ಶಿವಮೊಗ್ಗ,ಆ.೩೦: ನಾರಾಯಣಗುರು ವಿಚಾರ ವೇದಿಕೆಯ ಶಿವಮೊಗ್ಗ ಜಿಲ್ಲಾ ಮಹಿಳಾ ಘಟಕ ಅಸ್ತಿತ್ವಕ್ಕೆ ಬಂದಿದ್ದು, ಜಿಲ್ಲಾಧ್ಯಕ್ಷರಾಗಿ ಪ್ರಭಾವತಿ ಚಂದ್ರಕಾಂತ್ ಆರೋಡಿ ಆಯ್ಕೆಯಾಗಿದ್ದಾರೆ. ಪ್ರಧಾನ ಕಾರ್ಯದರ್ಶಿಯಾಗಿ ಮಾನಸ ಸತೀಶ್, ಖಜಾಂಚಿಯಾಗಿ ನಳಿನಾ ಉಮೇಶ್ ಆಯ್ಕೆಯಾಗಿದ್ದಾರೆ.
ಶಿವಮೊಗ್ಗ ಜಿಲ್ಲಾ ಈಡಿಗ ಸಮುದಾಯ ಭವನದಲ್ಲಿ ಎಸ್‌ಎನ್‌ಜಿವಿ ರಾಜ್ಯಾಧ್ಯಕ್ಷ ಸತ್ಯಜಿತ್ ಸೂರತ್ಕಲ್ ಅವರ ಸಮ್ಮುಖದಲ್ಲಿ ನಡೆದ ಸಂಘದ ಉದ್ಘಾಟನಾ ಸಭೆಯಲ್ಲಿ ಸಂಘಟನೆಗೆ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು.
ಗೌರವ ಅಧ್ಯಕ್ಷರುಗಳಾಗಿ ಗೀತಾಂಜಲಿ ದತ್ತಾತ್ರೇಯ. ಜಯಂತಿ ಕೃಷ್ಣಮೂರ್ತಿ. ಸುಮತಿ ಆರ್ ಪೂಜಾರಿ. ಉಪಾಧ್ಯಕ್ಷರುಗಳಾಗಿ ಗೀತಾ ರಾಘವೇಂದ್ರ. ಸೀತಮ್ಮ ರಾಜಪ್ಪ. ಸುಮಿತ್ರಾ ಮೋಹನ್. ಸಂಘಟನಾ ಕಾರ್ಯದರ್ಶಿಗಳಾಗಿ ಶೃತಿರವಿ, ಕಸ್ತೂರಿ ಸಾಗರ. ಶಾಲಿನಿ ನಾಗರಾಜ್. ಶ್ವೇತಾ ಬಂಡಿ. ಅಶ್ವಿನಿ ಸತೀಶ್. ಚೈತ್ರಾ ಪ್ರದೀಪ್.ನಿರ್ಮಲ ನವೀನ್. ಪ್ರಿಯಾಂಕ ಪ್ರವೀಣ್ ಹಿರೇಇಡಗೋಡು ನೇಮಕವಾದರು.
ಈ ಸಂದರ್ಭ ಎಸ್‌ಎನ್‌ಜಿವಿ ರಾಜ್ಯ ಕಾರ್ಯಾಧ್ಯಕ್ಷರಾದ ಮುಡಬ ರಾಘವೇಂದ್ರ. ರಾಜ್ಯ ಸಂಘಟನಾ ಕಾರ್ಯದರ್ಶಿ ವೆಂಕಟೇಶ್ ನಾಯ್ಕ. ಶಿವಮೊಗ್ಗ ಜಿಲ್ಲಾ ಅಧ್ಯಕ್ಷರಾದ ಪ್ರವೀಣ್ ಹಿರೇಇಡಗೋಡು. ಜಿಲ್ಲಾ ಸಂಘಟನಾ ಕಾರ್ಯದರ್ಶಿ ಹೊದಲ ಶಿವು. ಖಜಾಂಚಿ ಮೋಹನ್ ಸಿಂಧುವಾಡಿ. ಶಿವಮೊಗ್ಗ ನಗರ ತಾಲ್ಲೂಕು ಅಧ್ಯಕ್ಷರಾದ ಯೋಗೇಶ್ ಹಿರಿಯಡ್ಕ. ಸಾಗರ ತಾಲ್ಲೂಕು ಅಧ್ಯಕ್ಷರಾದ ಚಂದ್ರಶೇಖರ ಸೂರುಗುಪ್ಪೆ. ಚಂದ್ರಕಾಂತ್ ಆರೋಡಿ. ಷಣ್ಮುಖಪ್ಪ ಸೊರಬ ಮತ್ತಿತರರಿದ್ದರು.