Malenadu Mitra
ರಾಜ್ಯ ಶಿವಮೊಗ್ಗ

ಡಿ.೨೬ಕ್ಕೆ ಎಸ್.ಬಂಗಾರಪ್ಪ ಸವಿ ನೆನಪು

ಶಿವಮೊಗ್ಗ: ಎಸ್.ಬಂಗಾರಪ್ಪ ಪೌಂಡೇಶನ್, ಬಂಗಾರಪ್ಪ ವಿಚಾರ ವೇದಿಕೆ, ಅಭಿಮಾನಿ ಬಳಗ ಇವರ ಸಂಯುಕ್ತಾಶ್ರಯದಲ್ಲಿ ಡಿ.೨೬ರಂದು ಸಂಜೆ ೪ಕ್ಕೆ ಸೊರಬದ ಬಂಗಾರಧಾಮ ದಲ್ಲಿ ಎಸ್.ಬಂಗಾರಪ್ಪ ಸವಿ ನೆನಪು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾ ಗಿದೆ ಎಂದು ವಿಚಾರ ವೇದಿಕೆಯ ಮುಖ್ಯಸ್ಥರು.ನಟ ನಾಗರಾಜ್ ಮೂರ್ತಿ ಹೇಳಿದರು.
ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದ ಅವರು, ಎಸ್. ಬಂಗಾರಪ್ಪನವರು ಸಮಾಜವಾದಿ ಚಿಂತಕರಾಗಿದ್ದರು. ರಾಜ್ಯದ ರಾಜಕಾರಣಕ್ಕೆ ಸ್ಪಷ್ಟ ದಿಕ್ಕು ತೋರಿಸಿದವರು. ಬಡವರ ಪಾಲಿನ ಆಶಾಕಿರಣವಾಗಿದ್ದರು. ಶಾಂತವೇರಿ ಗೋಪಾಲಗೌಡರ ಕುಲುಮೆಯಲ್ಲಿ ಬೆಂದು ನೊಂದವರ ಕಣ್ಣೀರು ಒರೆಸಿದ ಧೀಮಂತ ವ್ಯಕ್ತಿ, ಸುಸಂಸ್ಕೃತ ರಾಜಕಾರಣಿ ಇಂತಹ ಮಹಾನ್ ವ್ಯಕ್ತಿಯ ೧೨ನೇ ವರ್ಷದ ಪುಣ್ಯ ಸ್ಮರಣೆ ನೆನಪಿನ ಕಾರ್ಯಕ್ರಮವನ್ನು ಸೊರಬದಲ್ಲಿಯೇ ಆಯೋಜಿಸಲಾ ಗಿದೆ ಎಂದರು
ಈಗಾಗಲೇ ಬಂಗಾರಪ್ಪ ಸ್ಮಾರಕ ಆರಂಭವಾಗಿದೆ. ಅದರ ಮೂಲಕ ಹಲವು ಸಾಮಾಜಿಕ ಕಾರ್ಯ ಕ್ರಮಗಳನ್ನು, ಉಪನ್ಯಾಸಗಳನ್ನು ಹಮ್ಮಿಕೊಳ್ಳಲಾಗುವುದು. ಈಗಾಗಲೇ ಬಂಗಾರಪ್ಪ ಪೌಂಡೇಶನ್ ಮತ್ತು ವಿಚಾರ ವೇದಿಕೆಯಿಂದ ಕಲಾ ಕ್ರೀಡೆ ಹೆಸರಿನಲ್ಲಿ ಕಾರ್ಯಕ್ರಮ ಆಯೋಜನೆ ಮತ್ತು ಪ್ರಶಸ್ತಿಗಳನ್ನು ನೀಡುತ್ತ ಬಂದಿದ್ದೇವೆ ಎಂದರು.
ಡಿ.೨೬ರ ಸಂಜೆ ೪ಕ್ಕೆ ಬಂಗಾರಧಾಮದಲ್ಲಿ ಹಮ್ಮಿಕೊಂಡಿರುವ ಸಭಾ ಕಾರ್ಯಕ್ರಮವನ್ನು ವಿಧಾನಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಉದ್ಘಾಟಿಸುವರು. ಸಚಿವ ಎಚ್.ಕೆ. ಪಾಟೀಲ್ ಹಾಗೂ ಮಾಜಿ ಸಚಿವ ಅರವಿಂದ ಲಿಂಬಾವಳಿ ಉಪಸ್ಥಿತರಿರುವರು. ಗೀತಾ ಶಿವರಾಜ್‌ಕುಮಾರ್ ಅಭಿನಂದನ ನುಡಿಗಳ ನ್ನಾಡುವರು. ಮತ್ತು ಡಾ.ಅನೀಶ್ ವಿದ್ಯಾಶಂಕರ್ ರವರಿಂದ ಸಂಗೀತ ಕಾರ್ಯಕ್ರಮ ಇರುತ್ತದೆ ಎಂದರು.
ವಿಚಾರ ವೇದಿಕೆಯ ಅಧ್ಯಕ್ಷ ವೇಣುಗೋಪಾಲ್ ನಾಯಕ್ ಮಾತನಾಡಿ, ಬಂಗಾರಪ್ಪ ವರ್ಣಮಯ ವ್ಯಕ್ತಿ ಬರಗಾಲದಂತಹ ಸಂದರ್ಭದಲ್ಲಿ ರೈತರಿಗೆ ಬೀಜಗೊಬ್ಬರ ಕೊಟ್ಟವರು, ಮುಖ್ಯಮಂತ್ರಿಯಾಗಿದ್ದಾಗ ಹಲವು ಜನಪರ ಯೋಜನೆಗಳನ್ನು ಜಾರಿಗೆ ತಂದು ಬಡವರ ಕಲ್ಯಾಣಕ್ಕಾಗಿ ದುಡಿದವರು. ಇಂತವರ ಪುಣ್ಯ ಸ್ಮರಣೆಯನ್ನು ಮಾಡುವುದು ನಮ್ಮ ಕರ್ತವ್ಯವಾಗಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಜಿ.ಡಿ. ಮಂಜುನಾಥ್, ಗೋಪಾಲಕೃಷ್ಣ ಟಿ.ವಿ., ಶಮಂತ್, ಗಿರೀಶ್, ಹರೀಶ್ ಇದ್ದರು

Ad Widget

Related posts

ಶಿವಮೊಗ್ಗ ಎಂಬ ಚಳವಳಿಗಳ ಬೀಜದ ಹೊಲ

Malenadu Mirror Desk

ಶರಾವತಿ ಸಂತ್ರಸ್ಥರಿಗೆ ಭೂ ಹಕ್ಕು: ಕೇಂದ್ರ ಸರ್ಕಾರಕ್ಕೆ ಸುಪ್ರೀಂ ನೋಟಿಸ್

Malenadu Mirror Desk

ಶಿವಮೊಗ್ಗ ಎಸ್ಪಿ ವರ್ಗಾವಣೆ ಯಾಕೆ ಗೊತ್ತಾ ?

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.