Malenadu Mitra
ರಾಜ್ಯ ಶಿವಮೊಗ್ಗ

ಬೃಹತ್‌ ಸ್ವದೇಶಿ ಮೇಳದಲ್ಲಿ ಮಳಿಗೆಗೆ ಬುಕ್ಕಿಂಗ್‌

ಶಿವಮೊಗ್ಗ: ಜಿಲ್ಲಾ ಸ್ವದೇಶಿ ಜಾಗರಣ ಮಂಚ್‌ ವತಿಯಿಂದ ಮುಂದಿನ ತಿಂಗಳು ಡಿಸೆಂಬರ್‌ 6 ರಿಂದ 10 ರವರೆಗೆ ನಗರದ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್‌ ಸ್ವದೇಶಿ ಮೇಳ ಆಯೋಜನೆಗೊಂಡಿದ್ದು,ಈಗಾಗಲೇ ಮಳಿಗೆ ಹಾಕಲು ಬುಕ್ಕಿಂಗ್‌ ಆರಂಭಗೊಂಡಿದೆ.

ಜನರಿಗೆ ಸ್ವದೇಶಿ ವಸ್ತುಗಳ ಪರಿಚಯ ಮಾಡಿಸುವುದರ ಜೊತೆಗೆ ದೇಶೀಯ ಉತ್ಪಾದಕರಿಗೆ ಮಾರುಕಟ್ಟೆ ಒದಗಿಸುವ ದೃಷ್ಟಿಯಿಂದ 250ಕ್ಕೂ ಹೆಚ್ಚು ಮಳಿಗೆಗಳು ಭಾಗವಹಿಸಲಿವೆ. 1 ಲಕ್ಷಕ್ಕೂ ಹೆಚ್ಚು ವಿವಿಧ ವರ್ತಕರು, ಉದ್ಯಮಿಗಳು ಹಾಗೂ ಸಾರ್ವಜನಿಕರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ವಿವಿಧ ರೀತಿಯ ತರಬೇತಿಗಳು, ದೇಶೀಯ ಕ್ರೀಡೆಗಳು ಹಾಗು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

ಈ ಮೇಳದಲ್ಲಿ ಕೇಂದ್ರದ ಮಂತ್ರಿಗಳು, ರಾಜ್ಯದ ಪ್ರಮುಖ ಸ್ವಾಮೀಜಿಗಳು ಹಾಗೂ ರಾಜ್ಯದ ಮತ್ತು ಜಿಲ್ಲೆಯ ಪ್ರಮುಖ ಗಣ್ಯರು ಪಾಲ್ಗೊಳ್ಳಲಿದ್ದಾರೆ. ಮೇಳದಲ್ಲಿ ಮಳಿಗೆ ಹಾಕಲು ಆಸಕ್ತರು ಈ ಕೆಳಗಿನ ದೂರವಾಣಿಯನ್ನು ಸಂಪರ್ಕಿಸಲು ಕೋರುವಂತೆ ಸ್ವದೇಶಿ ಮೇಳದ ಸಂಯೋಜಕರಾದ ಡಾ ಧನಂಜಯ ಸರ್ಜಿ, ಸಂಚಾಲಕರಾದ ಡಿ. ಎಸ್‌. ಅರುಣ್‌ ಹಾಗೂ ಸಂಘಟಕರಾದ ಹರ್ಷ ಬಿ. ಕಾಮತ್‌ ಅವರು ಪತ್ರಿಕಾ ಪ್ರಕಟಣೆಯಲ್ಲಿ ಕೋರಿದ್ದಾರೆ.

Ad Widget

Related posts

ತಹಶೀಲ್ದಾರ್‌ಗಳ ವರ್ಗಾವಣೆ ನಾನು ಮಾಡಿಸಿಲ್ಲ, ಸುಳ್ಳು ಆರೋಪ ಸರಿಯಲ್ಲ
ಶಾಸಕ ಕುಮಾರ ಬಂಗಾರಪ್ಪ ಹೇಳಿಕೆ

Malenadu Mirror Desk

ಭದ್ರಾವತಿಯಲ್ಲಿ ಮಾ.೧೩ಕ್ಕೆ ಪ್ರತಿಭಟನೆ: ಖರ್ಗೆ,ಸಿದ್ದರಾಮಯ್ಯ ಭಾಗಿ

Malenadu Mirror Desk

ಮಧು ಬಂಗಾರಪ್ಪ ಹೆಸರು ಕೈಬಿಟ್ಟಿದ್ದೇಕೆ ಗೊತ್ತಾ ?

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.