Malenadu Mitra
ರಾಜ್ಯ ಶಿವಮೊಗ್ಗ

ಹಿಟ್ಲರ್‌ನ ಪ್ರಭುತ್ವದಲ್ಲಿ ಧರ್ಮದ ಅಂಧತ್ವದಿಂದ ಜನರ ಹತ್ಯೆಗಳಾದವು: ಬರಹಗಾರ ಎಸ್.ದಿವಾಕರ್ ಅಭಿಪ್ರಾಯ

ಶಿವಮೊಗ್ಗ: ಹಿಟ್ಲರನ ಪ್ರಭುತ್ವದ ನೀತಿಯಿಂದಲೇ ಜನರೇ ಜನರನ್ನು ಧರ್ಮದ ಅಂಧತನದಿಂದ ಕೊಲ್ಲುವಂತಾಯಿತು. ಈ ವಿಷಯವು ಮಾಂಟೋವಿನ ಕಥೆಗಳಲ್ಲಿ ತೀಕ್ಷ್ಣವಾದ ವ್ಯಂಗ್ಯವನ್ನು ಕಟ್ಟಿಕೊಡುತ್ತದೆ ಹಾಗೂ ಅವರ ಕೃತಿಗಳಲ್ಲಿ ಭಾರತ ಮತ್ತು ಪಾಕಿಸ್ತಾನದ ವಿಭಜನೆಯ ಸಂದರ್ಭದಲ್ಲಿ ಜನರ ಕಷ್ಟವನ್ನು ತ್ರಿಶಂಕುಸ್ವರ್ಗದಂತೆ ವಿಮರ್ಶಿಸಿದ್ದಾರೆ” ಎಂದು ಖ್ಯಾತ ಬರಹಗಾರ ಎಸ್.ದಿವಾಕರ್ ರವರು ಅಭಿಪ್ರಾಯ ಪಟ್ಟರು.

ಶಿವಮೊಗ್ಗ ನಗರದ ಕಟೀಲ್ ಅಶೋಕ ಪೈ ಸ್ಮಾರಕ ಕಾಲೇಜಿನ ಆಂಗ್ಲ ವಿಭಾಗ ಹಾಗೂ ಹೆಗ್ಗೋಡಿನ ನೀನಾಸಂ ಪ್ರತಿಷ್ಠಾನದ ಸಹಯೋಗದಲ್ಲಿ ಆಯೋಜಿಸಿದ್ದ ’ ವಿಶ್ವ ಸಾಹಿತ್ಯಕ್ಕೊಂದು ಮುನ್ನುಡಿ’ ಏಕದಿನ ಶಿಬಿರದಲ್ಲಿ ಮಾತನಾಡಿದ ಅವರು, ಟಡ್ಯೂಸ್ ಬೊರೋಸ್ಕಿಯವರ ’ದಿಸ್ ವೇ ಫಾರ್ ದಿ ಗ್ಯಾಸ್ ಲೇಡೀಸ್ ಅಂಡ್ ಜಂಟಲ್ಮನ್’ ಕೃತಿಯನ್ನು ನಿದರ್ಶನವನ್ನಾಗಿಟ್ಟುಕೊಂಡು ” ಒಬ್ಬ ವ್ಯಕ್ತಿ ಹೇಗೆ ಬಂದ, ಏಕೆ ಬಂದ, ಬಂದು ಏನು ಮಾಡಿದ ಎನ್ನುವುದರ ಮೇಲೆ ಸಣ್ಣಕಥೆಗಳು ಸಾಗುತ್ತವೆ ಹಾಗೂ ಅವು ಒಂದೇ ವಾಕ್ಯದಲ್ಲಿ ಸಂಕ್ಷಿಪ್ತ ವಿವರಣೆಯನ್ನು ನೀಡಿ ಅದರ ಬಗ್ಗೆ ಯೋಚನೆ ಮಾಡಲು ಓದುಗರಿಗೆ ಬಿಟ್ಟುಕೊಡುತ್ತವೆ” ಎಂದರು.

ಶಿಬಿರದ ಸಂಪನ್ಮೂಲ ವ್ಯಕ್ತಿಗಳಾದ ಖ್ಯಾತ ಬರಹಗಾರ ಮತ್ತು ಅನುವಾದಕರಾದ ಡಾ.ಮಾಧವ ಚಿಪ್ಪಳ್ಳಿಯವರು ಮಾತನಾಡಿ , ಟಾಲ್ ಸ್ಟಾಯ್,ಸ್ಟಾನಿಸ್ಲಾವಸ್ಕಿ,ಆಂಟೋನ್ ಚೆಕಾವ್ ,ರೂಸೋ ಮುಂತಾದವರ ಸಾಹಿತ್ಯಾಸಕ್ತಿ ವಿಶ್ವ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದೆ ಹಾಗೂ ಅವರ ಕೃತಿಗಳು ತತ್ವಶಾಸ್ತ್ರ ಮತ್ತು ಮನೋವಿಜ್ಞಾನದ ಯೋಚನೆಗಳನ್ನು ಹೊಂದಿದೆ ” ಎಂದು ತಿಳಿಸಿದರು.

ಶಿಬಿರದ ಅಧ್ಯಕ್ಷತೆ ವಹಿಸಿದ್ದ ಕಟೀಲ್ ಅಶೋಕ ಪೈ ಸ್ಮಾರಕ ಕಾಲೇಜಿನ ಪ್ರಾಂಶುಪಾಲರಾದ ಡಾ.ಸಂಧ್ಯಾಕಾವೇರಿಯವರು ಮಾತನಾಡಿ ” ಯಾವುದೇ ಒಂದು ಅಧ್ಯಯನವನ್ನು ಮಾಡುವಾಗ ಅದರ ಚೌಕಟ್ಟಿಗೆ ಮಾತ್ರ ಸೀಮಿತಗೊಳ್ಳದೆ ಅದನ್ನು ಹೊರಜಗತ್ತಿಗೆ ತಂದಾಗ ಮಾತ್ರ ವಿಶ್ವ ಸಾಹಿತ್ಯಕ್ಕೆ ಒಂದು ಹಾದಿ ಸಿಗುತ್ತದೆ , ಶಿಬಿರಗಳನ್ನು ವಿದ್ಯಾರ್ಥಿಗಳು ಉಪಯೋಗಿಸಿಕೊಳ್ಳಬೇಕು ಹಾಗೂ ವಿದ್ಯಾರ್ಥಿಯ ಸಾಮರ್ಥ್ಯವನ್ನು ವೃದ್ಧಿ ಮಾಡಿಕೊಳ್ಳುವುದಕ್ಕೆ ಶಿಬಿರವು ಪೂರಕವಾಗಿದೆ” ಎಂದರು.

ಖ್ಯಾತ ವಾಗ್ಮಿ ಹಾಗೂ ವಿಮರ್ಶಕರಾದಂತಹ ಪ್ರೊ.ಟಿ.ಪಿ.ಅಶೋಕ್ ರವರು ಈ ಶಿಬಿರವನ್ನು ಉದ್ಘಾಟಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಾಲೇಜಿನ ಅಧ್ಯಾಪಕರಾದ ಡಿ.ಎಸ್. ಮಂಜುನಾಥರವರು ಸ್ವಾಗತಿಸಿದರು. ಶ್ರೀಮತಿ ರೇಷ್ಮಾರವರು ನಿರೂಪಿಸಿದರು. ಈ ಸಂದರ್ಭದಲ್ಲಿ ಖ್ಯಾತ ಕತೆಗಾರ್ತಿ ಜಯಶ್ರೀ ಕಾಸರವಳ್ಳಿ, ಮಾನಸ ಸಂಸ್ಥೆಯ ನಿರ್ದೇಶಕರಾದ ಡಾ.ರಜನಿ ಎ. ಪೈ, ಎಮ್.ಸಿ.ಸಿ.ಎಸ್ ನ ನಿರ್ದೇಶಕರಾದ ಪ್ರೊ.ರಾಜೇಂದ್ರ ಚೆನ್ನಿ, ಪ್ರೊ.ನಾಗರಾಜರಾವ್ , ಕಾಲೇಜಿನ ಅಧ್ಯಾಪಕ ವೃಂದ, ಸಿಬ್ಬಂದಿ ವರ್ಗದವರು, ವಿವಿಧ ಕಾಲೇಜಿನ ವಿದ್ಯಾರ್ಥಿಗಳಿದ್ದರು.

Ad Widget

Related posts

ಪುನೀತ್‌ರಂತೆ ಜನಮುಖಿ ಕೆಲಸ ಮಾಡೋಣ: ಮಧುಬಂಗಾರಪ್ಪ , ,ಶಿವಮೊಗ್ಗ ತಾಲೂಕು ಚೋಡನಾಳ ಗ್ರಾಮದಲ್ಲಿ ಅಪ್ಪು ಪುತ್ಥಳಿ ಅನಾವರಣ

Malenadu Mirror Desk

ಹಾಲು ಉತ್ಪಾದಕರ ಬೆನ್ನಿಗೆ ಶಿಮುಲ್ : ಶ್ರೀಪಾದ ನಿಸರಾಣಿ

Malenadu Mirror Desk

ರೋಗಿಗಳನ್ನು ಅಕ್ಕರೆಯಿಂದ ಆರೈಕೆ ಮಾಡುತ್ತಿದ್ದ ನರ್ಸ್ ಮೇಲೆ ಕ್ರೂರ ವಿಧಿಯ ಸವಾರಿ, ಎದೆಯೊಡೆವ ದುಃಖದಲ್ಲಿಯೂ ಅಂಗಾಂಗ ದಾನ ಮಾಡಿದ ಗಾನವಿ ಕುಟುಂಬ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.