Malenadu Mitra
ರಾಜ್ಯ ಶಿವಮೊಗ್ಗ

ಜ.26ಕ್ಕೆ ಕಿಶನ್‌ ವರ್ಲ್ಡ್‌ ಆಫ್‌ ಹ್ಯಾಂಡಿಕ್ರಾಫ್ಟ್ಸ್‌ ಆರಂಭ, ಕರಕುಶಲ ಮಾರುಕಟ್ಟೆಯಲ್ಲಿ ಪ್ರತಿಷ್ಠಿತ ಸಂಸ್ಥೆಯ ನೂತನ ಶಾಖೆ: ಕಿಶನ್‌ ಸಹೋದರರು

ಶಿವಮೊಗ್ಗ: ಮಲೆನಾಡಿನ ಹೆಸರಾಂತ ಕಿಶನ್‌ ಹ್ಯಾಂಡಿಕ್ರಾಫ್ಟ್ಸ್‌ ಸಂಸ್ಥೆಯು ತನ್ನ ಉದ್ಯಮವನ್ನು ವಿಸ್ತರಿಸಿದ್ದು, ಒಂದೇ ಸೂರಿನಡಿ ಎಲ್ಲಾ ಬಗೆ ಕರಕುಶಲ ವಸ್ತುಗಳು ಸಿಗುವಂತಹ ಕಿಶನ್‌ ವರ್ಲ್ಡ್‌ ಆಫ್‌ ಹ್ಯಾಡಿಕ್ರಾಫ್ಟ್‌ ಮಳಿಗೆಯು ಜ. 26 ರಂದು ನೆಹರೂ ರಸ್ತೆಯ ನಂದಿ ಬಿಲ್ಡಿಂಗ್‌ನಲ್ಲಿ ಸಂಜೆ 5 ಗಂಟೆಗೆ ಆರಂಭವಾಗಲಿದೆ. ಶಿವಮೊಗ್ಗದ ಪ್ರತಿಷ್ಠಿತ ಸಂಸ್ಥೆಯಾದ ಕಿಶನ್‌ ಹ್ಯಾಂಡಿಕ್ರಾಫ್ಟ್‌ ಮಲೆನಾಡು ಮಾತ್ರವಲ್ಲದೆ ರಾಜ್ಯದ ಹಲವು ಪ್ರತಿಷ್ಠಿತ ಕಾರ್ಯಕ್ರಮಗಳು, ಸಮಾವೇಶಗಳು ಹಾಗೂ ಸಮ್ಮೇಳನಗಳಿಗೆ ಫಲಕ, ಹಾರ ಹಾಗೂ ಕರಕುಶಲ ವಸ್ತುಗಳನ್ನು ಪೂರೈಕೆ ಮಾಡಿದ ಕೀರ್ತಿ ಹೊಂದಿದೆ.

ಬುಧವಾರ ತಮ್ಮ ಸೋದರರೊಡಗೂಡಿ ಪತ್ರಿಕಾ ಗೋಷ್ಠಿಯಲ್ಲಿ ನಡೆಸಿದ ಸಂಸ್ಥೆ ಮಾಲೀಕರಾದ ಬಿ.ಆರ್‌.ಸಂತೋಷ್‌ ಅವರು, 1983 ರಲ್ಲಿ ಆರಂಭವಾಗಿದ್ದ ಸಂಸ್ಥೆಯು 40 ವರ್ಷಗಳನ್ನು ಪೂರೈಸಿದೆ. ಕರ್ನಾಟಕದ ಕರಕುಶಲ ವ್ಯವಹಾರದಲ್ಲಿ ತನ್ನದೇ ಆದ ವಿಶಿಷ್ಟ ಸೇವೆಯನ್ನು ಮಾಡಿಕೊಂಡು ಬಂದಿದೆ. 1996 ರಲ್ಲಿ ರಾಜ್ಯ ಪ್ರಶಸ್ತಿಗೆ ಬಾಜನವಾಗಿರುವ ಸಂಸ್ಥೆ ಕರಕುಶಲ ಕ್ಷೇತ್ರದಲ್ಲಿ ಉತ್ತಮ ಕೆಲಸಕ್ಕಾಗಿ ಹೆಸರು ಪಡೆದಿದೆ. ಕರಕುಶಲ ಕಲೆ ಮತ್ತು ಕಲಾವಿದರನ್ನು ಪ್ರೋತ್ಸಾಹಿಸುತ್ತಾ. ಈ ಕಲೆಯನ್ನು ಉಳಿಸಿ ಬೆಳೆಸುವ ಮತ್ತು ಉತ್ತಮ ಮಾರುಕಟ್ಟೆಯನ್ನು ಕಲ್ಪಿಸಿದ ಕೀರ್ತಿ ನಮ್ಮದಾಗಿದೆ ಎಂದರು.

ಕಿಶನ್‌ ಸಮೂಹ ಸಂಸ್ಥೆಯನ್ನು ಸ್ವತಃ ಕರಕುಶಲ ಕರ್ಮಿಯಾಗಿದ್ದ ನಮ್ಮ ತಂದೆ ದಿವಂಗತ ಬಿಳಗಿ ರಾಮಣ್ಣ ಗುಡಿಗಾರ್‌ ಅವರು, ವಿಧಾನ ಸೌಧದಲ್ಲಿ ಸಭಾಪತಿ ಪೀಠದ ಮತ್ತು ಮಂತ್ರಿಪರಿಷತ್‌ ಹಾಲ್‌ ಮುಖ್ಯ ದ್ವಾರ ನಿರ್ಮಾಣದಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಅವರು ನಿರ್ಮಿಸಿದ ಸಂಸ್ಥೆ ಇಂದು ಬೃಹತ್‌ ಆಗಿ ಬೆಳೆದಿದೆ. ಈಗಿರುವ ಮಳಿಗೆಯ ಮೇಲೆ ನೂತನ ಮಳಿಗೆಯನ್ನು ನಿರ್ಮಾಣ ಮಾಡಲಾಗಿದೆ. ಮರ, ಹಿತ್ತಾಳೆ, ಕಂಚಿನ ಉತ್ಕೃಷ್ಟ ದರ್ಜೆಯ ಮೂರ್ತಿಗಳು, ಚನ್ನಪಟ್ಟಣದ ಆಟಿಕೆಗಳು, ಗೃಹಾಲಂಕಾರ ವಸ್ತುಗಳು ಇಲ್ಲಿ ಸಿಗಲಿವೆ ಎಂದು ಹೇಳಿದರು.

ನೂತನ ಶೋರೂಂ ಉದ್ಘಾಟನೆಯನ್ನು ಶಿಕ್ಷಣ ಸಚಿವ ಮಧುಬಂಗಾರಪ್ಪ ಅವರು ನೆರವೇರಿಸುವರು. ಬಸವಕೇಂದ್ರದ ಡಾ. ಬಸವ ಮರುಳಸಿದ್ಧ ಸ್ವಾಮೀಜಿ ಸಾನ್ನಿಧ್ಯವಹಿಸುವರು. ಶಾಸಕ ಎಸ್‌.ಎನ್‌.ಚನ್ನಬಸಪ್ಪ ಅಧ್ಯಕ್ಷತೆ ವಹಿಸುವರು. ಸಂಸದರಾದ ಬಿ.ವೈ.ರಾಘವೇಂದ್ರ, ಮೇಲ್ಮನೆ ಸದಸ್ಯರಾದ ಎಸ್.ರುದ್ರೇಗೌಡ, ಡಿ.ಎಸ್‌.ಅರುಣ್‌, ಚೇಂಬರ್‌ ಆಫ್‌ ಕಾಮರ್ಸ್‌ ಅಧ್ಯಕ್ಷ ಎನ್‌.ಗೋಪಿನಾಥ್‌, ನೆಹರೂ ರಸ್ತೆ ವರ್ತಕರ ಸಂಘದ ಅಧ್ಯಕ್ಷ ಬಿ.ಎ.ರಂಗನಾಥ್‌ ಉಪಸ್ಥಿತರಿರುವರು ಎಂದು ಹೇಳಿದರು.ಪತ್ರಿಕಾ ಗೋಷ್ಠಿಯಲ್ಲಿ ರವಿಕಿಶನ್‌ ಇದ್ದರು.

ಇಂದು ಶ್ರೀಗಂಧದ ಕೊರತೆಯಿಂದ ಕರಕುಶಲ ಕರ್ಮಿಗಳು ಸಂಕಷ್ಟದಲ್ಲಿದ್ದಾರೆ. ಸಾಗುವಾನಿ, ಬೀಟೆ ಹಾಗೂ ಶಿವನಿ ಮರದಲ್ಲಿ ಕರಕುಶಲ ವಸ್ತಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಆದರೆ ಶ್ರೀಗಂಧಕ್ಕೆ ಇರುವ ಬೇಡಿಕೆ ಇರುವುದಿಲ್ಲ ಸರಕಾರ ಈ ನಿಟ್ಟಿನಲ್ಲಿ ಕ್ರಮವಹಿಸಬೇಕು. ಯಾವುದೇ ರಾಜ್ಯ ಅಥವಾ ದೇಶದಿಂದ ಶ್ರೀಗಂಧ ತರಿಸಿಕೊಂಡರೆ ಅದಕ್ಕೆ ಕನ್ನಡ ನಾಡಿನ ಶ್ರೀಗಂಧದ ಗುಣಮಟ್ಟ ಇರುವುದಿಲ್ಲ. ಸರಕಾರದ ಕೋಠಿಗಳಲ್ಲಿರುವ ಶ್ರೀಗಂಧವನ್ನು ಕಲಾವಿದರಿಗೆ ನೀಡುವಲ್ಲಿ ಕ್ರಮವಹಿಸಬೇಕು.

ಬಿ.ಆರ್‌.ಸಂತೋಷ್‌

Ad Widget

Related posts

ವೈಫಲ್ಯ ಮುಚ್ಚಿಕೊಳ್ಳಲು ಕಾಂಗ್ರೆಸ್ ಮೇಲೆ ಬಿಜೆಪಿ ಆರೋಪ, ಈಶ್ವರಪ್ಪರ ಹಾಳು ಬಾಯಿಂದ ಶಿವಮೊಗ್ಗದ ಶಾಂತಿ ಕದಡಿದೆ: ಬೇಳೂರು ಆರೋಪ

Malenadu Mirror Desk

ನಮ್ಮೆಲ್ಲರ ಗುರು-ಉದ್ದಾರಕ ಶಿಕ್ಷಕ : ಕೆ.ಎಸ್.ಈಶ್ವರಪ್ಪ , ಸಾಧಕ ಶಿಕ್ಷಕರಿಗೆ ಪ್ರಶಸ್ತಿಪ್ರದಾನ

Malenadu Mirror Desk

ವಿಶೇಷ ಜಿಲ್ಲಾಧಿಕಾರಿ, ಅರಣ್ಯಾಧಿಕಾರಿ ನೇಮಕ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.