ರಾಜ್ಯದ ಎರಡನೇ ಅತಿದೊಡ್ಡ ದಸರಾ ಮಹೋತ್ಸವ ಎಂಬ ಖ್ಯಾತಿವೆತ್ತ ಶಿವಮೊಗ್ಗ ನಗರದ ದಸರಾ ಉತ್ಸವ ವಿಜಯ ದಶಮಿಯಂದು ದೇವಾನು ದೇವತೆಗಳ ಮೆರವಣಿಗೆ ಬಳಿಕ ಬನ್ನಿಮುಡಿಯುವ ಮೂಲಕ ಸಮಾಪನಗೊಂಡಿತು.
ವಿಜಯದಶಮಿಯಂತ ಸಹಸ್ರಾರು ಸಂಖ್ಯೆಯಲ್ಲಿ ನೆರೆದಿದ್ದ ಜನರ ಸಮ್ಮುಖದಲ್ಲಿ ತಹಸೀಲ್ದಾರ್ ನಾಗರಾಜ್ ಅವರು ಬನ್ನಿ ಕಡಿದರು. ಬಳಿಕ ಜನರು ಪರಸ್ಪರ ಬನ್ನಿ ವಿನಿಮಯ ಮಾಡಿಕೊಂಡು ಶುಭಾಶಯ ವಿನಿಮಯ ಮಾಡಿಕೊಂಡರು.
ನವರಾತ್ರಿಯ ಅಂಗವಾಗಿ ೯ ದಿನಗಳು ಶಿವಮೊಗ್ಗ ಮಹಾನಗರ ಪಾಲಿಕೆ ವತಿಯಿಂದ ಸಂಭ್ರಮದ ಆಚರಣೆ ನಡೆದಿತ್ತು. ವಿಜಯದಶಮಿ ಅಂಗವಾಗಿ ನಗರದ ಎಲ್ಲಾ ದೇವಸ್ಥಾನಗಳಿಂದ ದೇವರನ್ನು ಹೊರಡಿಸಿ ಅಲಂಕೃತ ವಾಹನ ಮತ್ತು ವಾದ್ಯ ಮೇಳದೊಂದಿಗೆ ಮೆರವಣಿಗೆ ನಡೆಸಲಾಯಿತು. ರಾತ್ರಿ ಬನ್ನಿ ಮಂಟಪಕ್ಕೆ ದೇವಾನುದೇವತೆಗಳು ಸೇರಿದ ಬಳಿಕ ಪರಸ್ಪರ ಬನ್ನಿ ಮುಡಿಯಲಾಯಿತು. ಇದಾದ ಬಳಿಕ ಸಿಡಿಮದ್ದ ಪ್ರದರ್ಶನ ನೆರವೇರಿತು.
ಸಂಸದ ಬಿ.ವೈ.ರಾಘವೇಂದ್ರ, ಮೇಲ್ಮನೆ ಸದಸ್ಯ ಡಿ.ಎಸ್.ಅರುಣ್, ಮಹಾನಗರ ಪಾಲಿಕೆ ಮೇಯರ್ ಶಿವಕುಮಾರ್, ಉಪಮೇಯರ್ ಲಕ್ಷ್ಮೀ ಶಂಕರನಾಯ್ಕ್ ಸೇರಿದಂತೆ ಪಾಲಿಕೆ ಸದಸ್ಯರು, ಪ್ರತಿಪಕ್ಷ ನಾಯಕರು ಪಾಲ್ಗೊಂಡಿದ್ದರು.
previous post
next post