ಶಿವಮೊಗ್ಗ:
ಹಣಗರೆಕಟ್ಟೆಯ ಖಾಸಗಿ ವಸತಿ ಗೃಹದ ರೂಂವೊಂದರಲ್ಲಿ ಮಹಿಳಾ ಪ್ರವಾಸಿಯೊಬ್ಬರ ಮೃತದೇಹವೊಂದು ಪತ್ತೆಯಾಗಿದೆ.
ಪ್ರಸಿದ್ಧ ಹಜರತ್ ಸೈಯದ್ ಸಾದತ್ ಭೂತರಾಯ ಚೌಡೇಶ್ವರಿ ದೇವಾಲಯದ ಹಿಂಭಾಗದ ಖಾಸಗಿ ತಂಗುದಾಣದ ವಸತಿಗೃಹವೊಂದರಲ್ಲಿ 30 ವರ್ಷದ ಮಹಿಳೆಯ ಶವವೊಂದು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಎರಡು ಮೂರು ದಿನಗಳ ಹಿಂದೆ ಹೊರಗಡೆಯಿಂದ ಬಂದ ಮಹಿಳೆ ವಸತಿ ಗೃಹದಲ್ಲಿ ತಂಗಿದ್ದಳು. ಈಕೆಯ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು. ಮಹಿಳೆಯನ್ನ ಕೊಲೆ ಮಾಡಿರುವುದಾಗಿ ಹೇಳಲಾಗುತ್ತಿದೆ.
ಮಾಳೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಎಸ್ಪಿ ಮಿಥುನ್ ಕುಮಾರ್, ಹಣಗೆರೆಕಟ್ಟೆಯಲ್ಲಿ ಶವ ಪತ್ತೆಯಾಗಿದೆ. ಸುಮಾರು 30 ವರ್ಷದ ಮಹಿಳಾ ಪ್ರವಾಸಿಯಾಗಿದ್ದಾಳೆ. ಹೆಸರು ಮತ್ತು ಕೊಲೆಯಾಗಿರುವ ಬಗ್ಗೆ ಮಾಹಿತಿ ಕಲೆಹಾಕಲಾಗುತ್ತಿದೆ ಎಂದು ತಿಳಿಸಿದ್ದಾರೆ.