Malenadu Mitra
ರಾಜ್ಯ

ಸನಾತನ ಧರ್ಮದಲ್ಲಿನ ಮನುಷ್ಯ ವಿರೋಧಿ ವಿಚಾರ: ಕಿಮ್ಮನೆ ರತ್ನಾಕರ್

ಶಿವಮೊಗ್ಗ:ಸನಾತನ ಧರ್ಮದಲ್ಲಿನ ಮನುಷ್ಯ ವಿರೋಧಿ ವಿಚಾರ ಸರಿಪಡಿಸಲು ಆರ್.ಎಸ್.ಎಸ್ ಯಾವ ಪ್ರಯತ್ನವನ್ನು ಮಾಡಿಲ್ಲ,ಈ ಬಗ್ಗೆ ಕೆ.ಎಸ್ ಈಶ್ವರಪ್ಪ-ಆರಗ ಜ್ಞಾನೇಂದ್ರ ಬಹಿರಂಗ ಚರ್ಚೆಗೆ ಬರಲಿ ಎಂದು  ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಸವಾಲು ಹಾಕಿದ್ದಾರೆ.
ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು,ಸನಾತನ ಧರ್ಮದ ಬಗ್ಗೆ  ನನ್ನ ಅಭಿಪ್ರಾಯ ಹೇಳಿದ್ದೇನೆ.ನಾನು ಹಲವು ಪುಸ್ತಕಗಳನ್ನು ಅಧ್ಯಯನ ಮಾಡಿದ್ದೇನೆ,ಸನಾತನ ಧರ್ಮಕ್ಕೆ ನಿಘಂಟಿನಲ್ಲಿ ಏನು ಅರ್ಥವಿದೆ ಎಂದು ಗಮನಿಸಿದ್ದೇನೆ.ಶಾಸಕ ಆರಗ ಜ್ಞಾನೇಂದ್ರ,ಕೆ ಎಸ್ ಈಶ್ವರಪ್ಪ ಅವರು ಬೇಕಾದರೆ ಬಹಿರಂಗ ಚರ್ಚೆಗೆ ಬರಲಿ ನಾನು ಸಿದ್ದ ಎಂದು ಹೇಳಿದರು.

೧೯೨೬ ರಲ್ಲಿ ಸ್ಥಾಪನೆಯಾದ ಆರ್. ಎಸ್ ಎಸ್ ಇದುವರೆಗೂ ಹಿಂದೂ ಧರ್ಮ, ಸನಾತನಧರ್ಮದಲ್ಲಿನ ಮನುಷ್ಯ ವಿರೋಧಿ ವಿಚಾರಗಳನ್ನು ಸರಿಪಡಿಸಲು ಪ್ರಯತ್ನವನ್ನೆ  ಮಾಡಿಲ್ಲ. ಒಂದೇ ಒಂದು ಕಾರ್ಯಕ್ರಮವನ್ನೂ ರೂಪಿಸಿಲ್ಲ. ಬದಲಾಗಿ ಒಂದು ಧರ್ಮವನ್ನು ಹೀಯಾಳಿಸುವ, ಪ್ರಚೋದಿಸುವ ಕೆಲಸವನ್ನು ಮಾಡಿಕೊಂಡು ಬಂದಿದೆ ಎಂದು ಹೇಳಿದರು.
ಈ ದೇಶದಲ್ಲಿ ಸಾಮಾಜಿಕ, ರಾಜಕೀಯ ಬದಲಾವಣೆಗಳು ಆಗಿದ್ದರೆ ಅದು ಬುದ್ದ ಬಸವಣ್ಣ ಗಾಂಧಿ ಅಂಬೇಡ್ಕರ್, ಲೋಹಿಯಾ ಮತ್ತು ಕಾಂಗ್ರೇಸ್ ಪಕ್ಷದಿಂದ ಆಗಿದೆಯೇ ಹೊರತು ಆರ್ ಎಸ್ ಎಸ್, ಬಿಜೆಪಿಯಿಂದಲ್ಲ ಎಂದರು.
ವೇದ ಉಪನಿಷತುಗಳನ್ನೊಳಗೊಂಡ ಮನುಸ್ಮೃತಿಯಲ್ಲಿ ಮನುಷ್ಯತ್ವ, ಮಾನವೀಯತೆಗೆ ವಿರುದ್ಧವಾದ ಅನೇಕ ವಿಚಾರಗಳಿವೆ. ಇವುಗಳನ್ನು ಸರಿಪಡಿಸಲು ಬುದ್ಧ ಬಸವಣ್ಣ ಗಾಂಧಿ ಅಂಬೇಡ್ಕರ್ ಅವರುಗಳು ಹೋರಾಡಿ ಇದು ಸಾಧ್ಯವಾಗದಿದ್ದಾಗ ಬಿಟ್ಟು ಹೊರಹೋಗಿದ್ದಾರೆ. ದಲಿತರು ಶಾಸಕರು ಮತ್ತು ಹಕ್ಕುಗಳನ್ನು ಪಡೆದಿದ್ದರೆ ಅದು ಅಂಬೇಡ್ಕರ್, ಗಾಂಧಿ ಅವರಿಂದ ಹೊರತು ಮನುಸ್ಮೃತಿಯಿಂದಲ್ಲ ಎಂದರು.

ನಾನೂ ಕೂಡ ಹಿಂದೂ. ದೇವಸ್ಥಾನಗಳಿಗೆ ೪೦-೫೦ ಲಕ್ಷ ದುಡ್ಡು ಕೊಟ್ಟಿದ್ದೇನೆ ಸತನಾತನ ಧರ್ಮ ಎಂದು ಮಾತಾನಾಡುವ ಶಾಸಕ ಜ್ಞಾನೇಂದ್ರ ಒಂದೂ ಪೈಸೆ ಕೊಟ್ಟಿಲ್ಲ ಎಂದ ಅವರು,ರಾಮಸೇನೆ. ಸಂಸದ ಅನಂತಕುಮಾರ್ ಹೆಗಡೆ ಅವರುಗಳು ಮೂಲಕ ಮುಸ್ಲಿಂರ ವಿರುದ್ಧ, ಸಂವಿಧಾನದ ವಿರುದ್ಧ ಹೇಳಿಕೆಗಳು ಹೊರಬಿದ್ದಾಗ ಪ್ರಧಾನ ಮಂತ್ರಿಯಾಗಿ ಯಾಕೆ ಅದನ್ನು ತಪ್ಪು ಎಂದು ಹೇಳಲಿಲ್ಲ. ಇದು ದೇಶವನ್ನು ನಡೆಸುವ ರೀತಿಯಾ ಎಂದು ಪ್ರಶ್ನಿಸಿದರು.ಈಗ ಒಂದು ಧರ್ಮವನ್ನು ಬೈಯ್ದು ಚುನಾವಣೆಯನ್ನು ಗೆಲ್ಲಬಹುದು ಎಂಬ ದಾರಿಯನ್ನು ಬಿಜೆಪಿ ಕಂಡು ಕೊಂಡಿದೆ. ಆರ್ ಎಸ್ ಎಸ್, ಬಿಜೆಪಿ, ರಾಮಸೇನೆ. ಬಜರಂಗದಳ ಎಲ್ಲವೂ ಒಂದೇ ಅಗಿವೆ. ಇವು ಬೇರೆ ಬೇರೆ ಅಲ್ಲ ಎಂದರು.ಸುದ್ದಿಗೋಷ್ಟಿಯಲ್ಲಿ ಕಾಂಗ್ರೆಸ್ ವಕ್ತಾರ ಆದರ್ಶಹುಂಚದಕಟ್ಟೆ ಉಪಸ್ಥಿತರಿದ್ದರು.

ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಪಕ್ಷ ಕೈಗೊಳ್ಳುವ ತೀರ್ಮಾನಕ್ಕೆ  ನಾನು ಬದ್ದ.ನಾನು ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿಲ್ಲ. ಬೇಳೂರು ಗೋಪಾಲಕೃಷ್ಣ ಅವರು ಅಭ್ಯರ್ಥಿ ಯಾಗುವ ಅಭಿಪ್ರಾಯ ಮಂಡಿಸಿದ್ದಾರೆ. ಪಕ್ಷ ಯಾರನ್ನೆ ಅಭ್ಯರ್ಥಿ ಮಾಡಿದರೂ ಅವರ ಪರವಾಗಿ ಕೆಲಸ ಮಾಡುತ್ತೇನೆ. ಬಿಜೆಪಿಯ ವಿರುದ್ಧ ಸಂಘಟನಾತ್ಮಕವಾಗಿ ಹೋರಾಡುವುದು ಮುಖ್ಯ ಆದರೆ ನನ್ನನ್ನೆ ಅಭ್ಯರ್ಥಿಯನ್ನಾಗಿಸುವ ವಿಚಾರ ಪಕ್ಷಕ್ಕೆ ಬಿಟ್ಟಿದ್ದಾಗಿದೆ .

ಕಿಮ್ಮನೆ ರತ್ನಾಕರ್

Ad Widget

Related posts

ಎಲ್ಲ ಅರ್ಹರು ಬೂಸ್ಟರ್ ಡೋಸ್ ಪಡೆಯುವಂತೆ ಸಚಿವರ ಕರೆ

Malenadu Mirror Desk

ಶಿವಮೊಗ್ಗದಲ್ಲಿ ಹಿಂದೂಪರ ಸಂಘಟನೆಗಳ ಪ್ರತಿಭಟನೆ ಯಾಕೆ ಗೊತ್ತಾ?

Malenadu Mirror Desk

ಅಪಘಾತದ ಗಾಯಾಳುಗೆ ಆಪದ್ಭಾಂದವ ಬೇಳೂರು

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.