Malenadu Mitra
Uncategorized

ಬೆಳ್ಳಂಬೆಳಿಗ್ಗೆ ಚಾಲಕನ ನಿಯಂತ್ರಣ ತಪ್ಪಿ ಸಿಟಿ ಬಸ್ ಪಲ್ಟಿ: ಹಲವರಿಗೆ ಗಾಯ

ಶಿವಮೊಗ್ಗ: ಚಾಲಕನ ನಿಯಂತ್ರಣ ತಪ್ಪಿ ಸಿಟಿ ಬಸ್ ಪಲ್ಪಿಯಾಗಿ, ಹಲವರು ಗಾಯಗೊಂಡ ಘಟನೆ ಶಿವಮೊಗ್ಗದ ವಿನೋಬ ನಗರದಲ್ಲಿ ನಡೆದಿದೆ.
ನಗರದ ಬೊಮ್ಮನಕಟ್ಟೆ ರೈಲ್ವೇ ಗೇಟ್ ಸಮೀಪದ ಮುಖ್ಯ ರಸ್ತೆಯಲ್ಲಿ ಘಟನೆ ನಡೆದಿದ್ದು, ಎರಡು ಮಕ್ಕಳು ಸೇರಿದಂತೆ 6 ಜನರಿಗೆ ಗಾಯಗೊಂಡಿದ್ದಾರೆ. ಬಸ್ ಚಾಲಕ ನಿರ್ಲಕ್ಷ್ಯದಿಂದ ವೇಗವಾಗಿ ಬಸ್ ಚಲಾಯಿಸಿ, ಹಂಪ್ ಹಾರಿಸಿದ ಪರಿಣಾಮ ಸ್ಟೇರಿಂಗ್ ಕಟ್ ಆಗಿ, ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಬಳಿಕ ಕಬ್ಬಿಣದ ಫೆನ್ಸಿಂಗ್ ದಾಟಿ, ಚರಂಡಿಗೆ ಬಸ್ ಬಿದ್ದಿದೆ.
ಇಬ್ಬರಿಗೆ ತೀವ್ರ ಗಾಯ- ಗಾಯಾಳುಗಳು ಮೆಗ್ಗಾನ್ ಗೆ ಶಿಫ್ಟ್:


ಬೊಮ್ಮನಕಟ್ಟೆಯಿಂದ ಗೋಪಾಳಕ್ಕೆ ಹೊರಟಿದ್ದ ಸಿಟಿ ಬಸ್ ನಲ್ಲಿ ಸುಮಾರು 20 ಜನ ಪ್ರಯಾಣಿಕರಿದ್ದರು. ಘಟನೆಯಲ್ಲಿ ಇಬ್ಬರಿಗೆ ತೀವ್ರ ಗಾಯವಾಗಿದ್ದು, ಎಲ್ಲಾ 6 ಜನ ಗಾಯಾಳುಗಳನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ವಿನೋಬನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Ad Widget

Related posts

ಸರ್ಕ್ಯೂಟ್ ಹೌಸ್ ಸರ್ಕಲ್ ನಲ್ಲಿ ಭೀಕರ ಅಪಘಾತ- ಇಬ್ಬರು ಯುವಕರು ಸಾವು

Malenadu Mirror Desk

25 ಸಾವಿರ ದಿನಸಿ ಕಿಟ್ ವಿತರಣೆ: ಸಂಸದ ರಾಘವೇಂದ್ರ

Malenadu Mirror Desk

ಎಎನ್ಎಫ್ ಕಾರ್ಯಾಚರಣೆ – ನಕ್ಸಲ್ ಮುಖಂಡ ವಿಕ್ರಂ ಗೌಡ ಹತ್ಯೆ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.