ಶಿವಮೊಗ್ಗ ತಾಲೂಕು ಪುರದಾಳು ಗ್ರಾಮಪಂಚಾಯಿತಿ ಆಲದೇವರ ಹೊಸೂರಿನಲ್ಲಿ ಕಾಡಾನೆ ತುಳಿದು ಹನುಮಂತ (50) ಸಾವುಗೀಡಾಗಿದ್ದಾರೆ.
ಶನಿವಾರ ಸಂಜೆ 6.30 ರ ಸಮಯದಲ್ಲಿ ಪುರದಾಳು ಗ್ರಾಮದಿಂದ ಆಲದೇವರ ಹೊಸೂರಿಗೆ ಬರುತಿದ್ದ ಹನುಮಂತ ಅವರಿಗೆ ಆನೆ ಎದುರಾಗಿದೆ. ತಕ್ಷಣ ಬೆನ್ನತ್ತಿದ ಆನೆ ಕ್ಷಣಮಾತಗರದಲ್ಲಿ ತುಳಿದ ಸಾಯಿಸಿದೆ.
ಹಾವೇರಿ ಮೂಲದ ಹನುಮಂತಪ್ಪ ಕುಟುಂಬ ಶ್ರೀಧರ್ ಎನ್ನುವವರ ತೋಟದಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತಿದ್ದರು. ಸ್ಥಳಕ್ಕೆ ಅರಣ್ಯ ಅಧಿಕಾರಿಗಳು ಭೇಟಿ ನೀಡಿದ್ದರು.
ಪುರದಾಳು ಗ್ರಾಮದಲ್ಲಿ ಇತ್ತೀಚಿನ ವರ್ಷಗಳಲ್ಲಿ ಕಾಡಾನೆ ಹಾವಳಿ ಹೆಚ್ಚಾಗಿದ್ದು,ರೈತರ ಬೆಳೆ ಹಾನಿ ನಿರಂತರವಾಗಿದೆ. ಆಲದೇವರ ಹೊಸೂರು ಸಮೀಪ ಕಾಡಾನೆಗಳು ಮತ್ತ್ತೆ ಮತ್ತೆ ದಾಳಿ ಮಾಡುತ್ತಿದ್ದು ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ.