Malenadu Mitra
ರಾಜ್ಯ ಶಿವಮೊಗ್ಗ

ಅಧಿಕಾರ ಸ್ವೀಕರಿಸಿದ  ಕುವೆಂಪು ವಿವಿ ನೂತನ ಕುಲಸಚಿವ ವಿಜಯ್‌ಕುಮಾರ್

ಶಂಕರಘಟ್ಟ, ಫೆ. 05: ಕುವೆಂಪು ವಿಶ್ವವಿದ್ಯಾಲಯದ ಆಡಳಿತ ಕುಲಸಚಿವರಾಗಿ ನೇಮಕಗೊಂಡಿದ್ದ ವಿಜಯ್‌ಕುಮಾರ್ ಹೆಚ್ ಬಿ ಅವರು ಸೋಮವಾರ ಅಧಿಕಾರ ಸ್ವೀಕರಿಸಿದ್ದಾರೆ.

ಕುವೆಂಪು ವಿವಿಗೆ ಹೊಸ ಕುಲಸಚಿವರನ್ನು ನಿಯುಕ್ತಿಗೊಳಿಸಿ ಫೆ. 02ರಂದು ಸರ್ಕಾರ ಆದೇಶ ಹೊರಡಿಸಿತ್ತು. ಸೋಮವಾರ ಬೆಳಿಗ್ಗೆ ಹೊಸ ಕುಲಸಚಿವರಾದ ಕೆಎಎಸ್ ಅಧಿಕಾರಿ ವಿಜಯ್‌ಕುಮಾರ್ ಹೆಚ್ ಬಿ ಕರ್ತವ್ಯ ಆರಂಭಿಸಿದ್ದಾರೆ. ಇವರು ಈ ಹಿಂದೆ ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕರ್ತವ್ಯ ನಿರ್ವಹಿಸಿದ್ದು, 2014ರ ಬ್ಯಾಚ್‌ನಲ್ಲಿ ಕೆಎಎಸ್‌ಗೆ ಆಯ್ಕೆಯಾಗಿದ್ದಾರೆ. 

ಮೂಲತಃ ಚನ್ನಗಿರಿ ತಾಲೂಕಿನವರಾದ ವಿಜಯ್‌ಕುಮಾರ್ 2018ರ ಸಂದರ್ಭದಲ್ಲಿ ಶಿವಮೊಗ್ಗ ತಾಲೂಕಿನ ತಹಶೀಲ್ದಾರ್ ಆಗಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದಾರೆ. ಕುವೆಂಪು ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿಯಾಗಿರುವ ಅವರು ಪ್ರಸ್ತುತ ಕುವೆಂಪು ವಿವಿಗೆ ಆಡಳಿತ ಕುಲಸಚಿವರಾಗಿ ಸೇವೆ ಸಲ್ಲಿಸಲು ನಿಯುಕ್ತಿಗೊಂಡು ಅಧಿಕಾರ ಸ್ವೀಕಾರ ಮಾಡಿದ್ದಾರೆ.

ಈ ಸಂದರ್ಭದಲ್ಲಿ ವಿವಿಯ ಕುಲಪತಿ ಪ್ರೊ. ಎಸ್ ವೆಂಕಟೇಶ್, ಪರೀಕ್ಷಾಂಗ ಕುಲಸಚಿವ ಪ್ರೊ. ಎಂ ಎಸ್ ಗೋಪಿನಾಥ್, ಸಾರ್ವಜನಿಕ ಸಂಪರ್ಕಾಧಿಕಾರಿ ಡಾ. ಸತ್ಯಪ್ರಕಾಶ್ ಎಂ ಆರ್ ಸೇರಿಂದತೆ ವಿವಿಧ ಆಡಳಿತಾಧಿಕಾರಿಗಳು ಹಾಜರಿದ್ದರು.

Ad Widget

Related posts

ಪತ್ರಕರ್ತರು ಸಮಾಜಮುಖಿ ಪಥದಲ್ಲಿ ಸಾಗಬೇಕು: ಗೋಪಾಲ್ ಯಡಗೆರೆ, ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವಾರ್ಷಿಕ ಮಹಾಸಭೆ

Malenadu Mirror Desk

ಕುಮಾರ್ ಬಂಗಾರಪ್ಪ ಮಗಳ ನಿಶ್ಚಿತಾರ್ಥ, ವರ ಯಾರು ಗೊತ್ತಾ ?

Malenadu Mirror Desk

ಕನ್ನಡ ಭಾಷೆ ಶ್ರೀಮಂತವಾದುದು: ಜಿಲ್ಲಾಧಿಕಾರಿ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.