ಬ್ರಹ್ಮಶ್ರೀ ನಾರಾಯಣಗುರು ಪತ್ತಿನ ಸಹಕಾರ ಸಂಘದ ಕಟ್ಟಡ ಉದ್ಘಾಟನೆ
ಶಿವಮೊಗ್ಗ :ಪಡೆದವರು ಬಾಕಿ ಉಳಿಸಿ ಕೊಂಡವರು ಸಕಾಲಕ್ಕೆ ತೀರಿಸಿ ಬ್ಯಾಂಕ್ ಅಭಿವೃದ್ಧಿಗೆ ಸಹಕರಿಸುವಂತೆ ಸಚಿವ ಮಧು ಬಂಗಾರಪ್ಪ ಹೇಳಿದರು.
ಬ್ರಹ್ಮ ಶ್ರೀ ನಾರಾಯಣ ಗುರು ಪತ್ತಿನ ಸಹಕಾರ ಸಂಘದಿಂದ ಆಯೋಜಿಸಿದ್ದ ನಾರಾಯಣ ಗುರು ಸಹಕಾರ ಭವನದ ಮೇಲ್ಮಹಡಿ ಕಟ್ಟಡ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಸಮುದಾಯ ಪ್ರಬಲವಾಗಿರುವುದರಿಂದ ಇದು ಇನ್ನಷ್ಟು ಅಭಿವೃದ್ಧಿಯಾಗಬೇಕಿತ್ತು ಆದರೆ ಆಗಿಲ್ಲ. ಸಾಲ ಪಡೆದವರು ಸರಿಯಾಗಿ ವ್ಯವಹರಿಸಿ ಸಂಪೂರ್ಣ ಸಹಕಾರ ನೀಡುವಂತೆ ಹೇಳಿದರು.
ನಾವು ಒಗ್ಗಟ್ಟಾಗಿ ಇದ್ದರೆ ಏನು ಮಾಡಲು ಆಗಿಲ್ಲ, ಇಲ್ಲದಿದ್ದರೆ ಬೇರೆಯವರ ಮನೆಯ ಬಾಗಿಲು ಕಾಯಬೇಕಾಗುತ್ತದೆ ಎಂದ ಅವರು, ಬೆಂಗಳೂರಿನಲ್ಲಿ ನಡೆದ ಸಮಾವೇಶ ಸಮಾಜ ಬಂಧುಗಳ ಸಹಕಾರ ದಿಂದ ಯಶಸ್ವಿಯಾಗಿದೆ. ಮುಂದೆಯೂ ಇನ್ನಷ್ಟು ಸಹಕಾರ ಇರುವಂತೆ ಹೇಳಿದರು.
ನಾರಾಯಣ ಗುರುಗಳ ಕೊಡುಗೆ ಸಮಾಜಕ್ಕೆ ಬಹಳಷ್ಟಿದೆ. ಹೀಗಾಗಿ ನಾರಾಯಣ ಗುರು ಜಯಂತಿ ರಾಜ್ಯಮಟ್ಟದಲ್ಲಿ ಮಾಡಲಾಗುತ್ತಿದೆ. ಅವರ ಹೆಸರಿನ ಶಾಲೆಗಳನ್ನು ತೆರೆಯಲಾಗುತ್ತಿದೆ. ಅವರ ಹೆಸರನ್ನು ಇನ್ನಷ್ಟು ಜನಪರ ಮಾಡಲಾಗುತ್ತದೆ ಎಂದರು.
ಮಕ್ಕಳಿಗೆ ಶಿಕ್ಷಣ ಕೊಡುವುದೇ ದೇವರ ಕೆಲಸ ಎಂದು ಹೇಳಲಾಗುತ್ತಿದೆ. ಸುಮಾರು ೭೬ ಸಾವಿರ ಶಾಲೆಗಳು ನನ್ನ ಇಲಾಖೆಯಲ್ಲಿವೆ. ಕೆಪಿಎಸ್ ಶಾಲೆಗಳ ಆರಂಭವನ್ನು ಛಾಲೆಂಜ್ ಆಗಿ ಸ್ವೀಕರಿಸಲಾಗಿದೆ. ಇವುಗಳ ಮೂಲಕ ಸರ್ಕಾರಿ ಶಾಲೆಗಳನ್ನು ಉಳಿಸುವ ಕೆಲಸ ಮಾಡಲಾಗುತ್ತಿದೆ. ೬೦ ಲಕ್ಷ ಮಕ್ಕಳಿಗೆ ದಿನ ಹಾಲು ಕೊಡಲಾಗುತ್ತಿದೆ. 9 ಮತ್ತು 10 ನೇ ತರಗತಿ ಮಕ್ಕಳಿಗೆ ಮೊಟ್ಟೆ ಕೊಡಲಾಗುತ್ತಿದೆ. ಸರ್ಕಾರಿ ಶಾಲೆ ಮಕ್ಕಳಿಗೆ ಹೆಚ್ಚಿನ ಸೌಲಭ್ಯ ನೀಡುವುದು ಉದ್ದೇಶವಾಗಿದೆ ಎಂದರು.
ಈ ಸಂದರ್ಭದಲ್ಲಿ ಸಿಗಂಧೂರು ಧರ್ಮದರ್ಶಿ ಎಸ್.ರಾಮಪ್ಪರವರನ್ನು ಸನ್ಮಾನಿಸಲಾಯಿತು. ಸಹಕಾರ ಸಂಘದ ಅಧ್ಯಕ್ಷ ಡಾ. ಜಿ.ಡಿ. ನಾರಾಯಣಪ್ಪ ಅಧ್ಯಕ್ಷತೆ ವಹಿಸಿದ್ದರು. ಗರ್ತಿಕೆರೆ ನಾರಾಯಣ ಗುರು ಮಹಾಸಂಸ್ಥಾನ ಮಠದ ಶ್ರೀರೇಣುಕಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕಾರ್ಯಕ್ರಮದಲ್ಲಿ ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಮಾಜಿ ಶಾಸಕ ಬಿ. ಸ್ವಾಮಿರಾವ್, ಜಿಲ್ಲಾ ಆರ್ಯ ಈಡಿಗರ ಸಂಘದ ಅಧ್ಯಕ್ಷ ಶ್ರೀಧರ್ ಹುಲ್ತಿಕೊಪ್ಪ, ಸಂಘದ ಉಪಾಧ್ಯಕ್ಷ ಕೆ.ಪಿ. ದಯಾನಂದ, ನಿರ್ದೇಶಕರಾದ ಎಸ್. ಗೀತಾಂಜಲಿ ದತ್ತಾತ್ರೇಯ, ಡಿ.ದೇವಪ್ಪ, ಕೆ.ಆರ್. ಚೂಡಾಮಣಿ, ರಘುಪತಿ ಎನ್.ಬಿ., ರವೀಂದ್ರ ಕೆ.ಎಂ., ಪಾಂಡುರಂಗ ಎಚ್., ಪ್ರೊ.ಕಲ್ಲನ, ಕೆ.ಪಿ. ಗಣಪತಿ, ಡಾ. ಸಿ. ಪ್ರಕಾಶ್, ಎಸ್.ಎಂ. ಮಹೇಶ್, ಸುದರ್ಶನ ಜಿ., ಶ್ವೇತಾ ಬಂಡಿ, ಕಾನೂನು ಸಲಹೆಗಾರ ಎನ್.ಪಿ. ಧರ್ಮರಾಜ್, ಮುಖಂಡ ಕಲಗೋಡು ರತ್ನಾಕರ ಮೊದಲಾದವರು ಇದ್ದರು