Malenadu Mitra
ರಾಜ್ಯ ಶಿವಮೊಗ್ಗ

ಮಾತಿಗೆ ತಪ್ಪಿದ ಕಾಂಗ್ರೆಸ್ ಸರ್ಕಾರ:ಕೋಡಿಹಳ್ಳಿ ಚಂದ್ರಶೇಖರ್

ಶಿವಮೊಗ್ಗ :ರಾಜ್ಯ ಸರ್ಕಾರ ಕೊಟ್ಟ ಮಾತಿನಂತೆ ಕೃಷಿ ಕಾಯ್ದೆಗಳನ್ನು ಹಿಂಪಡೆದಿಲ್ಲ.ರೈತರಿಗೆ ನ್ಯಾಯ ದೊರಕಿಸುವ ಗ್ಯಾರಂಟಿ ಯೋಜನೆ ಸರ್ಕಾರದಲ್ಲಿ ಇಲ್ಲ ಎಂದು  ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಅಸಮಾಧಾನ ಹೊರಹಾಕಿದರು
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಚುನಾವಣಾ ಪೂರ್ವದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ರೈತ ವಿರೋಧಿ ಕೃಷಿ ಕಾಯ್ದೆಯನ್ನು ಹಿಂಪಡೆಯುವುದಾಗಿ ಘೋಷಣೆ ಮಾಡಿದ್ದರು.ಸರ್ಕಾರ ಬಂದು ಆರು ತಿಂಗಳು ಕಳೆದರೂ ಕೃಷಿ ಕಾಯ್ದ ಹಿಂಪಡೆದಿಲ್ಲ ಎಂದು ಹೇಳಿದರು.

ಸರ್ಕಾರ  ಬೆಳಗಾವಿ ಅಧಿವೇಶನದಲ್ಲಿ ಕೃಷಿ ಕಾಯ್ದೆಗಳನ್ನು ಹಿಂಪಡೆಯುವ ಭರವಸೆ ಇತ್ತು.ಈ ಬಗ್ಗೆ ಚಕಾರವೆತ್ತಿಲ್ಲ.ಕಾಂಗ್ರೆಸ್‌ಗ-ಬಿಜೆಪಿಗೂ ಯಾವುದೇ ವ್ಯತ್ಯಾಸವಿಲ್ಲ ಎಂದ ಅವರು,ರಾಜ್ಯದಲ್ಲಿ ಬರಗಾಲವಿದೆ.ರೈತರು ಆರ್ಥಿಕ ಸಂಕಷ್ಟದ ಸುಳಿಯಲ್ಲಿ ಸಿಲುಕಿಕೊಂಡಿದ್ದಾರೆ. ರಾಜ್ಯದ ರೈತರನ್ನು ಕಡೆಗಣಿಸುತ್ತಿರುವ ಸರ್ಕಾರ ರೈತರಿಗೆ ನ್ಯಾಯ ದೊರಕಿಸಲು   ಯಾವುದೇ ಒಂದೇ ಒಂದು ಕಾರ್ಯಕ್ರಮವನ್ನು ಕೈಗೊಂಡಿಲ್ಲ ಎಂದು ಹೇಳಿದರು.
ಕೃಷಿ ಭೂಮಿಯನ್ನು ಅನ್ಯ ಉದ್ದೇಶಕ್ಕೆ ಬಳಕೆ ಮಾಡಬಾರದೆಂಬ ನಿಯಮ ಇದೆ. ಆದರೆ ರೈತರಲ್ಲದವರು ಈಗ ಇದನ್ನು ಖರೀದಿ ಮಾಡುತ್ತಿದ್ದ್ದಾರೆ. ಹಣವಂತರು ಈ ಭೂಮಿ ಖರೀದಿಸದರೆ ಕೃಷಿ ಉಳಿಯಲು ಸಾಧ್ಯವಿಲ್ಲ ಎಂದ ಅವರು,  ಕೃಷಿ ಭೂಮಿ, ಕೃಷಿ ಮಾರುಕಟ್ಟೆ ಮತ್ತು ಹೈನುಗಾರಿಕೆ  ಈಗ ಅಪಾಯಕಾರಿ ಸ್ಥಿತಿಯಲ್ಲಿವೆ. ಸರಕರ ರೈತರಿಗಾಗಿ  ಇವುಗಳನ್ನು ಉಳಿಸುವ ಯೋಜನೆ ರೂಪಿಸಬಹುದಿತ್ತು. ಕೃಷಿಯನ್ನು ಉತ್ತೇಜಿಸಬಹುದಿತ್ತು ಎಂದು ಹೇಳಿದರು.

ಬರಗಾಲದ ತುರ್ತು ಕಾರ್ಯಕ್ರಮಗಳನ್ನು ಇನ್ನೂ ಜಾರಿ ಮಾಡಿಲ್ಲ.  ಕಬ್ಬಿಗೆ ಎಫ್‌ಆರ್‌ಪಿ ಜೊತೆ  ಎಸ್‌ಎಪಿ ನೀಡಬೇಕು. ರಾಜ್ಯದ ಕಬ್ಬಿನ ಇಳುವವರಿಗೆ ಒಂದೊಂದು ಕಾರ್ಖಾನೆಯಲ್ಲಿ ಒಂದೊಂದು ಧಾರಣೆ ನಿಲ್ಲಿಸಬೇಕು. ಕಬ್ಬಿನ ಸರಾಸರಿ ಇಳುವರಿ ೧೦ ಇದಕ್ಕಿಂತ ಕಡಿಮೆ ಇಳುವರಿ ಕಾರ್ಖಾನೆಗಳ ಪರವಾನಿಗೆ ರದ್ದುಗೊಳಿಸಬೇಕು. ಸರ್ಕಾರವೇ ಉತ್ತರ ಹಾಗೂ ದಕ್ಷಿಣ ಕಾರ್ಖಾನೆಗಳಿಗೆ ಕಬ್ಬಿನ ಇಳುವರಿಗೆ ಸಂಬಂಧ ವಿಜ್ಞಾನಿಗಳು ರೈತರು ಸೇರಿ ಪ್ರತಿವರ್ಷ ಪರಿಶೀಲಿಸಬೇಕು.ಸಕ್ಕರೆ ಇಳುವರಿ ಘೋಷಣೆ ಮಾಡಬೇಕು ಎಂದು ಆಗ್ರಹಿಸಿದರು.
 ಬೆಳೆಗೆ ಕನಿಷ್ಠ ಬೆಂಬಲ ಬೆಲೆ ಶಾಸನಬದ್ಧವಾಗಿ ಜಾರಿಯಾಗಬೇಕು. ಮೂರೂ  ಕೃಷಿ ಕಾಯ್ದೆ ವಾಪಸ್ ಆಗಿಲ್ಲ. ಕೇವಲ ಭರವಸೆಯಲ್ಲೇ ಕಾಲ ಕಳೆಯುತ್ತಿದೆ.ವಿದೇಶಿದಿಂದ ಬರುವ ತೆಂಗಿನ ಉತ್ಪನ್ನಕ್ಕೆ ಆಮದು ಸುಂಕ ಹೆಚ್ಚಿಸಬೇಕು. ಇಲ್ಲವಾದರೆ ಪ್ರತಿ ಕ್ವಿಂಟಾಲ್ ಕೊಬ್ಬರಿಗೆ ೨೫೦೦೦ ರೂ ನೀಡಬೇಕು ಎಂದು ಒತ್ತಾಯಿಸಿದರು.
 ನವೆಂಬರ್ ೧ ರಿಂದ ಹಾಲಿನ ದರ ೨ ರೂಪಾಯಿ ಕಡಿತ ಮಾಡಿ ಪಶು ಆಹಾರದ ಬೆಲೆಯನ್ನು ಕೆಜಿಗೆ ೨ ರೂಪಾಯಿ ಹೆಚ್ಚು ಮಾಡಿ ರೈತರಿಂದ ಒಟ್ಟು ೪ ರೂಪಾಯಿ ಬಲವಂತವಾಗಿ ಕಿತ್ತುಕೊಳ್ಳುವ ನೀತಿಯನ್ನು ಜಾರಿಗೆ ತಂದಿದೆ. ತಕ್ಷಣವೇ ಇದನ್ನು ರದ್ದು ಮಾಡಬೇಕು ಮತ್ತು ಕಾಂಗ್ರೆಸ್ ಪಕ್ಷ ಚುನಾವಣಾ ಪೂರ್ವದಲ್ಲಿ ಪ್ರತಿ ಲೀಟರ್ ಹಾಲಿಗೆ ೭ ರೂಪಾಯಿ ನೀಡುವ ಘೋಷಣೆಯನ್ನು ಮಾಡಿತ್ತು. ಇದನ್ನು ತಕ್ಷಣ ಜಾರಿ ಮಾಡಬೇಕು ಎಂದು ಆಗ್ರಹಿಸಿದರು
ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಮುಖಂಡ  ಭಕ್ತರಹಳ್ಳಿ ಬೈರೇಗೌಡ್ರು, ವೀರಭದ್ರಸ್ವಾಮಿ, ಸತೀಶ್ ಹಾಜರಿದ್ದರು.


 ಈ ಸರಕಾರ ಜನರಿಗೆ ಮತ್ತು ರೈತರಿಗೆ ಏನು ಮಾಡಿದೆ. ಜನರ ಆದಾಯ ಹೆಚ್ಚಿಸುವ, ಆರ್ಥಿಕಾಭಿವೃದ್ಧಿಗೆ ನೆರವಾಗುವ  ಕೆಲಸ ಮಾಡಿಲ್ಲ. ಇಲ್ಲಿನ ಹಣದಲ್ಲಿ ತೆಲಂಗಾಣದ ಚುನಾವಣೆ ಮಾಡಿದ್ದಾರೆ. ಸಚಿವರು ರೈತರ ಪರ ಮಾತನಾಡುತ್ತಾರೆಯೇ ವಿನಾ ಕೆಲಸ ಮಾಡುತ್ತಿಲ್ಲ. ಸಿದರಾಮಯ್ಯ ಅವರ ಜನಪರ ಕಾಳಜಿ, ರೈತಪರ ಕಾಳಜಿಯನ್ನು ಈಗ ಪ್ರಶ್ನಿಸುವಂತಾಗಿದೆ.

ಕೋಡಿಹಳ್ಳಿ ಚಂದ್ರಶೇಖರ್

Ad Widget

Related posts

ಕೆಲಸಗಳು ಉತ್ತಮ ಗುಣಮಟ್ಟದಾಗಿರಲಿ : ಬಿ. ವೈ ರಾಘವೇಂದ್ರ

Malenadu Mirror Desk

ಇತಿಹಾಸ ಸೃಷ್ಟಿಸಿದ ಇತಿಹಾಸಕಾರ ಖಂಡೋಬರಾವ್, ಅಧ್ಯಯನಕಾರರಿಗೆ ವಿವಿಯಾಗಿರುವ ಪ್ರೇಮಸೌಧ

Malenadu Mirror Desk

ಸಿಮ್ಸ್ ಗೆ ಒಬ್ಬಉತ್ಸಾಹಿ ನಿರ್ದೇಶಕರ ನೇಮಿಸಿ: ಶ್ರೀಪಾಲ್

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.