ಶಿವಮೊಗ್ಗ: ತುಂಗಾ ಜಲಾಶಯದ ೨೨ ಗೇಟ್‌ಗಳಲ್ಲಿ ಒಂದು ಗೇಟ್‌ನ ರೂಪ್ ಹಾಳಾಗಿದ್ದು, ಬೇರೆ ಗೇಟುಗಳು ಸರಿಯಾಗಿದೆಯೇ ಎಂಬುದನ್ನು ತಜ್ಞರು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಜೆಡಿಎಸ್ ರಾಜ್ಯ ಉಪಾಧ್ಯಕ್ಷರಾದ ಹಾಗೂ ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್ ಒತ್ತಾಯಿಸಿದರು
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 1952ರಲ್ಲಿ ಆರಂಭವಾದ ಜಲಾಶಯ ೨೦೦೯ರಲ್ಲಿ ಜಲಾಶಯವನ್ನು ಎತ್ತರಿಸಿ ಹೆಚ್ಚಿನ ನೀರು ಸಂಗ್ರಹ ಮಾಡಲಾಯಿತು. ೩.೨೪ ಟಿಎಂಸಿ ನೀರು ಸಂಗ್ರಹಿಸಲಾಗುತ್ತಿದ್ದು, ಅದೇ ರೀತಿ ಭದ್ರಾ ಜಲಾಶಯದಲ್ಲಿ ೭೧.೨೫ ಟಿಎಂಸಿ ನೀರು ಸಂಗ್ರಹವಾಗುತ್ತಿದೆ ಎಂದರು.
೧೯೫೨ರಲ್ಲಿ ಆರಂಭವಾದ ತುಂಗಾ ಜಲಾಶಯದಲ್ಲಿ ಹೂಳು ಮತ್ತು ಮರಳನ್ನು ತೆಗೆದು ೨೦೦೯ರಲ್ಲಿ ಅದನ್ನು ತೆಗೆಯದೇ ಪಕ್ಕದಲ್ಲಿಯೇ ಮತ್ತೊಂದು ಎತ್ತರದ ಹಾಗೂ ೨೨ಗೇಟ್‌ವುಳ್ಳ ಜಲಾಶಯ ನಿರ್ಮಿಸಲಾಗಿತ್ತು. ಈಗ ಜಲಾಶಯದ ಕೆಳಗೆ ಸಾಕಷ್ಟು ಹೂಳು ಮತ್ತು ಮರಳು ಸಂಗ್ರಹವಾಗಿರುವುದರಿಂದ ನೀರಿನ ಸಂಗ್ರಹ ಕಡಿಮೆಯಾಗಿದೆ. ಕೂಡಲೇ ಜಿಲ್ಲಾ ಉಸ್ತುವಾರಿ ಸಚಿವರು ನೀರಾವರಿ ತಜ್ಞರು ಹಾಗೂ ಅಧಿಕಾರಿಗಳೊಂದಿಗೆ ಚರ್ಚಿಸಿ ಹೂಳು ಮತ್ತು ಮರಳು ತೆಗೆಸಿ ಹೆಚ್ಚು ನೀರು ಸಂಗ್ರಹವಾಗಲು ಗಮನಹರಿಸಬೇಕು ಎಂದು ಆಗ್ರಹಿಸಿದರು.
ಹೊಸಪೇಟೆಯ ಟಿವಿ ಡ್ಯಾಂನ ಒಂದು ಗೇಟ್ ಕಳಚಿ ಬಿದ್ದು, ಅಪಾರ ಪ್ರಮಾಣದ ನೀರು ಪೋಲಾಗುತ್ತಿದೆ. ಇದನ್ನು ತಪ್ಪಿಸಲು ಕೊಚ್ಚಿ ಹೋಗಿರುವ ೧೯ನೇ ಗೇಟ್ ಸ್ಥಳದಲ್ಲಿ ತಾತ್ಕಾಲಿಕ ಗೇಟ್ ಅಳವಡಿಕೆ ಕಾರ್ಯ ನಡೆಯತ್ತಿದೆ. ಅದೇ ರೀತಿ ಭದ್ರಾ ಜಲಾಶಯದಲ್ಲೂ ನೀರು ಸೋರಿಗೆಯಾಗುತ್ತಿದೆ. ಇದರ ಬಗ್ಗೆಯೂ ಸಹ ಸರ್ಕಾರ ಕೂಡಲೇ ಗಮನಹರಿಸಬೇಕು ಎಂದರು.
ಚುನಾವಣೆ ನಡೆಸಿ:
ಮಹಾನಗರ ಪಾಲಿಕೆಗೆ ಚುನಾವಣೆಯಾಗದೇ ೮ ತಿಂಗಳಾಗಿದೆ. ಚುನಾಯಿತ ಪ್ರತಿನಿಧಿಗಳಿಲ್ಲದೆ. ಸಾರ್ವಜನಿಕರ ಸಮಸ್ಯೆಗಳು ಬಗೆಹರಿಯುತ್ತಿಲ್ಲ. ೨೪x೭ ಕುಡಿಯುವ ನೀರು ಸಂಪರ್ಕ ವ್ಯವಸ್ಥೆ ನಗರದ ಹಲವರು ಬಡಾವಣೆಗಳಲ್ಲಿ ಇದ್ದರೂ ಸರಿಯಾಗಿ ನೀರು ಸರಬರಾಜು ಆಗುತ್ತಿಲ್ಲ. ಅನೇಕ ಕಡೆ ಹಳೇ ವ್ಯವಸ್ಥೆಯೇ ಮುಂದುವರಿದಿದೆ. ಹೊಸ ವ್ಯವಸ್ಥೆಯಲ್ಲಿ ಎಲ್ಲವೂ ಸರಿಯಾಗಿದ್ದರೆ ಮಾತ್ರ ನೀರು ಸರಬರಾಜು ಮಾಡಿ ಇಲ್ಲದಿದ್ದರೆ ಹಳೆಯ ವ್ಯವಸ್ತೆಯನ್ನೇ ಮುದುವರಿಸಿ ಮತ್ತು ಕುಡಿಯುವ ನೀರಿನ ಪೈಪ್‌ಗೆ ಕೊಳಚೆ ನೀರು ಸೇರದಂತೆ ನೋಡಿಕೊಳ್ಳಬೇಕಾದದ್ದು ಅಧಿಕಾರಿಗಳ ಜವಾಬ್ದಾರಿಯಾಗಿದೆ. ಇದರಿಂದ ನಗರದಲ್ಲಿ ಜಾಂಡೀಸ್‌ನಂತಹ ಕಾಯಿಲೆಗಳು ಕೂಡ ಹೆಚ್ಚಾಗುತ್ತಿವೆ ಎಂದರು.
ಸರ್ಕಾರ ಮಹಾನಗರ ಪಾಲಿಕೆಗೆ ಚುನಾವಣೆ ನಡೆಸಲು ಹಿಂದೇಟು ಹಾಕುತ್ತಿದೆ. ಸರ್ಕಾರ ಜಿಲ್ಲಾಧಿಕಾರಿಗಳಿಗೆ ೪ ಬಾರಿ ಪತ್ರ ಬರೆದಿದ್ದು ಅದೇ ರೀತಿ ಜಿಲ್ಲಾಧಿಕಾರಿಗಳು ಸಹ ಪಾಲಿಕೆ ಆಯುಕ್ತರಿಗೆ ಪತ್ರ ಬರೆದಿದ್ದಾರೆ. ಆದರೆ ಪಾಲಿಕೆ ಆಯುಕ್ತರಿಂದ ಯಾವುದೇ ಉತ್ತರ ಬಂದಿಲ್ಲ. ಚುನಾವಣಾ ಆಯೋಗವು ಸಹ ಪಾಲಿಕೆ ಚುನಾವಣೆ ನಡೆಸಲು ಮುಂದಾಗಿರುವುದಕ್ಕೆ ಸ್ವಾಗತಿಸಿದ ಅವರು, ಶೀಘ್ರವೇ ಚುನಾವಣೆ ಜಾರಿಯಾಗಬೇಕು. ಜನರ ತೊಂದರೆ ತಪ್ಪಿಸಬೇಕು ಎಂದರು. ಪಾಲಿಕೆಯ ವಾರ್ಡ್‌ಗಳ ಸಂಖ್ಯೆಯನ್ನು ನಗರದ ಸುತ್ತಮುತ್ತಲ ಗ್ರಾಮಗಳನ್ನು ಸೇರಿಸಿ ಹೆಚ್ಚಿಸಬೇಕಾಗುತ್ತದೆ. ಆದರೆ ಆ ಗ್ರಾಮಗಳ ಪಂಚಾಯಿತಿಯ ಅವಧಿ ಇನ್ನೂ ಒಂದು ವರ್ಷ ಇರುವುದರಿಂದ ಇನ್ನು ಒಂದು ವರ್ಷ ಪಾಲಿಕೆಗೆ ಚುನಾವಣೆ ಆಗುವುದು ವಿಳಂಬವಾಗುವ ಸಂಭವವಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್ ನಗರಾಧ್ಯಕ್ಷ ದೀಪಕ್‌ಸಿಂಗ್, ಪ್ರಮುಖರಾದ ಸಿದ್ದಪ್ಪ, ಅಬ್ದುಲ್ ವಾಜಿದ್, ನರಸಿಂಹ ಗಂಧದಮನೆ, ಹೆಚ್.ಎಂ.ಸಂಗಯ್ಯ ಗೋಪಿ, ಜಯಣ್ಣ, ದಯಾನಂದ್, ಸಂಜಯ್ ಕಶ್ಯಪ್, ನಿಹಾಲ್ ಇನ್ನಿತರರು ಇದ್ದರು.