Malenadu Mitra
ರಾಜ್ಯ

ಸಹಕಾರಿ ಕ್ಷೇತ್ರದಿಂದ ದೂರಮಾಡುವ ಸಂಚು ವಿಫಲ,ಡಿಸಿಸಿ ಬ್ಯಾಂಕ್ ಅಧ್ಯಕ್ಷ ಮಂಜುನಾಥ ಗೌಡ ಹೇಳಿಕೆ, ಬ್ಯಾಂಕ್ ಬಲವರ್ದನೆಗೆ ಆದ್ಯತೆ

ಶಿವಮೊಗ್ಗ,ಸೆ.30 :  ಎರಡುವರೆ ವರ್ಷ ಸಹಕಾರಿ ಕ್ಷೇತ್ರದಿಂದ ದೂರವಿದ್ದೆ. ಈ ವೇಳೆ ಬ್ಯಾಂಕಿನ ಯಾವುದೇ ವಿಚಾರವನ್ನು ನಾನು ಮಾತನಾಡಲಿಲ್ಲ. ದೊಡ್ಡವರೆಲ್ಲ ನನ್ನ ಬಗ್ಗೆ ಮಾತನಾಡಿದ್ದರು. ಅದನ್ನು ಸವಾಲಾಗಿ ಸ್ವೀಕರಿಸಿದ್ದೆ. ಟೀಕೆ ಮಾಡಲಿಲ್ಲ. ಆಶೀರ್ವಾದ ಎಂದು ತಿಳಿದಿದ್ದೆ. ನನ್ನನ್ನು ಸಹಕಾರಿ ಕ್ಷೇತ್ರದಿಂದ ಹೊರಗಿಡುವ ಯತ್ನ ವಿಫಲವಾಗಿದೆ ಎಂದು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಅಧ್ಯಕ್ಷ  ಆರ್ ಎಂ ಮಂಜುನಾಥ ಗೌಡ ಹೇಳಿದರು.  

ಪತ್ರಿಕಾಗೋಷ್ಟಿಯಲ್ಲಿ ಈ  ಬಗ್ಗೆ ಮಾಹಿತಿ ನೀಡಿದ ಅವರು, ನೇಮಕಾತಿಯಲ್ಲಿ ಹಗರಣವಾ ಗಿದೆ ಎಂಬ ಆರೋಪ  ಬಂದಿದೆ. ಆ ಆರೋಪದ ತನಿಖೆಗೆ  ಸಹಕರಿಸುವೆ. ಸಹಕಾರ ನೀಡೋಣ. ಏನೂ ಇಲ್ಲವೆಂಬ ವರದಿಯೇ ಬರಬಹುದು  ಎಂಬ ಭವಿಷ್ಯ ನುಡಿದರು.

ನಾನು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನದಿಂದ  ಇಳಿದು ಹೋದಾಗ ಬ್ಯಾಂಕ್ 32 ಕೋಟಿ ಲಾಭದಲ್ಲಿತ್ತು. ಈಗಿನ ವಿಚಾರ  ಹೇಳುವುದಿಲ್ಲ. ಲಾಭದಲ್ಲಿ ಇದೆ. ಮುಂದಿನ ದಿನಗಳಲ್ಲಿ ಅಂಕಿ ಅಂಶ ತಿಳಿಸುವೆ ಎಂದರು.

ಬರ :ಸಹಕಾರ ನೀಡಲು ಸಿದ್ಧ:

ಆಗುಂಬೆ, ನಗರ ಹೋಬಳಿ, ಸಾಗರದ ಬಾರಂಗಿ ಹೋಬಳಿ ಹೊರತು ಪಡಿಸಿ ಜಿಲ್ಲೆಯಲ್ಲಿ ಸಂಪೂರ್ಣ ಬರವಿದೆ. ರೈತರಿಗೆ ಸಹಕಾರ ಸಂಘದಿಂದ ಏನು ಅನುಕೂಲ ಒದಗಿಸಬ ಹುದೋ ಅದನ್ನು  ನೀಡಲು ಸಿದ್ಧ. 2.60 ಲಕ್ಷ ರೈತ ಸದಸ್ಯರಿದ್ದಾರೆ. ಸಂಪೂರ್ಣವಾಗಿ ಆರ್ಥಿಕ ನೆರವು ನೀಡಲು ಐದು ವರ್ಷ ಬೇಕಾಗುತ್ತದೆ. 11 ವರ್ಷದ ಹಿಂದೆ 160 ಕೋಟಿ ಸಾಲ ನೀಡಲಾಗಿತ್ತು. ಅದು 70 ಕೋಟಿಗೆ ಕುಸಿದಿತ್ತು. ಅದನ್ನು ಬಹಳಬೇಗ ಚೇತರಿಕೆ ಮಾಡುವ ನಿಟ್ಟಿನಲ್ಲಿ ಯೋಚಿಸಲಾ ಗುತ್ತಿದೆ.  ಮಹಿಳೆಯರಿಗೆ ಆರ್ಥಿಕ ಸಹಾಯ ಮಾಡಲಾಗುವುದು. ಜನ ಭರವಸೆ ಇಟ್ಟಿದ್ದಾರೆ. ಅದನ್ನು ಈಡೇರಿಸಲಾ ಗುವುದು ಎಂದರು.

ಗೃಹಲಕ್ಷ್ಮೀ ಯೋಜನೆಗೆ ಡಿಸಿಸಿ  ಬ್ಯಾಂಕ್‌ನಿಂದಲೂ ಹಣ  ಬಿಡುಗಡೆ ಮಾಡಲಾಗುತ್ತಿದೆ. ಡಿಸಿಸಿ ಬ್ಯಾಂಕ್ ನಲ್ಲಿ ೧೦ ರೂ ಮೂಲಕ ಖಾತೆ ಆರಂಭಿಸಬಹುದು. ವಾಣಿಜ್ಯ ಬ್ಯಾಂಕ್ ಬಿಟ್ಟು ಇಲ್ಲಿಗೆ ಬನ್ನಿ ಎಂಬ ಉದ್ದೇಶದಿಂದಲ್ಲ, ಬದಲಿಗೆ ನಮ್ಮಲ್ಲಿ ಉತ್ತಮ ಸೇವೆ ನೀಡುವುದಾಗಿ ಭರವಸೆ ನೀಡಲಾಗುತ್ತದೆ.  ಗ್ರಾಮೀಣ ಬ್ಯಾಂಕ್‌ಗಳನ್ನು ಜಿಲ್ಲಾ ಬ್ಯಾಂಕ್ ಅಡಿ ತರಲು ಸರಕಾರ ಯೋಚಿಸುತ್ತಿದೆ ಎಂದರು.

 ಸೇವಾ ಕ್ಷೇತ್ರ: 

ಎಲ್ಲಾ ಕ್ಷೇತ್ರದಲ್ಲಿ ಅಭಿವೃದ್ಧಿ ಹೊಸ ಪರಿಕಲ್ಪನೆ ಬಂದಿದೆ. ಪ್ರಾಥಮಿಕ ಸಹಕಾರ ಕ್ಷೇತ್ರವನ್ನೂ ಸಹ ಸೇವಾ ಕ್ಷೇತ್ರಗಳನ್ನಾಗಿಸಲಾಗುತ್ತಿದೆ. ರೈತರಿಗೆ ಗೊಬ್ಬರ, ಬೆಳೆದ ಬೆಲೆ ಮಾರುಕಟ್ಟೆ ಸೌಲಭ್ಯವನ್ನು ನೀಡಲಾಗುತ್ತದೆ. ಮುಂದಿನ ಐದು ವರ್ಷದಲ್ಲಿ ಸಂಪೂರ್ಣವಾಗಿ ಸಹಕಾರಿ ಕ್ಷೇತ್ರವನ್ನು ಬದಲಾ ಯಿಸಲಾಗುವುದು. ಅಚ್ಚುಕಟ್ಟಾದ ಕಟ್ಟಡಗಳನ್ನು ಎಲ್ಲ ಶಾಖೆಗಳಿಗೆ ಒದಗಿಸಲಾಗುತ್ತದೆ. ಸರ್ಕಾರದ ಸಹಕಾರವಿಲ್ಲದೆ ಇದನ್ನು ನೆರವೇರಿಸಲಾಗುವುದು ಎಂದು ತಿಳಿಸಿದರು.

ಮುಂದಿನ ಐದು ವರ್ಷದಲ್ಲಿ 5000 ಕೋಟಿ ಬಂಡವಾಳದ ಗುರಿ ಮುಟ್ಟಲಾಗುವುದು. 30 ವರ್ಷದ ಹಿಂದೆ 30 ಕೋಟಿ ಇತ್ತು. ಈಗ 2000 ಕೋಟಿ ಬಂಡವಾಳ ಇದೆ.  ಅಪೆಕ್ಸ್ ಬ್ಯಾಂಕ್ ಫೆಡರೇಷನ್‌ವರೆಗೆ ಹಣ ಒದಗಿಸಲಾಗಿದೆ. ಜಾತಿ ಮತ್ತು ಪಕ್ಷ  ರಹಿತ ಬ್ಯಾಂಕ್ ರಚಿಸುವ ಗುರಿ ಹೊಂದಲಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ನಿರ್ದೇಶಕರಾದ ಉಪಾಧ್ಯಕ್ಷ ಎಚ್. ಎಲ್ ಷಡಾಕ್ಷರಿ, ಪರಮೇಶ್, ಯೋಗೀಶ್, ಶ್ರೀಪಾದ ಹೆಗಡೆ, ದುಗ್ಗಪ್ಪಗೌಡ, ಸುರ್, ವ್ಯವಸ್ಥಾಪಕ ನಿರ್ದೇಶಕ  ವಾಸುದೇವ್ ಹಾಗೂ ಇತರರು  ಉಪಸ್ಥಿತರಿದ್ದರು.

ಪೆಟ್ರೋಲ್ ಬಂಕ್, ಗ್ಯಾಸ್ ಏಜೆನ್ಸಿ  ಸ್ಥಾಪನೆಗೆ ಗ್ರಾಮಾಂತರದಲ್ಲಿ ಉತ್ತೇಜನ ನೀಡಲು ಯೋಜಿಸಲಾಗುತ್ತಿದೆ. ಸೂಪರ್ ಮಾರ್ಕೆಟ್ ರೀತಿಯಲ್ಲಿ ಸಹಕಾರಿ ಕ್ಷೇತ್ರವನ್ನು ಬದಲಾಯಿಸಲಾಗುವುದು. ಗ್ರಾಮೀಣ ಮಟ್ಟದಲ್ಲಿ ಸಹಕಾರೀಕರಣ ಮಾಡಲಾಗುತ್ತದೆ. ಸಹಕಾರ ಚಳವಳಿಯು ಸರ್ಕಾರಿ ಚಳವಳಿ ಅಲ್ಲ, ಅದು ಜನರ ಚಳುವಳಿಯಾಗಿದೆ.  ಗುರುತರ ಬದಲಾವಣೆ ಮಾಡಲಾಗುವುದು.

ಆರ್.ಎಂ. ಮಂಜುನಾಥ ಗೌಡ, ಅಧ್ಯಕ್ಷ

Ad Widget

Related posts

ಮುಳುಗಡೆ ಸಂತ್ರಸ್ತರ ಸಮಸ್ಯೆ ಕುರಿತು ಉನ್ನತ ಮಟ್ಟದ ಸಭೆ

Malenadu Mirror Desk

ಶಿಕ್ಷಕರ ಗೃಹ ನಿರ್ಮಾಣ ಸಂಘದ ಚುನಾವಣೆ: ಮಹಾಬಲೇಶ್ವರ ಹೆಗಡೆ ತಂಡಕ್ಕೆ ಭರ್ಜರಿ ಜಯ

Malenadu Mirror Desk

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಹುಟ್ಟು ಹಬ್ಬ: ಸೇವೆ ಮತ್ತು ಸಮರ್ಪಣೆ ಅಭಿಯಾನ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.