Malenadu Mitra
ರಾಜ್ಯ ಶಿವಮೊಗ್ಗ

ಕ್ಷಮಿಸಿ.. ಒಂದು ತಿಂಗಳ ಟಿಕೆಟ್ ಬುಕ್ ಆಗಿವೆ
ಆ.೩೧ ರಿಂದ ಶಿವಮೊಗ್ಗ-ಬೆಂಗಳೂರು ವಾಯುಯಾನ ಆರಂಭ

ಶಿವಮೊಗ್ಗ : ಬಹು ನಿರೀಕ್ಷೆಯ ಶಿವಮೊಗ್ಗದಿಂದ- ಬೆಂಗಳೂರು ನಡುವಿನ ವಿಮಾನ ಹಾರಾಟ ಆ.೩೧ ರಿಂದ ಆರಂಭವಾಗಲಿದೆ. ಆರಂಭದ ಮೊದಲನೆ ದಿನಕ್ಕೆ ಸಿದ್ಧತೆ ಭರದಿಂದ ಸಾಗುತ್ತಿದ್ದು ಸಂಸದ ರಾಘವೇಂದ್ರ ಏರ್ ಪೋರ್ಟ್ ಭೇಟಿ ನೀಡಿ ಪರಿಶೀಲಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಂದು ವೇದಿಕೆ ಕಾರ್ಯಕ್ರಮ ಇರುವ ಬಗ್ಗೆ ಯಾವುದೇ ಮಾಹಿತಿ ಇಲ್ಲ. ವೆಬ್‌ಸೈಟ್ ಉದ್ಘಾಟನೆ, ಮೊದಲನೇ ಫ್ಲೈಟ್‌ನಲ್ಲಿ ಬರುವ ಪ್ರಯಾಣಿಕರಿಗೆ ವಾಟರ್ ಜೆಟ್ ಸೆಲ್ಯೂಟ್, ಪ್ರಯಾಣಿಕರಿಗೆ ಇಂಡಿಗೋ ಸಿಬ್ಬಂದಿಗಳು ಹೂವು ಕೊಟ್ಟು ಸ್ವಾಗತಿಸಲಿದ್ದಾರೆ.

ನಿಲ್ದಾಣಕ್ಕೆ ಇಂಟರ್‌ನ್ಯಾಷನಲ್ ಕೋಡ್ ಸಿಕ್ಕಿದೆ. ಆ.೩೧ ರಂದು ಬೆಳಿಗ್ಗೆ ೯-೫೦ ಕ್ಕೆ ಬೆಂಗಳೂರಿನಿಂದ ಹೊರಟ ವಿಮಾನ ೧೧-೦೫ ಕ್ಕೆ ಶಿವಮೊಗ್ಗಕ್ಕೆ ಬರಲಿದೆ. ೧೧-೨೦ ಹೊರಟು ೧೨-೩೫ ಕ್ಕೆ ಬೆಂಗಳೂರು ತಲುಪಲಿದೆ. ಇದು ಬಹಳ ದಿನದ ಕನಸಾಗಿತ್ತು. ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ, ಸಚಿವ ಎಂ ಬಿ ಪಾಟೀಲ್, ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರು ಇಲ್ಲಿ ಪ್ರಯಾಣಿಕರನ್ನು ಸ್ವಾಗತಿಸುವರು. ಶಿವಮೊಗ್ಗದಿಂದ ಬೆಂಗಳೂರಿಗೆ ಹಾರಾಡುವ ವಿಮಾನಗಳು ಸದ್ಯಕ್ಕೆ ಉಡಾನ್ ಯೋಜನೆಯಲ್ಲಿ ಹಾರಾಡುತ್ತಿಲ್ಲ. ವಿಮಾನ ಪ್ರಯಾಣದರ ಬೇಡಿಕೆ ಬಂದಷ್ಟು ಹೆಚ್ಚಲಿದೆ. ಇಡೀ ವಿಶ್ವದಲ್ಲಿರುವ ಸಾಫ್ಟ್ ವೇರ್ ವ್ಯವಸ್ಥೆಯೇ ಹಾಗಿದೆ ಎಂದರು.

ಮುಂದಿನ ದಿನಗಳಲ್ಲಿ ಗೋವಾ, ದೆಹಲಿ ಮತ್ತು ಹೈದ್ರಾಬಾದ್ ಗೆ ಹಾರಾಡುವ ವಿಮಾನಗಳು ಉಡಾನ್ ಯೋಜನೆ ಅಡಿ ಹಾರಾಡಲಿದೆ. ಇವುಗಳಿಗೆ ಸಬ್ಸಿಡಿ ದೊರೆಯಲಿದೆ. ಒಂದು ತಿಂಗಳವರೆಗೆ ಟಿಕೆಟ್ ಲಭ್ಯವಿಲ್ಲ. ಎಲ್ಲವೂ ಬುಕಿಂಗ್ ಆಗಿದೆ. ಏರಿಕೆಯಾದ ಪ್ರಯಾಣ ದರ ನವೆಂಬರ್ ತಿಂಗಳಲ್ಲಿ ಕಡಿಮೆ ಆಗಲಿದೆ. ೧೦ ವರ್ಷದಲ್ಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣವಾಗಿ ಇದು ಮಾರ್ಪಾಡಾಗಲಿದೆ. ಕುವೆಂಪು ವಿಮಾನ ನಿಲ್ದಾಣ ಎಂದು ವೆಬ್ ಸೈಟ್‌ನಲ್ಲಿ ಪ್ರಕಟವಾಗುತ್ತಿದೆ. ಶಿವಮೊಗ್ಗ ರೈಲ್ವೆ ನಿಲ್ದಾಣಕ್ಕೆ ಕೆಳದಿ ರಾಣಿ ಚೆನ್ನಮ್ಮ ಎಂಬ ಹೆಸರಿಡಲಾಗಿದೆ ಎಂದರು.

ಟಿಕೆಟ್ ಸ್ಥಳದಲ್ಲಿಯೇ ಖರೀದಿಸಲು ಅವಕಾಶವಿದೆ. ಗೇಟ್ ನಿಂದ ಕೆನೋಪಿ ತನಕ ವಿಸಿಟರ್ ಸಹ ಬರಲಿದ್ದಾರೆ. ವಿಸಿಟರ್ ಟಿಕೆಟ್ ಗೆ ಅವಕಾಶ ಕಲ್ಪಿಸಲು ಚರ್ಚಿಸಲಾಗುತ್ತಿದೆ. ಏರ್ ಪೋರ್ಟ್ ಭದ್ರತೆಯನ್ನು ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ದಳ (ಕೆಎಸ್‌ಐಎಫ್‌ಸಿ) ನೋಡಿಕೊಳ್ಳಲಿದೆ. ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತೆ ಪಡೆಯ ಭದ್ರತೆಯಲ್ಲ್ಲಿರುವ ಏಳನೇ ಏರ್‌ಪೋರ್ಟ್ ಸಹ ಇದಾಗಿದೆ ಎಂದರು.

ನೈಟ್ ಲ್ಯಾಂಡಿಂಗ್ ಡಿಸೆಂಬರ್‌ನಲ್ಲಿ ಆರಂಭವಾಗುವ ನಿರೀಕ್ಷೆ ಇದೆ. ನೈಟ್ ಲ್ಯಾಂಡಿಂಗ್ ಆದರೆ ಕನೆಕ್ಟಿಂಗ್ ಫ್ಲೈಟ್ಸ್ ಸಿಗಲಿದೆ. ಕೆನೋಪಿಯವರೆಗೆ ಪ್ರಯಾಣಿಕರನ್ನು ಬಿಡಲು ಇಂಡಿಗೋ ಬಸ್‌ಗಳು ಬಂದಿವೆ. ಗೋವಾ, ಚೆನ್ನೈ, ಹೆದ್ರಾಬಾದ್‌ಗೆ ಹಾರಾಡುವ ವಿಮಾನಗಳಲ್ಲಿ ಸ್ಪೈಸ್ ಅಲೈನ್ಸ, ಏರ್ ಇಂಡಿಯಾ, ಸ್ಟಾರ್ ಏರ್ ಲೈನ್ ಮುಂದು ಬಂದಿದೆ. ಆರ್‌ಸಿಎಸ್ ಸೂಟ್‌ನಲ್ಲಿ ೧೮೦ ಸೀಟ್ ಗಳಲ್ಲಿ ೯೦ ಸೀಟ್ ನ ವರೆಗೆ ಸಬ್ಸಿಡಿಗೆ ಸಿಗಲಿದೆ. ೯೦ ಸೀಟ್ ತುಂಬಿದ ಮರು ಸಂಖ್ಯೆಯಿಂದ ಸಬ್ಸಿಡಿ ಸಿಗುವುದಿಲ್ಲ. ವಿಮಾನ ಹಾರಾಟದ ಸಂಸ್ಥೆಗೆ ಸರಕಾರ ಆ ಹಣ ತುಂಬಲಿದೆ

ರಾಘವೇಂದ್ರ ,ಸಂಸದ

Ad Widget

Related posts

ಶಿವಮೊಗ್ಗ ಜಿಲ್ಲೆಯಲ್ಲಿ ಭಾರತ್ ಬಂದ್‌ಗೆ ನಿರಸ ಪ್ರತಿಕ್ರಿಯೆ

Malenadu Mirror Desk

 ಸಂಗೊಳ್ಳಿ ರಾಯಣ್ಣ ಪ್ರತಿಮೆ: ರಾಯಣ್ಣ ಅಭಿಮಾನಿಗಳ ಬಳಗ ಮನವಿ

Malenadu Mirror Desk

ಖಾಸಗಿ ಬಸ್ ಪ್ರಯಾಣ ದರ ಶೇ.25ರಷ್ಟು ಹೆಚ್ಚಳಕ್ಕೆ ನಿರ್ಧಾರ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.