ಸೊರಬ: ಪಟ್ಟಣದ ಬಂಗಾರಧಾಮದಲ್ಲಿ ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರ ೯೦ ನೇ ವರ್ಷದ ಜನ್ಮ ದಿನದ ಅಂಗವಾಗಿ ಬಂಗಾರಪ್ಪ ಅವರ ಸಮಾಧಿಗೆ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಮಧು ಬಂಗಾರಪ್ಪ ಅವರು ಕುಟುಂಬದವರೊಂದಿಗೆ ಆಗಮಿಸಿ ಗುರುವಾರ ವಿಶೇಷ ಪೂಜೆ ಸಲ್ಲಿಸಿದರು.
ನಂತರ ಮಾತನಾಡಿದ ಮಧು ಬಂಗಾರಪ್ಪ, ತಂದೆ ಬಂಗಾರಪ್ಪಜೀಯವರು ರಾಜ್ಯ ರಾಜಕಾರಣದಲ್ಲಿ ಒಬ್ಬ ವ್ಯಕ್ತಿಯಾಗಿರದೆ ಒಂದು ಶಕ್ತಿಯಾಗಿ ಗುರುತಿಸಿಕೊಂಡಿದ್ದರು. ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯುವ ನಾನು ಅವರ ಆದರ್ಶವಾದ, ಸಮಾಜವಾದ ಚಿಂತನೆಯ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಆಡಳಿತ ಮಾಡುತ್ತಿದ್ದೇನೆ. ಬಂಗಾರಪ್ಪನವರು ಮುಖ್ಯಮಂತ್ರಿಯಾದ ಅವಧಿಯಲ್ಲಿ ಜಾರಿಗೊಳಿಸಿದ ಅಕ್ಷಯ, ಆಶ್ರಯ, ವಿಶ್ವ, ಆರಾಧನಾ, ಗ್ರಾಮೀಣ ಕೃಪಾಂಕದಂತಹ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದು ಅವುಗಳು ಇಂದಿಗೂ ಜನ ಮಾನಸದಲ್ಲಿ ಉಳಿದುಕೊಂಡು ಬಂದಿದೆ. ಅಲ್ಲದೆ, ನಾಡಿನ ರೈತರ ಹಿತ ಕಾಯಲು ನೀರಿನ ಪಂಪ್ ಸೆಟ್‌ಗಳಿಗೆ ಉಚಿತ ವಿದ್ಯುತ್ ನೀಡುವ ಮೂಲಕ ಅವರ ಆರ್ಥಿಕ ಬದುಕಿಗೆ ನೆರವು ನೀಡಿದ ಅವರ ಚಿಂತನೆ ರಾಜ್ಯಕ್ಕೆ ಅಗತ್ಯವಿದೆ ಎಂದರು.
ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಬಂಗಾರ ಸಂಜೀವಿನಿ ಹೆಸರಿನಲ್ಲಿ ಬೃಹತ್ ರಕ್ತದಾನ ಶಿಬಿರ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಧು ಬಂಗಾರಪ್ಪ ಪತ್ನಿ ಅನಿತಾ ಮಧುಬಂಗಾರಪ್ಪ, ಪುತ್ರ ಸೂರ್ಯ ಮಧುಬಂಗಾರಪ್ಪ, ಸೊರಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಣ್ಣಪ್ಪ ಹಾಲಘಟ್ಟ, ಮಹಿಳಾ ಘಟಕದ ಅಧ್ಯಕ್ಷೆ ಸುಜಾತಾ ಜೊತಾಡಿ, ಹೆಚ್.ಗಣಪತಿ, ಎಲ್.ಜಿ.ರಾಜಶೇಖರ್ ಕುಪ್ಪಗಡ್ಡೆ, ರವಿಕುಮಾರ್ ಮಾಳೇಕೊಪ್ಪ, ಕೆ.ಪಿ.ರುದ್ರಗೌಡ, ಮಂಜುನಾಥ್ ಹಳೇಸೊರಬ, ಹಿರಿಯಣ್ಣ ಕಲ್ಲಂಬಿ, ಎಂ.ಡಿ.ಶೇಖರ್, ಸುರೇಶ್ ಹಾವಣ್ಣನವರ್, ಸಂಜೀವ್ ಆನವಟ್ಟಿ, ಯುವ ಕಾಂಗ್ರೆಸ್ ಅಧ್ಯಕ್ಷ ಪ್ರವೀಣ್ ಕುಮಾರ್, ಉಪಾಧ್ಯಕ್ಷ ಸಂಜಯ್, ಪಾಂಡು, ಫಯಾಜ್ ಅಹ್ಮದ್, ಸಂತೋಷ್ ಕೊಡಕಣಿ, ರವಿ ಬರಗಿ, ಇತರರಿದ್ದರು.
ಬಿಜೆಪಿ ಕಾರ್ಯಕರ್ತರು, ಬಂಗಾರಪ್ಪ ಅಭಿಮಾನಿಗಳಿಂದ ಜನ್ಮದಿನ
ಸೊರಬ: ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರ ೯೦ನೇ ವರ್ಷದ ಜನ್ಮದಿನವನ್ನು ಬಿಜೆಪಿ ಕಾರ್ಯಕರ್ತರು ಹಾಗೂ ಬಂಗಾರಪ್ಪ ಅಭಿಮಾನಿ ಬಳಗದಿಂದ ಪಟ್ಟಣದ ಖಾಸಗಿ ಬಸ್ ನಿಲ್ದಾಣದ ಆವರಣದಲ್ಲಿರುವ ಬಂಗಾರಪ್ಪ ಅವರ ಪುತ್ಥಳಿಗೆ ಹೂವಿನ ಹಾರ ಹಾಕುವ ಮೂಲಕ ಆಚರಿಸಿದರು.
ಈ ಸಂದರ್ಭದಲ್ಲಿ ಪುರಸಭೆ ಸದಸ್ಯ ಎಂ.ಡಿ.ಉಮೇಶ್ ಮಾತನಾಡಿ, ಬಂಗಾರಪ್ಪನವರು ರಾಜ್ಯ ಕಂಡಂತಹ ಅಪರೂಪದ ವರ್ಣರಂಜಿತ ಜಾತ್ಯಾತೀತ ರಾಜಕಾರಣಿಯಾಗಿದ್ದು, ಅವರು ಮುಖ್ಯಮಂತ್ರಿಯಾದ ಅವಧಿಯಲ್ಲಿ ತಂದಿರುವ ರೈತರಿಗೆ ಉಚಿತ ವಿದ್ಯುತ್, ಆಶ್ರಯ, ಅಕ್ಷಯ, ಗ್ರಾಮೀಣ ಕೃಪಾಂಕ ಇವುಗಳು ಇಂದಿಗೂ ಜನಮಾನಸದಲಿದ್ದು, ಇವರ ಆದರ್ಶಗಳನ್ನು ಯುವಜನತೆ ಪಾಲನೆ ಮಾಡಬೇಕು ಎಂದರು.
ಈ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ಈರೇಶಪ್ಪ ಮೇಸ್ತ್ರಿ, ಮಧುರಾಯ್ ಜಿ.ಶೇಟ್, ಪ್ರಭು ಮೇಸ್ತ್ರಿ, ನಟರಾಜ ಉಪ್ಪಿನ, ಜಯಲಕ್ಷ್ಮಿ, ಪ್ರಮುಖರಾದ ಗುರುಮೂರ್ತಿ, ದೇವೇಂದ್ರಪ್ಪ ಚೆನ್ನಾಪುರ, ಸೋಮಶೇಖರ್, ಯೂಸೂಫ್ ಸಾಬ್, ಬಸವರಾಜ ಕೊಡಕಣಿ, ಜಾನಕಪ್ಪ ಯಲಸಿ, ಅಶೋಕ ಶೇಟ್, ಪರಶುರಾಮ ಹಾಲಗಳಲೆ, ಕಿರಣ್, ರಘು ಭಂಡಾರಿ, ಭರಮಪ್ಪ, ಸೋಮಶೇಖರ್, ಹುಚ್ಚಪ್ಪ, ಕೃಷ್ಣಮೂರ್ತಿ, ಶಿವಕುಮಾರ್ ಇತರರಿದ್ದರು.