Malenadu Mitra
ತೀರ್ಥಹಳ್ಳಿ ರಾಜ್ಯ ಶಿವಮೊಗ್ಗ

ಸವಾಲುಗಳನ್ನು ಎದುರಿಸಿ, ಎತ್ತರಕ್ಕೇರಿದ ಮಂಜುನಾಥಗೌಡರು:ಆರ್.ಎಂ.ಎಂ.ಗೆ ಸನ್ಮಾನ ಕಾರ್ಯಕ್ರಮದಲ್ಲಿ ಆಯನೂರು ಮಂಜುನಾಥ್ ಹೇಳಿಕೆ

ಶಿವಮೊಗ್ಗ: ಕಷ್ಟಗಳನ್ನು ಅರಗಿಸಿಕೊಂಡು ಪರಿ ಪಕ್ವವಾದವರು ಆರ್.ಎಂ ಮಂಜುನಾಥ ಗೌಡರು ಎಂದು ಮಾಜಿ ಸಂಸದ ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಹೇಳಿದರು.
ತೀರ್ಥಹಳ್ಳಿಯಲ್ಲಿ ಸಹಕಾರಿ ವೇದಿಕೆ ವತಿಯಿಂದ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಆರ್.ಎಂ. ಮಂಜುನಾಥಗೌಡರಿಗೆ ಹಮ್ಮಿಕೊಳ್ಳಲಾಗಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಆರ್.ಎಂ. ಮಂಜುನಾಥ ಗೌಡರು ಒಬ್ಬ ಧೀಮಂತ ನಾಯಕರು. ಸಹಕಾರ ಕ್ಷೇತ್ರದ ಧ್ರುವತಾರೆಯಾಗಿದ್ದವರು. ಇನ್ನೇನು ಸಹಕಾರ ಕ್ಷೇತ್ರದಲ್ಲಿ ಅವರ ಅಧ್ಯಾಯ ಮುಗಿದೇ ಹೋಯಿತು ಎನ್ನುವ ಹಂತದಿಂದ ಮೇಲೆ ಎದ್ದು ಬಂದವರು. ಸವಾಲುಗಳನ್ನು ಸ್ವೀಕರಿಸಿದವರು ಎಂದರು.

ಶಾಸಕ ಬೇಳೂರು ಗೋಪಾಲಕೃಷ್ಣ ಮಾತನಾಡಿ, ಆರ್.ಎಂ. ಮಂಜುನಾಥ ಗೌಡರನ್ನು ಸಹಕಾರ ಕ್ಷೇತ್ರ ದಿಂದಲೇ ಮುಗಿಸಿಬಿಡಬೇಕು ಎಂಬ ಹುನ್ನಾರಗಳೆಲ್ಲ ಈಗ ಮುಗಿದುಹೋಗಿವೆ. ಅವರು ಮತ್ತಷ್ಟು ಗಟ್ಟಿಯಾಗಿದ್ದಾರೆ. ಸಹಕಾರ ಕ್ಷೇತ್ರವನ್ನು ದಶಕಗಳ ಕಾಲ ಕಟ್ಟಿ ಬೆಳೆಸಿ ರೈತರ, ಬಡವರ ಪರವಾಗಿ ನಿಂತವರು. ಖಾಸಗಿ ಸಂಸ್ಥೆಗಳ ಕಪಿಮುಷ್ಟಿಗೆ ಸಿಲುಕಿ ನಲುಗುತ್ತಿದ್ದ ರೈತರನ್ನು ಸಹಕಾರ ಕ್ಷೇತ್ರದ ಮೂಲಕ ಉಳಿಸಿಕೊಂಡವರು. ಅವರನ್ನು ಸಹಕಾರ ಕ್ಷೇತ್ರದಿಂದ ಓಡಿಸಲು ಯಾರಿಂದಲೂ ಸಾಧ್ಯವಿಲ್ಲ. ಅವರಿಗೆ ಉತ್ತಮ ರಾಜಕೀಯ ಭವಿಷ್ಯವಿದೆ. ಅವರಿಗೆ ತವರೂರಲ್ಲಿ ಸನ್ಮಾನಿಸುತ್ತಿರುವುದು ಅತ್ಯಂತ ಖುಷಿ ತಂದಿದೆ ಎಂದರು.
ಕಾರ್ಯಕ್ರಮದಲ್ಲಿ ಆರ್. ಎಂ. ಮಂಜುನಾಥ ಗೌಡ ಅವರನ್ನು ಸನ್ಮಾನಿಸಲಾಯಿತು.
ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್. ಸುಂದರೇಶ್, ಹಿರಿಯ ಸಹಕಾರಿ ವಿಜಯ ದೇವ್, ತಾ.ಪಂ. ಅಧ್ಯಕ್ಷೆ ಗೀತಾ, ಕಲಗೋಡು ರತ್ನಾಕರ್, ಶ್ರೀಪಾದ್ ಹೆಗಡೆ, ನಾರಾಯಣ ರಾವ್, ಷಡಾಕ್ಷರಿ, ವೈ.ಹೆಚ್. ನಾಗರಾಜ್, ಶಂಕರಘಟ್ಟ ರಮೇಶ್, ಮುಡುಬ ರಾಘವೇಂದ್ರ, ಪಿ.ಒ.ಶಿವಕುಮಾರ್, ಮೋಹನ್, ದುಗ್ಗಪ್ಪ ಗೌಡ, ಜೆ.ಪಿ. ಯೋಗೀಶ್, ರಾಜಣ್ಣ ರೆಡ್ಡಿ ಸೇರಿದಂತೆ ಹಲವರಿದ್ದರು.

ಬೈಕ್ ರ್‍ಯಾಲಿ,ಬೃಹತ್ ಸೇಬಿನ ಹಾರ.
ತೀರ್ಥಹಳ್ಳಿ ಪಟ್ಟಣದಲ್ಲಿ ಶಿವಮೊಗ್ಗ ಜಿಲ್ಲಾ ಡಿ.ಸಿ.ಸಿ.ಬ್ಯಾಂಕ್ ಅಧ್ಯಕ್ಷ ಡಾ.ಆರ್.ಎಂ.ಮಂಜುನಾಥ್ ಗೌಡರವರಿಗೆ ಹಮ್ಮಿಕೊಂಡಿದ್ದ ತೌರೂರ ಸಂಮಾನ ಕಾರ್ಯಕ್ರಮಕ್ಕೂ ಮುನ್ನ ಅದ್ದೂರಿ ಮೆರವಣಿಗೆಯನ್ನು ಪಟ್ಟಣದ ಪ್ರಮುಖ ಬೀದಿಯಲ್ಲಿ ಮಾಡಲಾಯಿತು.
ಪಟ್ಟಣದ ಗಾಂಧಿಭವನದ ಕಾಂಗ್ರೆಸ್ ಕಛೇರಿಯಿಂದ ಹೊರಟ ಬೈಕ್ ರ್ಯಾಲಿಯೊಂದಿಗೆ ಚಂಡೆ,ಹುಲಿವೇಷ ದೊಂದಿಗೆ ಸಾವಿರಾರು ಕಾರ್ಯಕರ್ತರು ಬೈಕ್ ರ್‍ಯಾಲಿ ನಡೆಸಿದರು.
ಪಟ್ಟಣದ ಗಾಂಧಿಚೌಕದಲ್ಲಿ ಮೆರವಣಿಯೊಂದಿಗಿದ್ದ ಆರ್.ಎಂ.ಮಂಜುನಾಥ್ ಗೌಡರಿಗೆ ಬೃಹತ್ ಸೇಬಿನ ಹಾರ ಹಾಕುವ ಮೂಲಕ ಪಟಾಕಿ ಸಿಡಿಸಿ, ಜಯಘೋಷದೊಂದಿಗೆ ಆರ್.ಎಂ.ಎಂ.ಅಭಿಮಾನಿಗಳು ವೇದಿಕೆಗೆ ಕರೆತಂದರು.

Ad Widget

Related posts

ಕಂದಾಯ ಗ್ರಾಮ ಘೋಷಣೆಗೆ ಕಾಗೋಡು ತಿಮ್ಮಪ್ಪ ಒತ್ತಾಯ, ಸರಕಾರ ಸ್ಪಂದಿಸದಿದ್ದಲ್ಲಿ ಹೋರಾಟದ ಎಚ್ಚರಿಕೆ

Malenadu Mirror Desk

ಕಾಂಗ್ರೆಸ್ ಸೇರಿದ ಮಂಜುನಾಥಗೌಡ, ಕಿಮ್ಮನೆ ಏನು ಹೇಳಿದ್ದಾರೆ ಗೊತ್ತೇ ?

Malenadu Mirror Desk

ಕಣ್ಣೂರು ಕಚ್ಚಾಬಾಂಬ್ ಸ್ಫೋಟದ ಹಿಂದಿನ ಅಸಲಿಯತ್ತು ಗೊತ್ತಾ ?, ಬಚ್ಚಲುಮನೆ ಒಲೆಯಲ್ಲಿ ಬಾಂಬಿಟ್ಟು ಕೊಲೆ ಸಂಚು ನಡೆದಿತ್ತಾ ?

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.