Malenadu Mitra
ರಾಜ್ಯ ಶಿವಮೊಗ್ಗ

ಸಂಸತ್‌ನಲ್ಲಿ ನಡೆದ ಸ್ಮೋಕರ್ ಬಾಂಬ್‌ಪ್ರಕರಣ: ಜಿಲ್ಲಾ ಕಾಂಗ್ರೆಸ್‌ನಿಂದ ಪ್ರತಿಭಟನೆ

ಶಿವಮೊಗ್ಗ ಡಿ.೧೯: ಸಂಸತ್‌ನಲ್ಲಿ ನಡೆದ ಸ್ಮೋಕರ್ ಬಾಂಬ್ ಘಟನೆಗೆ ಸಂಬಂಧಿಸಿದಂತೆ ಮೈಸೂರು ಸಂಸದ ಪ್ರತಾಪ್ ಸಿಂಹ ಅವರನ್ನು ಬಂಧಿಸಿ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಪ್ರತಿಭಟನಾ ಮೆರವಣಿಗೆ ನಡೆಸಿ ಮಹಾವೀರ ವೃತ್ತದಲ್ಲಿ ಸಂಸದ ಪ್ರತಾಪ್ ಸಿಂಹರವರ ಪ್ರತಿಕೃತಿ ದಹಿಸಿ ಪ್ರತಿಭಟನೆ ನಡೆಸಿದರು.
ಕೇಂದ್ರ ಸರ್ಕಾರದ ವಿರುದ್ಧ ಹಾಗೂ ಪ್ರಧಾನಿಗೆ ಮೋದಿಯವರ ವಿರುದ್ಧ ಘೋಷಣೆಕೂಗಿದ ಕಾಂಗ್ರೆಸ್ ಕಾರ್ಯಕರ್ತರು ಪ್ರತಾಪ್ ಸಿಂಹರವರ ವಿರುದ್ಧವು ಘೋಷಣೆ ಕೂಗಿ ಇಡೀ ಘಟನೆಯನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಬೇಕು. ಮೈಸೂರು ಸಂಸದ ಪ್ರತಾಪ್ ಸಿಂಹರವರನ್ನು ತಕ್ಷಣವೇ ಬಂಧಿಸಿ ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ಪ್ರತಿಭಟನಕಾರರು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್. ಸುಂದರೇಶ್ ಅವರು,ಇದೊಂದು ಗಂಭೀರ ವಿಷಯವಾಗಿದೆ. ಮೈಸೂರಿನ ಮನೋರಂಜನ್ ಸೇರಿದಂತೆ ಸುಮಾರು ೬ ಜನರ ತಂಡ ಇದರ ಹಿಂದೆಇದೆ. ಮೈಸೂರನ್ನೇ ಇವರು ಕೇಂದ್ರವಾಗಿ ಇಟ್ಟುಕೊಂಡಿದ್ದಾರೆ. ಸಂಸದ ಪ್ರತಾಪ ಸಿಂಹ ಮನೋರಂಜನಿಗೆ ಪಾಸ್ ನೀಡಿದ್ದಾನೆ. ಹಾಗೆಯೇ ಇನ್ನೊಬ್ಬನಿಗೆ ಇವರ ಕಚೇರಿಯಿಂದಲೇ ಪಾಸ್ ಹೋಗಿದೆ. ಸಂಸತ್ ಮೇಲೆ ದಾಳಿ ಎನ್ನುವುದು ಸುಲಭದ ವಿಷಯವೇ, ಕೇಂದ್ರ ಸರ್ಕಾರ ಇದನ್ನೇಕೆ ಗಂಭೀರವಾಗಿ ತೆಗೆದುಕೊಂಡಿಲ್ಲ. ಬಿಜೆಪಿಗರು ಈ ಬಗ್ಗೆ ಚಕಾರಕೂಡ ಎತ್ತುತ್ತಿಲ್ಲ. ಮೋದಿ, ಅಮಿತ್‌ಷಾ ಸೇರಿ ದಂತೆ ಎಲ್ಲರೂ ಮೌನವಾಗಿ ದ್ದಾರೆ ಎಂದು ಆರೋಪಿಸಿದರು.
ಪ್ರತಿಭಟನೆಯಲ್ಲಿ ಪ್ರಮುಖ ರಾದ ಆರ್. ಪ್ರಸನ್ನಕುಮಾರ್, ಎನ್.ರಮೇಶ್, ಚಂದ್ರ ಭೂಪಾಲ್, ಸೌಗಂಧಿಕ, ಎಸ್. ಟಿ.ಚಂದ್ರಶೇಖರ್, ಹೆಚ್.ಪಿ. ಗಿರೀಶ್, ಹೆಚ್.ಸಿ.ಯೋಗೀಶ್, ಇಸ್ಮಾಯಿಲ್ ಖಾನ್, ಕಲೀಂ ಪಾಷಾ, ಶಿವಕುಮಾರ್, ಕೆ.ರಂಗನಾಥ್, ಜಿ.ಡಿ. ಮಂಜುನಾಥ್, ಯಮುನಾ ರಂಗೇಗೌಡ, ಸ್ಟೆಲಾ ಮಾರ್ಟಿನ್, ಸುವರ್ಣ ನಾಗರಾಜ್, ನಾಜೀಮಾ, ಪ್ರೇಮಾ ಎನ್. ಶೆಟ್ಟಿ, ರೇಷ್ಮಾ, ಶಿ.ಜು.ಪಾಶಾ, ಜಿ.ಪದ್ಮನಾಬ್, ಗಾಡಿಕೊಪ್ಪ ರಾಜಣ್ಣ, ಇಕ್ಕೇರಿ ರಮೇಶ್, ಕುಮರೇಶ್, ಪಾಲಾಕ್ಷಿ, ನಾಗರಾಜ್ ಕಂಕಾರಿ, ಎಂ. ಪ್ರವೀಣ್ ಕುಮಾರ್ ಸೇರಿದಂತೆ ಹಲವರಿದ್ದರು.

Ad Widget

Related posts

ನಂದಿತ ಆತ್ಮಹತ್ಯೆ ಪ್ರಕರಣ ಸಿಬಿಐಗೆ ವಹಿಸಲು ಆಗ್ರಹಿಸಿ ಉಪವಾಸ ಸತ್ಯಾಗ್ರಹ

Malenadu Mirror Desk

ಮಧುಗೆಲ್ಲಿಸಿ ಸೊರಬಕ್ಕೆ ಬಂದು ಕುಣಿದು ಕುಪ್ಪಳಿಸುವೆ, ಆನವಟ್ಟಿ ರೋಡ್‌ಶೋನಲ್ಲಿ ಶಿವರಾಜ್ ಕುಮಾರ್ ಮನವಿ

Malenadu Mirror Desk

ಮಲೆನಾಡಿನ ಭೂಮಿ ಸಮಸ್ಯೆ ಬಗ್ಗೆ ಮೇ ಮೊದಲ ವಾರದಲ್ಲಿ ಸಭೆ, ಶಿವಮೊಗ್ಗದಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿಕೆ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.