Malenadu Mitra
ರಾಜ್ಯ

ಗುರಿಯಿದ್ದರೆ ಮಾತ್ರ ಯಶಸ್ಸು ಸಾಧ್ಯ :ಎಸ್.ಎನ್.ನಾಗರಾಜ್‌ , ಬಿ.ಆರ್‌.ಪಿ.ರಾಷ್ಟ್ರೀಯ ಪದವಿಪೂರ್ವ ಕಾಲೇಜು ವಾರ್ಷಿಕೋತ್ಸವ

ಶಿವಮೊಗ್ಗ: ಗುರಿಯಿಲ್ಲದ ಬದುಕು ಎಂದೂ ಯಶ ಕಾಣದು ಮತ್ತು ಗುರಿ ಸಾಧಿಸಲು ಶ್ರದ್ಧೆ ಇರಲೇ ಬೇಕು ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿ ಎಸ್.ಎನ್‌ ನಾಗರಾಜ್‌ ಹೇಳಿದರು. ಬಿ.ಆರ್‌.ಪ್ರಾಜೆಕ್ಟ್‌ನ ರಾಷ್ಟ್ರೀಯ ಪದವಿಪೂರ್ವ ಕಾಲೇಜಿನ ವಾರ್ಷಿಕೋತ್ಸವದಲ್ಲಿ ಶನಿವಾರ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು.
ಪರೀಕ್ಷೆ ಎದುರಿಸಲು ಹೇಗೆ ಸಿದ್ಧತೆ ಮಾಡಿಕೊಳ್ಳುತ್ತೇವೆಯೊ ಅದೇ ರೀತಿ ಜೀವನದಲ್ಲಿ ಯಾವುದೇ ಕೆಲಸ ಮಾಡಲು ಸಿದ್ಧತೆ ಅಗತ್ಯವಾಗಿ ಬೇಕಿದೆ. ತಂದೆ ತಾಯಿಗಳು ಮಾಡಿದ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಬೇಕಾದರೆ ಮಕ್ಕಳಿಗೆ ಹೆತ್ತವರ ಶ್ರಮದ ಅರಿವಿರಬೇಕು ಈ ನೆಲೆಯಲ್ಲಿ ಮಕ್ಕಳು ಮುಂದಡಿಯಿಡಬೇಕು. ಪ್ರಮುಖವಾಗಿ ವಿದ್ಯಾರ್ಥಿಗಳು ದಿನಚರಿ ಬರೆಯುವ ಅಭ್ಯಾಸ ಮಾಡಿಕೊಳ್ಳಬೇಕು. ಇದರಿಂದ ವೈಯಕ್ತಿಕ ಜೀವನದಲ್ಲಿ ಸುಧಾರಣೆ ಮಾಡಿಕೊಳ್ಳಬಹುದು ಎಂದು ಅವರು ಹೇಳಿದರು.

ಮುಖ್ಯ ಅತಿಥಿಯಾಗಿದ್ದ ಸಹ್ಯಾದ್ರಿ ವಿಜ್ಞಾನ ಕಾಲೇಜಿನ ವಿಶ್ರಾಂತ ಪ್ರಾಚಾರ್ಯೆ ಡಾ. ಹೆಚ್‌.ಎಂ. ವಾಗ್ದೇವಿ ಮಾತನಾಡಿ, ಮಕ್ಕಳು ಕೀಳರಿಮೆಯಿಂದ ಹೊರಬರಬೇಕು. ಆಗ ಮಾತ್ರ ತಮ್ಮಲ್ಲಿನ ಸುಪ್ತ ಪ್ರತಿಭೆಯನ್ನು ಹೊರಹಾಕಲು ಸಾಧ್ಯ. ಸರಿಯಾದ ಸಂವಹನ ಇದರೆ ತಮ್ಮ ವ್ಯಕ್ತಿತ್ವವನ್ನು ಗಟ್ಟಿಗೊಳಿಸಿಕೊಳ್ಳಬಬಹುದು. ಮಹಾನ್‌ ಸಾಧಕರ ಜೀವನ ಚರಿತ್ರೆ ಮತ್ತು ಸಾಧನೆಯ ಬಗ್ಗೆ ಓದಬೇಕು ಎಂದು ಹೇಳಿದರು.
ಪತ್ರಕಕರ್ತ ನಾಗರಾಜ್‌ ನೇರಿಗೆ ಮಾತನಾಡಿ, ಕಲಾ ಮತ್ತು ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳೂ ಗುಣಮಟ್ಟದ ಶಿಕ್ಷಣ ಪಡೆದರೆ ವಿಪುಲ ಅವಕಾಶಗಳಿವೆ. ಈ ಮಕ್ಕಳಿಗೆ ಯಾವುದೇ ಹಿಂಜರಿಕೆ ಬೇಡ. ಮಾಹಿತಿ ತಂತ್ರಜ್ಞಾನದಲ್ಲಿ ಆಗಿರುವ ಕ್ರಾಂತಿಯನ್ನು ಸಕಾರಾತ್ಮಕ ಸಂಗತಿಗಳಿಗೆ ಬಳಸಿಕೊಳ್ಳಬೇಕೆಂದರು.
ಸಿಂಗನಮನೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂಜುಳಾ ಅವರು ಮಾತನಾಡಿ, ಗ್ರಾಮೀಣ ಭಾಗದಲ್ಲಿರುವ ನ್ಯಾಷನಲ್‌ ಶಾಲೆಯಲ್ಲಿ ಉತ್ತಮ ಶಿಕ್ಷಣ ಸಿಗುತ್ತಿದ್ದು, ಉಪನ್ಯಾಸಕರ ಮಾರ್ಗದರ್ಶನದಲ್ಲಿ ಮಕ್ಕಳು ಪ್ರಗತಿ ಹೊಂದಬೇಕೆಂದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ.ಶ್ರೀಪಾದ ಜಿ.ಹೆಗಡೆ ಅವರು, ಪರೀಕ್ಷೆ ಸಮೀಪ ಇರುವ ಕಾರಣ ವಿದ್ಯಾರ್ಥಿಗಳು ಅಭ್ಯಾಸದತ್ತ ಗಮನ ಹರಿಸಬೇಕು. ಸವಾಲುಗಳನ್ನು ಎದುರಿಸಿ ಮುನ್ನಡೆಯಬೇಕೆಂದು ಹೇಳಿದರು. ಸಂಗೀತ ಶಿಕ್ಷಕ ಪ್ರಹ್ಲಾದ್‌ ದೀಕ್ಷಿತ್‌ ಮಾತನಾಡಿ, ಸಂಗೀತ ಸಾಹಿತ್ಯದಿಂದ ವಿದ್ಯಾರ್ಥಿಗಳಿಗಿರುವ ಪ್ರಯೋಜನ ಕುರಿತು ಮಾತನಾಡಿದರು. ನಂತರ ಹಾಡುಗಳನ್ನು ಹೇಳಿ ವಿದ್ಯಾರ್ಥಿಗಳನ್ನು ರಂಜಿಸಿದರು. ರಾಷ್ಟ್ರೀಯ ಪ್ರೌಢಶಾಲೆ ಮುಖ್ಯಶಿಕ್ಷಕಿ ವಿನುತಾ ಉಪಸ್ಥಿತರಿದ್ದರು. ಬಹುಮಾನ ವಿತರಣೆ ಕಾರ್ಯಕ್ರಮವನ್ನು ಉಪನ್ಯಾಸಕರಾದ ಮಂಗಳಗೌರಿ ಮತ್ತು ನಾಗೇಂದ್ರ ಪ್ರಸಾದ್‌ ಮತ್ತು ಆಶಾರಾಣಿ ನಡೆಸಿಕೊಟ್ಟರು. ಸವಿತಾ ಮತ್ತು ತಂಡದ ಪ್ರಾರ್ಥನೆಯೊಂದುಗೆ ಆರಂಭವಾದ ಕಾರ್ಯಕ್ರಮಕ್ಕೆ ಶಿವರಾಜಿ ಸ್ವಾಗತಿಸಿದರು. ಅನುಷಾ ವಾರ್ಷಿಕ ವರದಿ ವಾಚಿಸಿದರು. ಮೋನಿಷಾ ವಂದಿಸಿದರು. ತೇಜಸ್ವಿನಿ ಮತ್ತು ದಿವ್ಯದರ್ಶಿನಿ ಕಾರ್ಯಕ್ರಮ ನಿರೂಪಿಸಿದರು.ನಂತರ ಮಕ್ಕಳಿಂದ ಮನರಂಜನೆ ಕಾರ್ಯಕ್ರಮ ನಡೆಯಿತು.

Ad Widget

Related posts

ಸಮಾಜವಾದಿ ಚಳವಳಿ ಯಶಸ್ಸಿನಲ್ಲಿ ಮಾಧ್ಯಮ ಪಾತ್ರ ದೊಡ್ಡದು

Malenadu Mirror Desk

ಹಿಟ್ಲರ್‌ನ ಪ್ರಭುತ್ವದಲ್ಲಿ ಧರ್ಮದ ಅಂಧತ್ವದಿಂದ ಜನರ ಹತ್ಯೆಗಳಾದವು: ಬರಹಗಾರ ಎಸ್.ದಿವಾಕರ್ ಅಭಿಪ್ರಾಯ

Malenadu Mirror Desk

24 ಕೋಟಿ ಲಾಟರಿ ಯಾರಿಗೆ ಗೊತ್ತೇನ್ರಿ.. ?

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.