ್ಕ ಪರಿಶೋಧನಾ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ನಿರಂತರ ಪರಿಶ್ರಮ ವಹಿಸಿದರೆ ಲೆಕ್ಕ ಪರಿಶೋಧಕ ವೃತ್ತಿಯಲ್ಲಿ ಯಶಸ್ಸು ಸಾಧಿಸಬಹುದಾಗಿದೆ. ಮುಂದಿನ ಐದು ವರ್ಷಗಳಲ್ಲಿ ವೃತ್ತಿಪರ ಲೆಕ್ಕ ಪರಿಶೋಧಕನಾಗುವ ಕುರಿತು ಈಗಿನಿಂದಲೇ ಸಿದ್ದತೆ ಆರಂಭಿಸಬೇಕು. ವಿದ್ಯಾರ್ಥಿಗಳ ಉತ್ತಮ ಭವಿಷ್ಯಕ್ಕೆ ಸಂಸ್ಥೆ ಸದಾ ಬೆನ್ನೆಲುಬಾಗಿದೆ ಎಂದು ತಿಳಿಸಿದರು.
ಲೆಕ್ಕ ಪರಿಶೋಧಕ ಕಿರಣ್ ವಸಂತ್ ಮಾತನಾಡಿ, ವಿದ್ಯಾರ್ಥಿಗಳಿಗೆ ಪೋಷಕರು ಸದಾ ಪ್ರೋತ್ಸಾಹಿಸುವ ಕೆಲಸ ಮಾಡಬೇಕು. ಇನ್ನೊಬ್ಬರ ಮಕ್ಕಳ ಜತೆ ಹೋಲಿಕೆ ಮಾಡಬೇಡಿ, ಕಠಿಣ ಸಂದರ್ಭದಲ್ಲಿ ಮಕ್ಕಳ ಜತೆ ನಾವಿದ್ದೇವೆ ಎನ್ನುವ ಧೈರ್ಯವನ್ನು ಪೋಷಕರು ಮೂಡಿಸಬೇಕು. ಇದರಿಂದ ವಿದ್ಯಾರ್ಥಿಗಳಲ್ಲಿ ಧನಾತ್ಮಕ ಆಲೋಚನೆ ಬೆಳೆಯುತ್ತದೆ. ಜೀವನದಲ್ಲಿ ಯಶಸ್ಸು ಗಳಿಸುತ್ತಾರೆ ಎಂದು ಹೇಳಿದರು.

ಡಿವಿಎಸ್ ( ಸ್ವತಂತ್ರ ) ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಎ.ಇ.ರಾಜಶೇಖರ್ ಪ್ರಾಸ್ತಾವಿಕ ಮಾತನಾಡಿ, ಪಿಯು ಪ್ರವೇಶ ಸಂದರ್ಭದಲ್ಲಿ ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ವಿಜ್ಞಾನ, ವಾಣಿಜ್ಯ ಹಾಗೂ ಕಲಾ ವಿಭಾಗದಲ್ಲಿ ಇರುವ ಅವಕಾಶಗಳ ಬಗ್ಗೆ ಮಾರ್ಗದರ್ಶನ ನೀಡಲಾಗುತ್ತದೆ. ದಾಖಲಾತಿ ನಂತರ ಕೂಡ ವಿದ್ಯಾರ್ಥಿಗಳ ಆಯ್ಕೆಯ ವಿಭಾಗದಲ್ಲಿ ಇರುವ ಉದ್ಯೋಗ ಅವಕಾಶಗಳ ಬಗ್ಗೆ ತಿಳಿವಳಿಕೆ ಮೂಡಿಸಲಾಗುತ್ತದೆ. ಪರಿಣಿತರಿಂದ ತರಬೇತಿ ನೀಡಲಾಗುತ್ತದೆ ಎಂದು ತಿಳಿಸಿದರು.

ಪೋಷಕರು ಮಕ್ಕಳಿಗೆ ಧನಾತ್ಮಕ ಬೆಂಬಲ ನೀಡುವ ಕೆಲಸ ಮಾಡಬೇಕು. ವಿದ್ಯಾರ್ಥಿಗಳು ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಡಿವಿಎಸ್ ಸಂಸ್ಥೆಯು ಸದಾ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬರುತ್ತಿದೆ ಎಂದರು.
ದೇಶಿಯ ವಿದ್ಯಾಶಾಲಾ ಸಮಿತಿ ಅಧ್ಯಕ್ಷ ಕೊಳಲೆ ರುದ್ರಪ್ಪ ಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಲೆಕ್ಕ ಪರಿಶೋಧಕ ಸಚಿನ್ ಮಾತನಾಡಿದರು. ಲೆಕ್ಕ ಪರಿಶೋಧಕರಾದ ದೀಪಿಕಾ, ಜೇಸನ್ ಕ್ಯಾಸ್ಟಲಿನೋ, ನಾಗರಾಜ್ ಹೆಬ್ಬಾರ್, ಕಾಲೇಜಿನ ಉಪನ್ಯಾಸಕ ಉಮೇಶ್ ಮತ್ತಿತರರು ಉಪಸ್ಥಿತರಿದ್ದರು.

Ad Widget

Related posts

ಕೋವಿಡ್‌ನಿಂದ ಮೃತರಾದವರಿಗೆ ಪರಿಹಾರಧನ ನೀಡಲು ಕ್ರಮ : ಕೆ.ಬಿ.ಶಿವಕುಮಾರ್

Malenadu Mirror Desk

ಜಗತ್ತಿನ ಶ್ರೇಷ್ಠ ವಿಜ್ಞಾನಿಗಳ ಪಟ್ಟಿಯಲ್ಲಿ ಕುವೆಂಪು ವಿ.ವಿಯ ಬಿ.ಜೆ.ಗಿರೀಶ್ ಮತ್ತು ಬಿ.ಇ. ಕುಮಾರಸ್ವಾಮಿಗೆ ಸ್ಥಾನ

Malenadu Mirror Desk

ಈ ಬಾರಿ ಕಿಮ್ಮನೆ, ಬೇರೆಲ್ಲ ಸುಮ್ಮನೆ ಎಂದ ಮಂಜುನಾಥ್‌ಗೌಡ     19ಕ್ಕೆ ನಾಮಪತ್ರ  ಉಭಯ ನಾಯಕರಿಂದಜಂಟಿ ಪತ್ರಿಕಾಗೋಷ್ಠಿ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.