ಶಿವಮೊಗ್ಗ,ಜು. ೧೦: ವಿಶ್ವವಿಖ್ಯಾತ ಜೋಗದಲ್ಲಿ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದ್ದು ೧೮೫ ಕೋಟಿ ರೂ. ಅನುದಾನದಲ್ಲಿ ಶೇ ೭೦ ಕಾಮಗಾರಿ ಆಗಿದ್ದು, ಡಿಸೆಂಬರ್ ಕೊನೆಯಲ್ಲಿ ಪೂರ್ಣಗೊಳ್ಳಲಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.
ಸೋಮವಾರ ಕಾಮಗಾರಿ ಪ್ರಗತಿ ಪರಿಶೀಲಿಸಿದ ಅವರು ಮಾಧ್ಯಮಗಳೊಂದಿಗೆ ಮಾತನಾಡಿ, ಜೋಗದ ಅಭಿವೃದ್ಧಿಗೆ ಬಿಎಸ್ ವೈ ಸಿಎಂ ಆದಾಗ ಬಜೆಟ್ ನಲ್ಲಿ ೧೮೫ ಕೋಟಿ ಜಿಎಸ್ ಟಿ ಸೇರಿ ಅನುದಾನ ಬಿಡುಗಡೆ ಆಗಿದೆ. ಪ್ರವೇಶದ್ವಾರ, ಮಕ್ಕಳ ಉದ್ಯಾನವನ, ಉಪಾಹಾರ ಗೃಹ. ವಿಶ್ರಾಂತಿ ಗೃಹ, ರೋಪ್ ವೇ ನಿರ್ಮಾಣವಾಗುತ್ತಿದೆ. ೭೦-೮೦ ಗೆಸ್ಟ್ ಹೌಸ್ ಇದೆ. ಹಿಂದಿನ ಸರ್ಕಾರ ಪಿಪಿ ಮಾಡೆಲ್ ನಲ್ಲಿ ಜೋಗ ಅಭಿವೃದ್ಧಿ ನಿರ್ಮಾಣಕ್ಕೆ ಯತ್ನಿಸಿ ವಿಫಲವಾಗಿತ್ತು. ಕ್ಷೇತ್ರದ ಹಿಂದಿನ ಶಾಸಕ ಹಾಲಪ್ಪ ಅವರ ಪ್ರಯತ್ನವೂ ಇದರಲ್ಲಿ ಹೆಚ್ಚಿನದಿದೆ ಎಂದರು.
ಶಿವಮೊಗ್ಗ ವಿಮಾಣ ನಿಲ್ದಾಣದಲ್ಲಿ ಶೀಘ್ರ ವಿಮಾನ ಸಂಚರಿಸಲಿವೆ. ಕೊಡಚಾದ್ರಿಯಲ್ಲಿ ರೋಪ್ ವೇ, ಕೊಲ್ಲೂರಿನಲ್ಲಿ ಹಾರ್ಬರ್ ನಿರ್ಮಾಣಕ್ಕೆ ಪ್ರಸ್ತಾವನೆ ಕಳಿಸಲಾಗಿದೆ. ಅಕ್ಕಮಹಾದೇವಿ ಜನ್ಮಸ್ಥಳ ಅಭಿವೃದ್ಧಿ ಹೀಗೆ ಶಿವಮೊಗ್ಗದ ಅಭಿವೃದ್ಧಿಗಾಗಿ ಹಲವು ಯೋಜನೆ ರೂಪಿಸಲಾಗಿದೆ. ಜಿಲ್ಲೆಗೆ ಪ್ರತಿದಿನ ೫-೧೦ ಸಾವಿರ ಜನ ಪ್ರವಾಸಿಗರು ಬರಬಹುದು ಆ ರೀತಿಯ ಪ್ರವಾಸೋದ್ಯಮ ಹಬ್ ನಿರ್ಮಾಣವಾಗಲಿದೆ ಎಂದು ಸಂಸದರು ವಿವರಿಸಿದರು.
ಅರಣ್ಯ ಸಮಸ್ಯೆ ಇತ್ಯರ್ಥ:
ಜೋಗ ಅಭಿವೃದ್ಧಿಗೆ ಹಣವಿದೆ, ಅರಣ್ಯ ಸಮಸ್ಯೆ ಕ್ಲಿಯರ್ ಆಗಿದೆ. ಮಳೆಗಾಲದಲ್ಲಿ ಶೆಲ್ಟರ್ ಇರಲಿದೆ. ಮೂರು ಗ್ಯಾಲರಿ, ರೋಪ್ ವೇ, ವಾಕ್ ೧೦ ಸಾವಿರ ಜನ ನಿಂತು ಜೋಗ ಜಲಪಾತ ನೋಡಲು ಅನುಕೂಲವಿದೆ. ಎರಡು ಮೂರು ತಿಂಗಳಲ್ಲಿ ಕಾಮಗಾರಿ ಮುಗಿಯಬೇಕಿತ್ತು. ಈಗ ಕೆಲಸಕ್ಕೆ ಮತ್ತಷ್ಟು ವೇಗ ಹೆಚ್ಚಿಸಲಾಗುವುದು. ೧೦೦ ಕೋಟಿ ರೂ.ಕಾಮಗಾರಿ ಕೆಲಸಕ್ಕೆ ಚಾಲನೆ ಆಗಿದೆ. ರಾಜ್ಯ ಸರ್ಕಾರವೂ ಸಹಕರಿಸಿದರೆ ಕಾಮಗಾರಿ ಡಿಸೆಂಬರ್ ಅಂತ್ಯಕ್ಕೆ ಸಂಪೂರ್ಣಗೊಳಿಸಲಾಗುವುದು ಎಂದರು.
ಮಳೆಗಾಲದಲ್ಲಿ ಪಾಲ್ಸ್ ನೋಡಬಹುದು. ಹಬ್ಬ ಹರಿದಿನಗಳಲ್ಲಿ ಫಾಲ್ಸ್ ಗೆ ನೀರು ಹರಿಸಿ ನೋಡಲು ಅನುಕೂಲ ಮಾಡಿಕೊಡಲಾಗುತ್ತದೆ. ಉದ್ಯೋಗವೂ ಸೃಷ್ಠಿ ಆಗಲಿದೆ. ತಲಕಳಲೆ ವಾಟರ್ ಸ್ಪೋರ್ಟ್ ಡೆವಲಪ್ ಮಾಡಲಾಗುತ್ತದೆ. ರೋಪ್ ವೇಗೆ ೨೦೦ ಕೋಟಿ ವೆಚ್ಚದಲ್ಲಿ ನಿರ್ಮಾಣ ಆಗುತ್ತಿದೆ ಎಂದರು
ಮೊಬೈಲ್ ಟವರ್ ಸಭೆ :
ಸಾಗರ ಹೊಸನಗರ ಬೈಂದೂರು ಸೊರಬ ತೀರ್ಥಹಳ್ಳಿಯಲ್ಲಿ ಹೊಸದಾಗಿ ೨೦೭ ಮೊಬೈಲ್ ಟವರ್ ನಿರ್ಮಿಸಲಾಗುತ್ತಿದೆ. ಈ ಬಗ್ಗೆ ವಿಸ್ತ್ರತವಾದ ಚರ್ಚೆ ನಡೆಸಲು ಶಿವಮೊಗ್ಗದಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗುವುದು ಎಂದು ರಾಘವೇಂದ್ರ ಹೇಳಿದರು.