Malenadu Mitra
ರಾಜ್ಯ ಸಾಗರ ಸೊರಬ

ಕಲಾ ವಿದ್ಯಾರ್ಥಿಗಳಿಗೆ ತಾಂತ್ರಿಕ ಕಲಿಕೆಯ ನೈಪುಣ್ಯತೆ ಅಗತ್ಯ: ಎಸ್.ಎಂ.ನೀಲೇಶ


ಸೊರಬ: ಕಲಾ ವಿಭಾಗದ ವಿದ್ಯಾರ್ಥಿಗಳು ತಮ್ಮಲ್ಲಿರುವ ಮಡಿವಂತಿಕೆಯನ್ನು ಹೊರಗಿಟ್ಟು ಸಮಗ್ರ ಅಧ್ಯಯನದ ಜತೆಗೆ ತಾಂತ್ರಿಕ ಕಲಿಕೆಯ ನೈಪುಣ್ಯತೆ ಪಡೆಯಬೇಕು ಎಂದು ಶಿರಸಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಉಪನ್ಯಾಸಕ ಎಸ್.ಎಂ.ನೀಲೇಶ ಹೇಳಿದರು.
ಪಟ್ಟಣದ ಡಾ.ರಾಜ್ ಕಲಾ ಕ್ಷೇತ್ರದಲ್ಲಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಕಲಾ ವಿಭಾಗದ ವಿದ್ಯಾರ್ಥಿಗಳಿಂದ ಮಂಗಳವಾರ ಹಮ್ಮಿಕೊಂಡ ಕಲಾ ವೈಭವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಸೊರಬ ತಾಲೂಕು ಕಲೆ, ಸಾಹಿತ್ಯದಲ್ಲಿ ಗುರುತಿಸಿಕೊಂಡಿದೆ. ಗುಡಿಗಾರ ಸಮಾಜ ಮರಗೆತ್ತನೆಯಲ್ಲಿ ಛಾಪು ಮೂಡಿಸಿದೆ. ಇಲ್ಲಿನ ವಿದ್ಯಾರ್ಥಿಗಳು ಡೊಳ್ಳು ನೃತ್ಯದಲ್ಲಿ ಹೆಸರಾಗಿದ್ದಾರೆ ಎಂದರು.
ವಿದ್ಯಾರ್ಥಿಗಳು ಪದವಿ ಹಂತದಲ್ಲಿಯೇ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಯಲ್ಲಿ ತೊಡಗಬೇಕು. ಮೊಬೈಲ್‌ನ್ನು ಜ್ಞಾನ ಸಂಪಾದಿಸಲು ಬಳಸಿಕೊಳ್ಳಬೇಕೆ ವಿನಃ ಮನಸ್ಸನ್ನು ಚಂಚಲಗೊಳಿಸಿಕೊಳ್ಳಲು ಬಳಸಿಕೊಳ್ಳಬಾರದು. ವಿದ್ಯಾರ್ಥಿಗಳಿಗೆ ದಾರ್ಶನಿಕರ ಸಂದೇಶಗಳ ಜತೆಗೆ ಕುಟುಂಬದ ಏಳುಬೀಳುಗಳು ಹಾಗೂ ತಂದೆ-ತಾಯಿ ಪರಿಶ್ರಮ ಭವಿಷ್ಯಕ್ಕೆ ದಾರಿದೀಪವಾಗಬೇಕು ಎಂದರು.

ಶಿವಮೊಗ್ಗ ಸಮನ್ವಯ ಟ್ರಸ್ಟ್‌ನ ಸಮನ್ವಯ ಕಾಶಿ ಉದ್ಗಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಕಲಿಕೆಯ ಜತೆಗೆ ಕೌಶಲ್ಯಗಳನ್ನು ಬೆಳೆಸಿಕೊಂಡಾಗ ಸರ್ವತೋಮುಖ ಬೆಳವಣಿಗೆ ಸಾಧ್ಯ. ವಿದ್ಯಾರ್ಥಿಗಳು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಾಗ ವ್ಯಕ್ತಿತ್ವ ವಿಕಸನಗೊಳ್ಳುತ್ತದೆ. ಪದವಿಗಳ ಜತೆಗೆ ಕೌಶಲ್ಯಗಳ ಬಗ್ಗೆ ಜ್ಞಾನವಿದ್ದರೆ ಉದ್ಯೋಗ ಪಡೆಯುವುದು ಸುಲಭ ಎಂದ ಅವರು ಕಾಲೇಜಿನಲ್ಲಿ ಪ್ರತೀ ವರ್ಷ ಒಬ್ಬ ವಿದ್ಯಾರ್ಥಿಯನ್ನು ಬೆಸ್ಟ್ ಅವಾರ್ಡ್‌ಗೆ ಆಯ್ಕೆ ಮಾಡಿದರೆ ಶಿವಮೊಗ್ಗ ಸಮನ್ವಯ ಟ್ರಸ್ಟ್‌ನಿಂದ ನಗದು ಹಾಗೂ ಪ್ರಶಸ್ತಿ ಪತ್ರವನ್ನು ನೀಡಲಾಗುವುದು ಎಂದರು.

ಪ್ರಾಂಶುಪಾಲರಾದ ಡಾ.ಎನ್.ಹೇಮಲತಾ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಾನಪದ ಕಲಾವಿದ ಶಿವರುದ್ರಪ್ಪ ಜೋಗಿ ಜಾನಪದ ಗೀತೆಗಳನ್ನು ಹಾಡಿದರು. ಸಹ ಪ್ರಾಧ್ಯಾಪಕರಾದ ಶಂಕರ ನಾಯಕ, ಡಾ.ನೇತ್ರಾವತಿ, ಕೃಷಿಕ ಪ್ರದೀಪ್, ರವಿ ಮಾತನಾಡಿದರು.
ಸಹ ಪ್ರಾಧ್ಯಾಪಕರಾದ ಡಾ.ವಿಶ್ವನಾಥ್, ವೈ.ಯೋಗೀಶ್. ಎಂ.ಎಚ್.ರಾಜಪ್ಪ, ಡಾ.ದಿಲೀಪ್, ಕಾಸನಾಳ ವರ್ಷ, ಮಧುರ ಯಾದವ್, ರವಿ ಕಲ್ಲಂಬಿ, ಎ.ವಿ.ಪವಿತ್ರಾ, ವಸಂತ್ ಕುಮಾರ್, ಗ್ರಂಥಪಾಲಕ ಸಂತೋಷ್ ಇತರರಿದ್ದರು.
ವಿದ್ಯಾರ್ಥಿಗಳಾದ ದೇವರಾಜ್ ಪ್ರಾರ್ಥಿಸಿ, ಸಂದೇಶ್, ಶ್ವೇತಾ ನಿರೂಪಿಸಿ, ಮಧುಕೇಶ್ವರ ವಂದಿಸಿದರು. ಸ್ನೇಹ ನಿರ್ವಹಿಸಿದರು.
ಬಿಎ ಪದವಿಯಲ್ಲಿ ೫ನೇ ರ್‍ಯಾಂಕ್ ಪಡೆದ ಸೌಮ್ಯ ಅವರನ್ನು ಸನ್ಮಾನಿಸಲಾಯಿತು. ವಿವಿಧ ಕ್ರೀಡೆಗಳಲ್ಲಿ ವಿಜೇತರಾದ ಉಪನ್ಯಾಸಕರಿಗೆ ಬಹುಮಾನ ವಿತರಿಸಲಾಯಿತು.

Ad Widget

Related posts

ಕಾಡಾ ಆವರಣದಲ್ಲಿ ವಿಶ್ವ ಪರಿಸರ ದಿನ

Malenadu Mirror Desk

ಬಿಜೆಪಿ ಜಿಲ್ಲಾ ಸಮಿತಿಯಲ್ಲಿ ಈಡಿಗರಿಗಿಲ್ಲ ಸ್ಥಾನ, ಚುನಾವಣೆಗೆ ಈಡಿಗರು ಬೇಕು, ಹುದ್ದೆಗೆ ಬೇಡವೇ ಎಂಬ ಪ್ರಶ್ನೆ ?

Malenadu Mirror Desk

ಸಿಗಂದೂರು ದೇವಾಲಯ ಸುತ್ತಲ ಜಾಗ ತೆರವು

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.