ಶಿವಮೊಗ್ಗ : ಕೃಷ್ಣ, ರಾಮ ಆಯ್ತು, ನಂತರ ಈಗ ಬಿಜೆಪಿಗೆ ಭಾರತ್ ನಾಮಕರಣ ವಿಷಯ ಸಿಕ್ಕಿದೆ. ಬಿಜೆಪಿ ಪಕ್ಷ ಭಾವನಾತ್ಮಕ ಆಟ ನಿಲ್ಲಿಸಬೇಕು ಎಂದು ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು.
ಶಿವಮೊಗ್ಗದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಈಗ ನಾವೆಲ್ಲರೂ ಸುಖವಾಗಿದ್ದೇವೆ. ತೊಂದರೆ ಆಗುವುದಾದರೂ ಏನು ಅರ್ಥವಾಗುತ್ತಿಲ್ಲ. ಅಧಿಕಾರ ಇದೆಯೆಂದು ಹೀಗೆ ಮಾಡಿದರೆ ಜನರೇ ತಕ್ಕ ಪಾಠ ಕಲಿಸುತ್ತಾರ ಎಂದರು.
ಇಂಡಿಯಾ ಎಂಬ ಹೆಸರಿಗೆ ಯಾವುದೇ ಹಿನ್ನೆಲೆಯೂ ಇಲ್ಲ ಎಂದು ಮಾಜಿ ಗೃಹ ಸಚಿವ ಆರಗ ಜಾ ನೇಂದ್ರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಮೊದಲು ಅವರ ಹಿನ್ನೆಲೆ ಏನು ಎಂದು ತಿಳಿದುಕೊಳ್ಳಲಿ. ರಾಷ್ಟ್ರವನ್ನು ಪ್ರತಿನಿಧಿಸುವ ಕ್ರೀಡಾಪಟುಗಳು ಇಂಡಿಯಾ ಹೆಸರಿನಲ್ಲಿ ದೇಶವನ್ನು ಪ್ರತಿನಿಧಿಸುತ್ತಿದ್ದಾರೆ. ಎವರೆಸ್ಟ್ ಶಿಖರದ ಮೇಲು ಇಂಡಿಯಾ ಎಂಬ ಹೆಸರು ಅಚ್ಚೊತ್ತಿದೆ .ಬಿಜೆಯಯವರು ಸುಮ್ಮನೆ ಭಾವನಾತ್ಮಕ ಆಟ ಆಡುವುದನ್ನು ನಿಲ್ಲಿಸಿ ಒಳ್ಳೆಯ ಕೆಲಸ ಮಾಡಿದ್ದರೆ ಅದನ್ನು ಹೇಳಲಿ ಎಂದರು.
ಸನಾತನ ಧರ್ಮ ಕುರಿತು ತಮಿಳುನಾಡು ಸಿಎಂ ಸ್ಟಾಲಿನ್ ಪುತ್ರ ಉದಯ ನಿದಿ ಹೇಳಿಕೆಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಸಚಿವ ಮಧು ಬಂಗಾರಪ್ಪ ಅವರು, ಅವರವರ ಭಾವನೆಗೆ ಸಂಬಂಧಿಸಿ ಮಾತಾಡಿದ್ದಾರೆ . ನಾನದಕ್ಕೆ ಪ್ರತಿಕ್ರಿಯಿಸಲಾರೆ. ನಾನಾಯ್ತು, ನನ್ನ ಕ್ಷೇತ್ರ, ಇಲಾಖೆ, ನನ್ನ ಜನ ಇದ್ದಾರೆ ಎಂದರು. ಮುಖಂಡರಾದ ಜಿ.ಡಿ ಮಂಜುನಾಥ್,ಎಸ್.ಕೆ ಮರಿಯಪ್ಪ ಸೇರಿದಂತೆ ಹಲವರಿದ್ದರು.