Malenadu Mitra
ರಾಜ್ಯ ಶಿವಮೊಗ್ಗ

ಬರ ಅಧ್ಯಯನ ವರದಿಯನ್ನು ಕೇಂದ್ರಕ್ಕೆ ತಲುಪಿಸಲಿ: ಸಚಿವ ಮಧು ಬಂಗಾರಪ್ಪ

ಶಿವಮೊಗ್ಗ: ಹಿಜಾಬ್ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೆಗೆದುಕೊಳ್ಳುವ ನಿರ್ಧಾರಕ್ಕೆ ತಾವು ಬದ್ಧ. ಬಿಜೆಪಿಯವರು ಇಲ್ಲಸಲ್ಲದ ಟೀಕೆ ಮಾಡುವ ಬದಲು ಬರ ಅಧ್ಯಯನ ವರದಿಯನ್ನು ಕೇಂದ್ರಕ್ಕೆ ತಲುಪಿಸಲಿ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಸವಾಲು ಹಾಕಿದರು.
ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಚುನಾವಣೆ ಸಂದರ್ಭದಲ್ಲಿ ಬಿಜೆಪಿಯವರು ಹಿಜಾಬ್ ನಿಷೇಧ, ಪಠ್ಯ ಪುಸ್ತಕ ಪರಿಷ್ಕರಣೆ ಕೈ ಹಾಕಿದರು. ಆ ಸಂದರ್ಭದಲ್ಲೆ ಸಿದ್ದರಾಮಯ್ಯ ಅವರು ಹಿಜಾಬ್ ನಿಷೇಧಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಆಯಾ ಧರ್ಮದ ಪದ್ಧತಿಗಳ ಪಾಲನೆಗೆ ಅಡ್ಡಿ ಉಂಟು ಮಾಡಬಾರದು ಎಂದಿದ್ದರು. ಈಗ ಕಾರ್ಯಕ್ರಮ ಒಂದರಲ್ಲಿ ಯಾರೋ ಕೇಳಿದ ಪ್ರಶ್ನೆಗೆ ಉತ್ತರಿಸುವಾಗ ನಿಷೇಧ ಹಿಂಪಡೆಯುವ ಹೇಳಿಕೆ ನೀಡಿದ್ದಾರೆ ಎಂದಿದ್ದಾರೆ. ಬಿಜೆಪಿಯವರು ಇಂತಹ ವಿಷಯಗಳನ್ನು ಮಾತ್ರ ಆಯ್ಕೆ ಮಾಡುತ್ತಾರೆ. ಪರೇಶ್ ಮೇಸ್ತಾ ವಿಚಾರದಲ್ಲಿ ಕೈ ಹಾಕಿದ್ದರು. ಶಿವಮೊಗ್ಗದ ರಾಗಿಗುಡ್ಡದಲ್ಲಿ ಪುನಃ ಗಲಭೆಗೆ ಮುಂದಾಗಿದ್ದರು ಎಂದರು.

ನಮ್ಮ ದೇಶ ಗಲಭೆಯ ಕಾರಣಕ್ಕೆ ಪ್ರಸಿದ್ಧವಾಗಿಲ್ಲ. ವೈವಿಧ್ಯತೆಯ ಕಾರಣಕ್ಕೆ ಮನ್ನಣೆ ಗಳಿಸಿದೆ. ಶಾಲೆಯಲ್ಲಿ ಮಕ್ಕಳು ಸಮಾನವಾಗಿರಬೇಕು. ಇದು ಸೂಕ್ಷ್ಮ ವಿಷಯ ಅನ್ನುತ್ತಾರೆ. ಹಾಗೆಯೇ ಅವರವರ ಧರ್ಮದ ಪದ್ಧತಿಗೂ ಮನ್ನಣೆ ನೀಡಬೇಕಿದೆ. ಹಿಜಾಬ್ ಕುರಿತು ಎಸ್‌ಡಿಎಂಸಿ ಅವರು ತೀರ್ಮಾನ ಕೈಗೊಳ್ಳಬಹುದು ಎಂದು ನ್ಯಾಯಾಲಯ ಆದೇಶಿಸಿತ್ತು ಎಂದರು.
ಬಿಜೆಪಿಯವರು ಬರ ಅಧ್ಯಯನ ನಡೆಸಿದರು. ಅದರ ವರದಿ ಎಲ್ಲಿದೆ. ಮೊದಲು ಅದನ್ನು ಕೇಂದ್ರಕ್ಕೆ ತಲುಪಿಸಲಿ. ರಾಜ್ಯದಿಂದ ಕೇಂದ್ರಕ್ಕೆ ೪ ಲಕ್ಷ ರೂ. ತೆರಿಗೆ ಪಾವತಿ ಆಗುತ್ತಿದೆ. ಆದರೆ ಕಡಿಮೆ ಪಾಲು ಬರುತ್ತಿದೆ. ಇಂತಹ ವಿಷಯಗಳನ್ನು ಬಿಜೆಪಿ ಪ್ರಸ್ತಾಪಿಸಲಿ ಎಂದರು.

ಹಿಜಾಬ್ ನಿಷೇಧ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರಿಗಳ ಜೊತೆ ಸಮಾಲೋಚಿಸಲಿದ್ದಾರೆ. ಕಾನೂನು ಇಲಾಖೆ ಅಧಿಕಾರಿಗಳು ಕೂಡ ಪರಿಶೀಲಿಸಲಿದ್ದಾರೆ. ಸಿದ್ದರಾಮಯ್ಯ ಅವರು ತೆಗೆದುಕೊಳ್ಳುವ ನಿರ್ಧಾರಕ್ಕೆ ತಾವು ಬದ್ಧ ಎಂದು ಪುನರುಚ್ಚರಿಸಿದರು.
ಹಿಜಾಬ್ ವಿಚಾರದಲ್ಲಿ ರಾಜ್ಯದಲ್ಲಿ ಗಲಭೆಯಾದ್ರೆ ಸಿಎಂ ಸಿದ್ದರಾಮಯ್ಯ ಕಾರಣ ಈಶ್ವರಪ್ಪ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅವರು, ದಂಗೆ ಮಾಡುವವರೇ ಹೀಗೆ ಹೇಳುವುದು. ಕಾನೂನು ಬಹಳ ಗಟ್ಟಿಯಾಗಿದೆ ತಲೆ ಕೆಡಿಸಿಕೊಳ್ಳಲು ಹೋಗಬೇಡಿ. ಎಲ್ಲಾ ಧರ್ಮಗಳಿಗೂ ಗೌರವ ಕೊಡಬೇಕು, ಅದೇ ರೀತಿ ಹಿಜಾಬ್‌ಗೂ ಎಂದರು.
ಈ ಸಂದರ್ಭದಲ್ಲಿ ಪ್ರಮುಖರಾದ ಆರ್.ಪ್ರಸನ್ನ ಕುಮಾರ್, ವಿಜಯ ಕುಮಾರ್, ಕಲಗೋಡು ರತ್ನಾಕರ್,ಜಿ.ಡಿ ಮಂಜುನಾಥ್, ಎಸ್.ಪಿ.ದಿನೇಶ್ ಸೇರಿದಂತೆ ಹಲವರು ಇದ್ದರು.

Ad Widget

Related posts

ಸೇತುವೆಗೆ ಕೇಸರಿ ಬಣ್ಣ : ಹುಚ್ಚರ ರೀತಿ ನಗರಸಭೆ ಆಡಳಿತ: ಕಾಗೋಡು ತಿಮ್ಮಪ್ಪ

Malenadu Mirror Desk

ರಕ್ತದಾನದಿಂದ ದೇಹ ಮತ್ತು ಮನಸ್ಸು ಸಧೃಢ

Malenadu Mirror Desk

ಕೆರೆ ಒತ್ತುವರಿ ತೆರವುಗೊಳಿಸಿ: ಜಿಲ್ಲಾಧಿಕಾರಿ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.