ಶಿವಮೊಗ್ಗ: ರಾಜ್ಯದಲ್ಲಿ ಜಾರಿ ಇರುವ ಆಶ್ರಯ ಅಥವಾ ಆರಾಧನಾ ಯೋಜನೆಗಳಿಗೆ ಬಂಗಾರಪ್ಪ ಹೆಸರನ್ನು ನಾಮಕರಣ ಮಾಡಬೇಕೆಂದು ಶಿವಮೊಗ್ಗ ಜಿಲ್ಲಾ ಆರ್ಯ ಈಡಿಗರ ಸಂಘ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರಕಾರಕ್ಕೆ ಮನವಿ ಮಾಡಿದೆ.
ಮಾಜಿ ಮುಖ್ಯಮಂತ್ರಿ ದಿ.ಎಸ್. ಬಂಗಾರಪ್ಪ ಅವರು ಈ ನಾಡು ಕಂಡ ಧೀಮಂತ ನಾಯಕರು ಅವರ ಆಡಳಿತ ಅವಧಿಯಲ್ಲಿ ಆಶ್ರಯ, ಆರಾಧನಾ, ಅಕ್ಷಯ ,ವಿಶ್ವ ಸೇರಿದಂತೆ ಅನೇಕ ಜನಪರ ಯೋಜನೆಗಳನ್ನು ನೀಡಿದ್ದರು. ಇದೇ ಅ.೨೬ ರಂದು ಅವರ ೯೦ ನೇ ಜನ್ಮದಿನವಿದ್ದು, ಅವರ ಹೆಸರು ಅಜರಾಮರವಾಗಿ ಉಳಿಯುವಂತೆ ಮಾಡಲು ಎಸ್.ಬಂಗಾರಪ್ಪ ಆಶ್ರಯ ಯೋಜನೆ, ಅಥವಾ ಎಸ್.ಬಂಗಾರಪ್ಪ ಆರಾಧನಾ ಯೋಜನೆ ಎಂಬುದಾಗಿ ಮರುನಾಮಕರಣ ಮಾಡಬೇಕೆಂದು ಸಂಘ ಸರಕಾರಕ್ಕೆ ವಿನಂತಿ ಮಾಡಿದೆ.
ಸಂಘದ ಜಿಲ್ಲಾಧ್ಯಕ್ಷ ಶ್ರೀಧರ್ ಹುಲ್ತಿಕೊಪ್ಪ, ನಿರ್ದೇಶಕರುಗಳಾದ ವಕೀಲ ಎ.ವೈ.ರಾಮಚಂದ್ರ, ಕೃಷ್ಣಮೂರ್ತಿ, ರುದ್ರಪ್ಪ, ತೇಕಲೆ ರಾಜಪ್ಪ, ಉದಯ್ ಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.