ಸಿಗಂದೂರು:
ಚಂದ್ರಯಾನ 3 ನೌಕೆಯ ವಿಕ್ರಂ ಲ್ಯಾಂಡರ್ ಯಶಸ್ವಿಯಾಗಿ ಚಂದ್ರನ ಅಂಗಳದಲ್ಲಿ ಇಳಿಯಲಿ ಎಂದು ಪ್ರಾರ್ಥಿಸಿ ಪ್ರಸಿದ್ದ ಶ್ರದ್ಧಾಕೇಂದ್ರ ಶ್ರೀ ಕ್ಷೇತ್ರ ಸಿಗಂದೂರು ಚೌಡಮ್ಮ ದೇವಸ್ಥಾನದಲ್ಲಿ ಬುಧವಾರ ವಿಶೇಷ ಪೂಜೆ ಸಲ್ಲಿಸಲಾಯಿತು.
ಚಂದ್ರನ ದಕ್ಷಿಣ ಧ್ರುವದಲ್ಲಿ ಲ್ಯಾಂಡರ್ ಯಶಸ್ವಿಯಾಗಿ ಇಳಿದು ಇಸ್ರೋ ಇತಿಹಾಸ ನಿರ್ಮಿಸಲಿ ಎಂದು ಇಂದು 23ರ ಬೆಳಿಗ್ಗೆ 9:30ರಿಂದ ದುರ್ಗಾ ಸಪ್ತಶತಿ ಪಾರಾಯಣ, ಚಂಡಿಕಾ ಹೋಮ ಹಾಗೂ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆದವು.
ಚೌಡಮ್ಮ ದೇವಿ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಹೆಚ್ ಆರ್. ವ್ಯವಸ್ಥಾಪಕ ಪ್ರಕಾಶ್, ಸ್ಥಳೀಯ ಪ್ರಮುಖರು , ಅರ್ಚಕ ವೃಂದ ಸಿಬ್ಬಂದಿಗಳು ಇದ್ದರು.