Malenadu Mitra
ರಾಜ್ಯ ಶಿವಮೊಗ್ಗ

ಕಾಂತರಾಜ್ ವರದಿ ಜಾರಿಗೆ ಶ್ರೀ ನಾರಾಯಣಗುರು ವಿಚಾರ  ವೇದಿಕೆ ಆಗ್ರಹ

ಶಿವಮೊಗ್ಗ: ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ನಡೆಸಿರುವ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ಯಾದ ಕಾಂತರಾಜ್ ವರದಿಯನ್ನು ಶೀಘ್ರವೇ ಅನುಷ್ಠಾನಕ್ಕೆ ತರಬೇಕು ಎಂದು ಶ್ರೀ ನಾರಾಯಣಗುರು ವಿಚಾರ  ವೇದಿಕೆಯ ಜಿಲ್ಲಾಧ್ಯಕ್ಷ ಪ್ರವೀಣ್ ಹಿರೇಇಡಗೋಡು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಹಿಂದುಳಿದ ಆಯೋಗಗಳ ಸಾಮಾಜಿ, ಶೈಕ್ಷಣಿಕ ಸಮೀಕ್ಷೆ ನಡೆದು ಅದರ ವರದಿಯೂ ಸಿದ್ಧವಾಗಿದೆ. ಈ ವರದಿಗಾಗಿಯೇ ೧೮೦ ಕೋಟಿ ರೂ.ಖರ್ಚು ಮಾಡಲಾಗಿದೆ. ಸರ್ಕಾರದ ಅಧಿಕೃತ ಸಂಸ್ಥೆಯಿಂದಲೇ ಈ ವರದಿಯನ್ನು ಸಿದ್ಧಪಡಿಸಲಾಗಿದೆ. ಕಾಂತರಾಜ್ ನೇತೃತ್ವದಲ್ಲಿ ವರದಿ ಮಂಡನೆಯಾಗಿ ಇಷ್ಟು ವರ್ಷಗಳಾ ದರೂ ಸರ್ಕಾರಕ್ಕೆ ಅದನ್ನು ಸಲ್ಲಿಸಲಾಗಿಲ್ಲ. ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಂದ ರಾಜಕೀಯ ಪಕ್ಷಗಳು ಕೂಡ ಇದನ್ನು ಸ್ವೀಕಾರ ಮಾಡಿಲ್ಲ ಎಂದು ದೂರಿದರು.
ಇದಕ್ಕೆ ಸಂಬಂಧಿಸಿದಂತೆ ರಾಜ್ಯಸರ್ಕಾರ ಮತ್ತು ಹಿಂದುಳಿದ ಆಯೋಗ ಶೀಘ್ರವೇ ಇದನ್ನು ಬಹಿರಂಗಪಡಿಸಬೇಕು. ಆಯೋಗ ತಕ್ಷಣವೇ ಸರ್ಕಾರಕ್ಕೆ ನೀಡಬೇಕು. ಸರ್ಕಾರ ಕೂಡ ಪರಿಷ್ಕರಣೆಯ ನೆಪ ಹೇಳದೆ ಅದನ್ನು ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.
ರಾಜ್ಯದಲ್ಲಿ ದಿ.ಡಿ.ದೇವರಾಜ್ ಅರಸು ಅವರು ಮುಖ್ಯಮಂತ್ರಿಯಾಗಿದ್ದಾಗ ಹಾವನೂರು ವರದಿ ಜಾರಿಗೊಳಿಸಿದ್ದರು. ೧೯೯೨ರಲ್ಲಿ ವಿ.ಪಿ.ಸಿಂಗ್ ಅವರು ಪ್ರಧಾನಮಂತ್ರಿಯಾಗಿದ್ದಾಗ ಕೇಂದ್ರ ಸರ್ಕಾರದ ಮಂಡಲ್ ಆಯೋಗವನ್ನು ವರದಿ ಜಾರಿ ಮಾಡಿ ಹಿಂದುಳಿದವರಿಗೆ ಮೀಸಲಾತಿಯ ಹಕ್ಕು ದೊರೆಯುವಂತೆ ಮಾಡಿದ್ದರು. ಈಗ ರಾಜ್ಯದಲ್ಲಿ ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾರೆ. ಕೂಡಲೇ ಅವರು ವರದಿ ತರಿಸಿಕೊಂಡು ವರದಿಯನ್ನು ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಸುಧಾಕರ್ ಶೆಟ್ಟಿಹಳ್ಳಿ, ಕೆ.ಎಲ್. ಉಮೇಶ್, ಯೋಗೇಶ್ ಹಿರೇಹಾರಕ, ವಿಕಾಸ್ ಕುನ್ನೂರ್, ಎಸ್.ಕೃಷ್ಣಮೂರ್ತಿ, ಬಿ.ಗಣಪತಿ, ಪುನೀತ್ ಬೆಳ್ಳೂರು, ಮಂಜುನಾಥ್ ಮತ್ತಿತರರು ಇದ್ದರು.

Ad Widget

Related posts

ಭದ್ರಾವತಿ ಕಾರ್ಖಾನೆಗಳು ನಮ್ಮ ಅಸ್ಮಿತೆ
ಮುಚ್ಚದಂತೆ ಹೇಳಲು ಈಶ್ವರಪ್ಪರಿಗೆ ಧಂ ಇಲ್ಲವೆ? ಹೆಚ್.ವಿಶ್ವನಾಥ್ ಪ್ರಶ್ನೆ

Malenadu Mirror Desk

ಮಹಿಳಾ ಸಬಲೀಕರಣ, ರಕ್ಷಣೆಗೆ ಸರಕಾರ ಒತ್ತು ನೀಡಬೇಕು

Malenadu Mirror Desk

ಶಿಕ್ಷಣದಿಂದ ಸಮಾಜದ ಏಳಿಗೆ : ಡಾ ರಾಮಪ್ಪ, ಶಾಲೆಗಳಿಗೆ ಸುಣ್ಣಬಣ್ಣ, ಗ್ರಂಥಾಲಯಗಳಿಗೆ ಪುಸ್ತಕ ಕೊಡುಗೆ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.