ಉದ್ಯಮಿ ಎಸ್ ರುದ್ರೇಗೌಡರ ಜೀವನ ಇಂದಿನ ಯುವಕರಿಗೆ ಸ್ಫೂರ್ತಿಯಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು.
ಶಿವಮೊಗ್ಗದಲ್ಲಿ ಶನಿವಾರ ಆಯೋಜಿಸಿದ್ದ ಉದ್ಯಮಿ ಹಾಗೂ ವಿಧಾನ ಪರಿಷತ್ ಸದಸ್ಯ ರುದ್ರೇಗೌಡರಿಗೆ ಏರ್ಪಡಿಸಿದ್ದ ಅಮೃತಮಯಿ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ರುದ್ರೇಗೌಡರ ಸರಳ ಸಜ್ಜನಿಕೆ, ಗರ್ವ ಇಲ್ಲದೆ ಬದುಕುತ್ತಿದ್ದಾರೆ. ವ್ಯಕ್ತಿ ವಿದ್ಯಾವಂತನಾದರೆ, ಶ್ರೀಮಂತನಾದರೆ ಯಾರೂ ಗುರುತಿಸುವುದಿಲ್ಲ. ಆದರೆ ಅದೇ ವ್ಯಕ್ತಿ ಸಾರ್ವಜನಿಕ ಸೇವೆ ಮಾಡಿದಾಗ ಮಾತ್ರ ಜನ ಗುರುತಿಸುತ್ತಾರೆ. ರುದ್ರೇಗೌಡರಿಗೆ ೭೫ ವರ್ಷವಾಗಿರುವ ಈ ಸಂದರ್ಭ ಅವರನ್ನು ಗೌರವಿಸುತ್ತಿರುವುದು ಸಂತೋಷ. ಈ ಕಾರ್ಯಕ್ರಮದಲ್ಲಿ ಹಲವು ವಿಷಯಗಳ ಮೇಲೆ ಚರ್ಚೆ,ವಿಚಾರಗೋಷ್ಠಿ,ಕೃತಿ ಲೋಕಾರ್ಪಣೆ ಹಮ್ಮಿಕೊಂಡಿರುವುದು ಅರ್ಥಪೂರ್ಣವಾದುದಾಗಿದೆ ಎಂದು ಯಡಿಯೂರಪ್ಪ ಹೇಳಿದರು.
ರುದ್ರೇಗೌಡರ ವಿನೀತ ಭಾವ ಎಲ್ಲರಿಗೂ ಮಾದರಿ. ಸದಾ ಕ್ರಿಯಾಶೀಲವಾಗಿರುವ ಅವರು ಪರರಿಗೆ ಉಪಕಾರಿಯಾಗಿ ಬಾಳಿದವರು. ದೊಡ್ಡ ಉದ್ಯಮಿ ಎಂಬ ಗರ್ವ ಇಲ್ಲದ ಅವರ ಜೀವನ ಮತ್ತು ಬದುಕು ಯುವಜನರಿಗೆ ದಿಕ್ಸೂಚಿ ಎಂದು ಯಡಿಯೂರಪ್ಪ ಹೇಳಿದರು.
ಮಾಜಿ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಮಾತನಾಡಿ, ರುದ್ರೇಗೌಡರು ಶಿವಮೊಗ್ಗದ ಹೆಸರನ್ನು ವಿಶ್ವಕ್ಕೆ ಪರಿಚಯಿಸಿದವರು. ಅವರು ನೂರು ವರುಷ ಬದುಕಿ ಬಾಳಲಿ ಎಂದು ಹಾರೈಸಿದರು.
ಮಾಜಿ ಸಭಾಪತಿ ಬಿ.ಎಲ್.ಶಂಕರ್ ಅಭಿನಂದನಾ ಭಾಷಣ ಮಾಡಿದರು. ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಶಿವರಾಜ್ ಪಾಟೀಲ್ ,ಮಾಜಿ , ಸಂಸದ ಬಿ.ವೈ.ರಾಘವೇಂದ್ರ, ಶಾಸಕರಾದ ಡಿ.ಜಿ.ಶಾಂತನಗೌಡ, ಮಾಜಿ ಶಾಸಕ ಕೆ.ಬಿ.ಅಶೋಕ್‌ನಾಯ್ಕ, ಎಂ.ಬಿ.ಭಾನುಪ್ರಕಾಶ್, ವಡ್ನಾಳ್ ರಾಜಣ್ಣ ಸೇರಿದಂತೆ ಅನೇಕ ಮುಖಂಡರು ಹಾಜರಿದ್ದರು.
previous post