ಶಿವಮೊಗ್ಗ -ತಾಳಗುಪ್ಪ ಇಂಟರ್ ಸಿಟಿ ರೈಲಿಗೆ ಎಮ್ಮೆ ಸಿಲುಕಿದ ಕಾರಣ ಎರಡು ಗಂಟೆಗೂ ಹೆಚ್ಚು ಕಾಲ ರೈಲು ನಿಂತಿದ್ದ ಘಟನೆ ನಡೆದಿದೆ.
ಸೋಮಿನಕೊಪ್ಪ ಬಳಿ ಹಳಿಮೇಲೆ ಬಂದ ಎಮ್ಮೆಗಳು ರೈಲಿನ ಚಕ್ರಕ್ಕೆ ಸಿಲುಕಿಕೊಂಡಿದ್ದರಿಂದ ರೈಲನ್ನು ಚಾಲಕ ನಿಲ್ಲಿಸಿದ ಎನ್ನಲಾಗಿದೆ. ರೈಲ್ವೆ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ಆರಂಭಿದ್ದಾರೆ.