Malenadu Mitra
ಶಿವಮೊಗ್ಗ

ದೀಪಾವಳಿಯ ವಿಶೇಷ : ಮುಸ್ಲಿಂ ಯುವಕನಿಂದ ಲಕ್ಷ್ಮೀ ಪೂಜೆ

ಶಿವಮೊಗ್ಗ: ದೀಪಾವಳಿಯ ವಿಶೇಷವೆಂಬಂತೆ ಮುಸ್ಲಿಂ ಯುವಕ ಹಾಗೂ ಆತನ ಸ್ನೇಹಿತರು ಹಿಂದೂ ಸಂಪ್ರದಾಯದಂತೆ ತನ್ನ ಮೊಬೈಲ್ ಶಾಪ್ ನಲ್ಲಿ ಲಕ್ಷ್ಮಿ ಪೂಜೆ ನೆರವೇರಿಸಿದ್ದಾರೆ.
ತನ್ನು ಅರಸಾಳು ಎಂಬ ಯುವಕ ಹೊಸನಗರ ತಾಲ್ಲೂಕಿನ ರಿಪ್ಪನ್ ಪೇಟೆಯ ವಿನಾಯಕ ವೃತ್ತದಲ್ಲಿರುವ ತನ್ನ ಮೊಬೈಲ್ (‌ತನ್ವಿ ಮೊಬೈಲ್ ವರ್ಲ್ಡ್)‌ ಅಂಗಡಿಯಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ಹಿಂದೂ ಸಂಪ್ರದಾಯದಂತೆ ಕಳಸ ಇರಿಸಿ, ಹಣ್ಣು-ಕಾಯಿ ನೈವೇದ್ಯ ಅರ್ಪಿಸುವ ಮೂಲಕ ಪುರೋಹಿತರಾದ ಕೋಡೂರು ಪ್ರಮೋದ ಜೋಯಿಸ್‌ ಅವರಿಂದ ಪೂಜೆ ನೆರವೇರಿಸಿದ್ದಾರೆ.

“ಹಬ್ಬಗಳು ಸಂಬಂಧಗಳನ್ನು ಗಟ್ಟಿಗೊಳಸಿಬೇಕು. ಜಾತಿ- ಧರ್ಮ ನೆಪ ಮಾತ್ರ. ಎಲ್ಲರೂ ಒಗ್ಗಟ್ಟಿನಿಂದ ಕೂಡಿ ಹಬ್ಬಗಳನ್ನು ಆಚರಿಸೋಣ. ಸೌಹಾರ್ಧತೆ ಸಾರೋಣ.”                                                                                   – ತನ್ನು ಅರಸಾಳು,                                        ತನ್ವಿ ಮೊಬೈಲ್ ಶಾಪ್ ಮಾಲೀಕರು.

“ನಾಡಿನೆಲ್ಲೆಡೆ ಲಕ್ಷ್ಮಿ‌ ಪೂಜೆ ಹಾಗೂ ದೀಪಾವಳಿ ಸಂಭ್ರಮ ಮನೆ ಮಾಡಿದೆ. ಸೌಹಾರ್ದತೆ ಕಾರಣಕ್ಕೆ ಹಿಂದೂಗಳ ಹಬ್ಬವನ್ನು ಮುಸ್ಲಿಂ ಬಾಂಧವರು ಹಾಗೂ ಮುಸ್ಲಿಂರ ಹಬ್ಬವನ್ನು ಹಿಂದೂ ಧರ್ಮದವರು ಆಚರಿಸುವುದನ್ನು ಅಲ್ಲಲ್ಲಿ ನೋಡಿದ್ದೇವೆ. ಅದೇ ಮಾದರಿಯಲ್ಲಿ ಇಲ್ಲಿ ಲಕ್ಷ್ಮಿ ಪೂಜೆ ನಡೆಸಲಾಗಿದೆ. ತನ್ನು ಅವರು ಸತತ 5 ವರ್ಷದಿಂದ ಇದೇ ಮಾದರಿಯಲ್ಲಿ ಲಕ್ಷ್ಮೀ ಪೂಜೆಯನ್ನು ನಡೆಸಿಕೊಂಡು ಬಂದಿದ್ದಾರೆ.

ಇನ್ನು ಅದೇ ರೀತಿ ಇಲ್ಲಿ ಮುಸ್ಲಿಂ ಸಂಪ್ರದಾಯ ದಾಯದಂತೆ ಕೂಡ ಧರ್ಮಗುರುಗಳಿಂದ ಪೂಜೆ ನೆರವೇರಿಸಲಾಯಿತು.

Ad Widget

Related posts

ಕೋವಿಡ್ ನಡುವೆ ಸಂಭ್ರಮದ ಕ್ರಿಸ್‌ಮಸ್

Malenadu Mirror Desk

ದೇವಸ್ಥಾನ ಸ್ವತಂತ್ರವಾದರೆ ಡಿಕೆಶಿಗೆ ಏಕೆ ಉರಿ: ಈಶ್ವರಪ್ಪ ಕಿಡಿ

Malenadu Mirror Desk

ಶಿವಮೊಗ್ಗದಲ್ಲಿ ಕೊರೊನ ಸೋಂಕಿತರ ಸಂಖ್ಯೆ ಹೆಚ್ಚಳ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.