ಸಾಗರ: ಸಿಗಂದೂರು: ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿ ಕಾರ್ಯಕ್ರಮವನ್ನು ಶ್ರೀ ಕ್ಷೇತ್ರ ಸಿಗಂದೂರಿನಲ್ಲಿ ನೆರವೇರಿಸಲಾಯಿತು. ನಾರಾಯಣ ಗುರುಗಳ ಭಾವಚಿತ್ರಕ್ಕೆ ದೇವಳ ಆಡಳಿತ ಮಂಡಳಿ ಕಾರ್ಯದರ್ಶಿ ರವಿಕುಮಾರ್ ಹೆಚ್ ಆರ್ ಪುಷ್ಪಾರ್ಚನೆ ಮಾಡಿ ಗೌರವ ಸಮರ್ಪಣೆ ಮಾಡಿದರು.
ಈ ವೇಳೆ ಮಾತನಾಡಿದ ಅವರು ವಿದ್ಯೆಯಿಂದ ಸ್ವತಂತ್ರರಾಗಿ ಸಂಘಟನೆಯಿಂತ ಬಲಯುತರಾಗಿ ಎಂಬ ನಾರಾಯಣ ಗುರುಗಳ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ನಾರಾಯಣ ಗುರುಗಳ ಜಯಂತಿ ಅಂಗವಾಗಿ ದೇವಿಗೆ ಚಂಡಿಕಾ ಹವನ. ಮಹಾ ಮಂಗಳಾರತಿ ವಿಶೇಷ ಪೂಜೆಗಳು ನೇರವೇರಿತು. ಆಲಯದ ಒಳಭಾಗದಲ್ಲಿ ನಾರಾಯಣ ಗುರುಗಳ ಭಾವಚಿತ್ರಕ್ಕೆ ವಿಶೇಷ ಅಲಂಕಾರದೊಂದಿಗೆ ಗುರು ಪೂಜೆ ನೇರವೇರಿತು. ನೆರೆದಿದ್ದ ಭಕ್ತರಿಗೆ ಗುರುಗಳ ಮಹತ್ವ ಸಾರಲಾಯಿತು. ಬೆಳಮಕ್ಕಿಯ ಈಡಿಗ ಆದಿಶಕ್ತಿ ಭಜನಾ ತಂಡದಿಂದ ನಾರಾಯಣ ಗುರುಗಳ ಕಿರ್ತನೆಗಳ ನಿರಂತರ ಭಜನೆ ನಡೆಯಿತು. ಈ ವೇಳೆ ದೇವಸ್ಥಾನದ ವ್ಯವಸ್ಥಪಕ ಪ್ರಕಾಶ, ಸಂಧ್ಯಾ ಸಿಗಂದೂರು. ಭಜನಾ ತಂಡದ ವಿನೋದ, ಸಿಬ್ಬಂದಿಗಳು, ಸ್ಥಳೀಯರು. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.